More

  ಸತತ ಪ್ರಯತ್ನದಿಂದ ಉತ್ತಮ ಫಲಿತಾಂಶ

  ಶಿಗ್ಗಾಂವಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ತೃತೀಯ ಸ್ಥಾನ ಹಾಗೂ ಪಟ್ಟಣದ ಶ್ರೀಮಂತ ಬಸವಂತರಾವ್ ಬುಳ್ಳಪ್ಪ ಮಾಮಲೇದೇಸಾಯಿ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಅನಿತಾ ಹುತ್ತನಗೌಡ್ರ ಅವರನ್ನು ತಾಲೂಕಿನ ಹಿರೇಮಲ್ಲೂರು ಗ್ರಾಮದ ಅವರ ನಿವಾಸದಲ್ಲಿ ಸೋಮವಾರ ತಾಲೂಕು ಶಿಕ್ಷಣ ಸಂಸ್ಥೆಯಿಂದ ಸನ್ಮಾನಿಸಲಾಯಿತು.

  ತಾಲೂಕು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ದತ್ತಣ್ಣ ವೆರ್ಣೇಕರ್ ಮಾತನಾಡಿ, ಸತತ ಪರಿಶ್ರಮದ ಜತೆಗೆ ಆತ್ಮಸ್ಥೈರ್ಯದೊಂದಿಗೆ ಪರೀಕ್ಷೆ ಎದುರಿಸಿದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸತತ ಓದಿನಿಂದ ಏನನ್ನಾದರೂ ಸಾಧನೆ ಮಾಡಬೇಕೆಂಬ ಛಲದೊಂದಿಗೆ ಉತ್ತಮ ಸಾಧನೆಗೈದು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ ಎಂದು ಹೇಳಿದರು.

  ತಾಲೂಕು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಎಸ್.ಪಿ. ಜೋಶಿ, ಉಪಪ್ರಾಚಾರ್ಯ ಕೆ.ಬಿ. ಚೆನ್ನಪ್ಪ, ನಿವೃತ್ತ ಉಪಪ್ರಾಚಾರ್ಯ ಜಿ.ಎನ್. ಎಲಿಗಾರ, ಸುನೀಲಕುಮಾರ ಕಡೆಮನಿ, ಆರ್.ಎಸ್. ಹಳ್ಯಾಳ, ಶಿದ್ದನಗೌಡ ಹುತ್ತನಗೌಡ್ರ ಇದ್ದರು.

  ಶಾಲೆಯ ಶಿಕ್ಷಕರ ಮಾರ್ಗದರ್ಶನದ ಜತೆಗೆ ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆಯಲ್ಲಿ ಬರುವಂತಹ ಪ್ರಶ್ನೆಪತ್ರಿಕೆ ಸತತ ಅಧ್ಯಯನ ಮಾಡಿದ್ದು ಯಶಸ್ಸಿಗೆ ಸಹಕಾರಿಯಾಗಿದೆ. ಜತೆಗೆ ಪಾಲಕರ ಪ್ರೋತ್ಸಾಹ ಮರೆಯುವಂತಿಲ್ಲ.
  i ಅನಿತಾ ಹುತ್ತನಗೌಡ್ರ, ವಿದ್ಯಾರ್ಥಿನಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts