25.8 C
Bangalore
Monday, December 9, 2019

ರಾಜ್ಯದ ದಾಳಿಗೆ ಮಹಾ ಕುಸಿತ

Latest News

ಹುಣಸೂರಿನಲ್ಲಿ ಹಳ್ಳಿಹಕ್ಕಿಗೆ ಮನೆ ಗೂಡಿನ ದಾರಿ ತೋರಿದ ಎಚ್.ಪಿ.ಮಂಜುನಾಥ್

ಹುಣಸೂರು: ಹಳ್ಳಿಹಕ್ಕಿ ಎಚ್​​.ವಿಶ್ವನಾಥ್ ಕಾಂಗ್ರೆಸ್​ ಅಭ್ಯರ್ಥಿ ಎಚ್​​.ಪಿ ಮಂಜುನಾಥ್ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಎಚ್​.ಪಿ ಮಂಜುನಾಥ್, ಜಿಜೆಪಿಯ ಎಚ್​....

ಉಪ ಚುನಾವಣೆ ಗೆಲುವಿಗೆ ವಿಜಯೋತ್ಸವ – ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ, ಸಿಹಿ ವಿತರಣೆ ಬಣ್ಣ ಎರಚಿ ಸಂಭ್ರಮ

ಬಳ್ಳಾರಿ: ವಿಜಯನಗರ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆನಂದ ಸಿಂಗ್ 30125 ಮತಗಳ ಅಂತರದಿಂದ ಗೆಲ್ಲುತ್ತಿದ್ದಂತೆ ನಗರದ ಸರ್ಕಾರಿ ಪಾಲಿಟೆಕ್ನಿಕ್‌ನ ಮತ...

ಲಸಿಕೆ ಹಾಕಿಸಿ ಕಾಯಿಲೆಗಳಿಂದ ಮಕ್ಕಳ ರಕ್ಷಿಸಿ

ನಾಯಕನಹಟ್ಟಿ: ಡಿಪಿಟಿ, ಡಿಟಿ ಲಸಿಕಾ ಅಭಿಯಾನ ಡಿ.11ರಿಂದ ಆರಂಭಗೊಳ್ಳಲಿದೆ ಎಂದು ಹಿರಿಯ ಆರೋಗ್ಯ ಮೇಲ್ವಿಚಾರಕ ಶೇಷಾದ್ರಿ ತಿಳಿಸಿದರು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ...

ಬೈ ಎಲೆಕ್ಷನ್​ ರಿಸಲ್ಟ್​ | ಜಿದ್ದಾಜಿದ್ದಿನ ಯಶ ಬಿಜೆಪಿ ಪಾಲು; ರೆಬೆಲ್​ ಶಾಸಕ ಸೋಮಶೇಖರ್​ಗೆ ಒಲಿದ ಯಶವಂತಪುರ

ಬೆಂಗಳೂರು: ಯಶವಂತಪುರ ಕ್ಷೇತ್ರದಲ್ಲಿ ಮತ ಎಣಿಕೆಯ ಕೊನೆಯವರೆಗೂ ಕುತೂಹಲ ಉಳಿಸಿಕೊಂಡು ರಾಜ್ಯದ ಗಮನ ಸೆಳೆದಿತ್ತು. ಕೊನೆಗೆ ಬಿಜೆಪಿಯ ಎಸ್​.ಟಿ. ಸೋಮಶೇಖರ್​ 1,44,722 ಮತ ಪಡೆದು ಜಯಶಾಲಿಯಾಗಿದ್ದಾರೆ. ಚುನಾವಣೆ ಘೋಷಣೆಯಾದಗಿನಿಂದಲೂ...

ಕೊಟ್ಟೂರಲ್ಲಿ ಕ್ಲೀನ್ ರಸ್ತೆಗೆ ಮುಂದಾದ ಪಪಂ

ಕೊಟ್ಟೂರು: ಧೂಳು ಮುಕ್ತ ಪಟ್ಟಣವನ್ನಾಗಿಸಲು ಸ್ಥಳೀಯ ಪಪಂ ನಿತ್ಯ ರಸ್ತೆ ಬದಿಯ ನುಸಿ ಮಣ್ಣನ್ನು ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸುತ್ತಿದೆ. ಮರಿಕೊಟ್ಟೂರೇಶ್ವರ ದೇವಸ್ಥಾನದಿಂದ...

|ಅವಿನಾಶ್ ಜೈನಹಳ್ಳಿ

ಮೈಸೂರು: ದಿನದ ಆರಂಭದಲ್ಲಿ ಬೌಲಿಂಗ್​ಗೆ ನೆರವಾಗುತ್ತಿದ್ದ ಪಿಚ್​ನ ಲಾಭ ಗಿಟ್ಟಿಸಿಕೊಂಡ ಆತಿಥೇಯ ಕರ್ನಾಟಕದ ಬೌಲರ್​ಗಳು ರಣಜಿ ಟ್ರೋಫಿಯ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಮೊದಲ ದಿನದ ಗೌರವ ಸಂಪಾದಿಸಿದರು. ಪ್ರವಾಸಿ ಮಹಾರಾಷ್ಟ್ರ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಕರ್ನಾಟಕ ಮೊದಲ ದಿನದಾಟದಲ್ಲೇ ಆರಂಭಿಕ ಆಘಾತದ ನಡುವೆಯೂ ಇನಿಂಗ್ಸ್ ಮುನ್ನಡೆಯ ಹಾದಿಯಲ್ಲಿದೆ. ಮೊದಲ ದಿನವೇ ಒಟ್ಟು 13 ವಿಕೆಟ್​ಗಳು ಉರುಳಿದವು.

ಗ್ಲೇಡ್ಸ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಮಹಾರಾಷ್ಟ್ರ ಬ್ಯಾಟಿಂಗ್ ಆಯ್ಕೆಮಾಡಿಕೊಂಡಿತು. ಜೆ.ಸುಚಿತ್ (26ಕ್ಕೆ 4), ನಾಯಕ ವಿನಯ್ ಕುಮಾರ್ (19ಕ್ಕೆ 2) ಹಾಗೂ ರೋನಿತ್ ಮೋರೆ (16ಕ್ಕೆ 2) ದಾಳಿಗೆ ಕಂಗಾಲಾದ ಮಹಾರಾಷ್ಟ್ರ 39.4 ಓವರ್​ಗಳಲ್ಲಿ ಕೇವಲ 113 ರನ್​ಗೆ ಸರ್ವಪತನ ಕಂಡಿತು. ಬಳಿಕ ಮೊದಲ ದಿನದಲ್ಲೇ 40 ಓವರ್​ಗಳನ್ನು ಎದುರಿಸಿದ ಕರ್ನಾಟಕ ಕೂಡ ಆರಂಭಿಕ ವೈಫಲ್ಯದ ನಡುವೆಯೂ ದಿನದಾಟದ ಅಂತ್ಯಕ್ಕೆ 3 ವಿಕೆಟ್​ಗೆ 70 ರನ್​ಗಳಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು 44 ರನ್​ಗಳ ಅವಶ್ಯಕತೆ ಇದೆ. ಆರಂಭಿಕ ಆಟಗಾರ ಡಿ.ನಿಶ್ಚಲ್(32 ರನ್, 101 ಎಸೆತ, 3 ಬೌಂಡರಿ), ಜೆ.ಸುಚಿತ್(2) ಜೋಡಿ ಬ್ಯಾಟಿಂಗ್ ಕಾಯ್ದುಕೊಂಡಿದೆ.

ಪಡಿಕಲ್ ವೈಫಲ್ಯ: ಕರ್ನಾಟಕದ ಆರಂಭ ಕೂಡ ಉತ್ತಮವಾಗಿರಲಿಲ್ಲ. ಪದಾರ್ಪಣೆ ಪಂದ್ಯವಾಡಿದ 18 ವರ್ಷದ ದೇವದತ್ತ ಪಡಿಕಲ್ (7) ವೈಫಲ್ಯ ಅನುಭವಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಪಡಿಕಲ್ ಅನೂಪ್ ಸಂಕ್ಲೇಚಾ ಎಸೆತದಲ್ಲಿ ಎಲ್​ಬಿ ಬಲೆಗೆ ಬಲಿಯಾದರು. ಮೊದಲ ವಿಕೆಟ್​ಗೆ ನಿಶ್ಚಲ್ ಜತೆಗೂಡಿ 12 ರನ್ ಜತೆಯಾಟವಾಡಿ ಹೊರನಡೆದರು. ಬಳಿಕ ಮೀರ್ ಕೌನೇನ್ ಅಬ್ಬಾಸ್(15), ನಿಶ್ಚಲ್ ಜತೆ 2ನೇ ವಿಕೆಟ್​ಗೆ 33 ರನ್ ಗಳಿಸಿ ಹೊರನಡೆದರೆ, ಕಳೆದ ಪಂದ್ಯದ ಶತಕ ಸಾಧಕ ಕೆ.ವಿ.ಸಿದ್ದಾರ್ಥ್(11) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.

ವಿನಯ್, ರಣಜಿ ಟ್ರೋಫಿಯಲ್ಲಿ ನಾಯಕನಾಗಿ ಗರಿಷ್ಠ ವಿಕೆಟ್ ಕಬಳಿಸಿದ 3ನೇ ಬೌಲರ್ ಎನಿಸಿದರು. ಇಎಎಸ್ ಪ್ರಸನ್ನ (204) ದಾಖಲೆಯನ್ನು ವಿನಯ್ (205) ಹಿಂದಿಕ್ಕಿದರು.

ಮಹಾಘಾತ ನೀಡಿದ ವಿನಯ್ ಪಡೆ

ಅಂಕಿತ್ ಭಾವ್ನೆ ಹಾಗೂ ಕೇದಾರ್ ಜಾಧವ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಮಹಾರಾಷ್ಟ್ರ ತಂಡ, ಕರ್ನಾಟಕದ ಬಿಗಿ ಬೌಲಿಂಗ್ ದಾಳಿಗೆ ದಿನದ ಮೊದಲ ಅವಧಿಯಲ್ಲೇ ಕುಸಿತ ಕಂಡಿತು. ದಿನದ 5ನೇ ಎಸೆತದಲ್ಲೇ ವಿನಯ್ಕುಮಾರ್, ಆರಂಭಿಕ ಚಿರಾಗ್ ಖುರಾನ(0) ಅವರನ್ನು ಎಲ್​ಬಿ ಬಲೆಗೆ ಬೀಳಿಸಿದರೆ, ಮರು ಓವರ್​ನಲ್ಲೇ ಮತ್ತೋರ್ವ ಆರಂಭಿಕ ಸ್ವಪ್ನಿಲ್ ಗುಗಾಲೆ (1) ಕೂಡ ಮಿಥುನ್ ಎಸೆತದಲ್ಲಿ ವಿಕೆಟ್ ಕೀಪರ್ ಬಿಆರ್ ಶರತ್​ಗೆ ಕ್ಯಾಚ್ ನೀಡಿದರು. ಜಯ್ ಪಾಂಡೆ (20) ಹಾಗೂ ರಿತುರಾಜ್ ಗಾಯಕ್ವಾಡ್ (39) ಜೋಡಿ ಕೆಲಕಾಲ ನಿಧಾನಗತಿಯ ಬ್ಯಾಟಿಂಗ್ ಮೂಲಕ ಚೇತರಿಕೆ ನೀಡಲು ಯತ್ನಿಸಿತು. 3ನೇ ವಿಕೆಟ್​ಗೆ 39 ರನ್ ಪೇರಿಸಿದ್ದ ವೇಳೆ ರೋನಿತ್ ಮೋರೆ ಜಯ್ ಪಾಂಡೆ ವಿಕೆಟ್ ಕಬಳಿಸಿ ಮತ್ತೊಮ್ಮೆ ಆಘಾತ ನೀಡಿದರು. ನಾಯಕ ರಾಹುಲ್ ತ್ರಿಪಾಠಿ(0) ಹಾಗೂ ನೌಶಾದ್ ಶೇಖ್ (2) ಕ್ರಮವಾಗಿ ರೋನಿತ್ ಹಾಗೂ ವಿನಯ್ಗೆ ವಿಕೆಟ್ ಒಪ್ಪಿಸಿದರು. ಇದರಿಂದ ಪ್ರವಾಸಿ ತಂಡ ಭೋಜನ ವಿರಾಮದ ವೇಳೆಗೆ 5 ವಿಕೆಟ್​ಗೆ 84 ರನ್​ಗಳಿಸಿ, ಕನಿಷ್ಠ 100ರ ಗಡಿ ದಾಟುವುದು ದುಸ್ತರ ಪರಿಸ್ಥಿತಿ ಕಂಡಿತು. ಭೋಜನ ವಿರಾಮದ ಬಳಿಕ ಚೆಂಡು ಪಡೆದ ಸ್ಥಳೀಯ ಎಡಗೈ ಆಟಗಾರ ಸುಚಿತ್ 4 ವಿಕೆಟ್ ಪಡೆದು ಪ್ರವಾಸಿ ತಂಡದ ಆಟಗಾರರನ್ನು ಬೆಂಬಿಡದೆ ಕಾಡಿದರು.

Stay connected

278,751FansLike
584FollowersFollow
622,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...