ಬಿಳಿಗಿರಿರಂಗನಬೆಟ್ಟದಲ್ಲಿ ಉತ್ತಮ ಮಳೆ

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ಮಳೆ ಸುರಿಯಿತು.

ಮೂರು ದಿನಗಳಿಂದಲೂ ಬೆಟ್ಟದಲ್ಲಿ ಮಳೆಯಾಗುತ್ತಿದೆ. ತಾಪಮಾನ ತಗ್ಗಿದೆ. ಕಾಡಿನಲ್ಲಿರುವ ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹಗೊಂಡಿದ್ದ ಕಾಡುಪ್ರಾಣಿಗಳಿಗೂ ಇದರಿಂದ ಅನುಕೂಲವಾಗಿದೆ. ಅಲ್ಲದೆ ಸೋಲಿಗರು ತಮ್ಮ ಜಮೀನುಗಳಲ್ಲಿ ರಾಗಿ, ಮುಸುಕಿನ ಜೋಳ ಸೇರಿದಂತೆ ಇತರೆ ಬೆಳೆಗಳನ್ನು ಬಿತ್ತಿದ್ದು, ಇದರಿಂದ ಇವರಿಗೂ ಅನುಕೂಲವಾಗಿದೆ.

ಬಿಳಿಗಿರಿರಂಗನಬೆಟ್ಟದಲ್ಲಿ ಮದ್ಯಪಾನ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದ ವೇಳೆ ಮಳೆ ಸುರಿದಿದ್ದರಿಂದ ಪ್ರತಿಭಟನಾಕಾರರು ಕೆಲಕಾಲ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಮಳೆ ತಗ್ಗಿದ ನಂತರ ಪ್ರತಿಭಟನೆ ಮುಂದುವರಿಸಲಾಯಿತು.

Leave a Reply

Your email address will not be published. Required fields are marked *