ಚರ್ಚ್‌ಗಳಲ್ಲಿ ಗುಡ್ ಪ್ರೈಡೇ ಆಚರಣೆ

ಆಲೂರು: ತಾಲೂಕಿನ ಪಾಳ್ಯ ಹೋಬಳಿ ಜೋಸೆಫ್ ನಗರದಲ್ಲಿರುವ ಸಂತ ಜೋಸೆಫರ ಚರ್ಚ್‌ನಲ್ಲಿ ಶುಕ್ರವಾರ ಗುಡ್ ಪ್ರೈಡೇ ಆಚರಿಸಲಾಯಿತು.

ಕಸಬಾ ಹೋಬಳಿ ಬಲಿವರ್ಸ್ ಚರ್ಚ್ ಹಾಗೂ ಕೆ. ಹೊಸಕೋಟೆ ಹೋಬಳಿ ಮಠದ ಕೊಪ್ಪಲು ಗ್ರಾಮದ ಸಂತ ಕ್ಷೇವಿಯರ್ ಚರ್ಚ್‌ನಲ್ಲಿ ಧರ್ಮಗುರುಗಳು ಹಾಗೂ ಕ್ರೈಸ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಏಸು ಕ್ರಿಸ್ತರು ಅನುಭವಿಸಿದ ಕಷ್ಟಗಳನ್ನು ಸ್ಮರಿಸುವ ಪ್ರಾರ್ಥನೆಗಳನ್ನು ಹಾಡುವ ಮೂಲಕ ಸಂಕಷ್ಟಗಳನ್ನು ಸಹಿಸಲು ಹಾಗೂ ದ್ವೇಷ ಅಸೂಯೆಗಳನ್ನು ತೊರೆದು ಸನ್ಮಾರ್ಗದಲ್ಲಿ ನಡೆಯಲು ಸ್ಫೂರ್ತಿ ನೀಡಲಿ ಎಂದು ಬೇಡಿಕೊಂಡರು. ನಂತರ ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ದೃಶ್ಯವನ್ನು ಬಿಂಬಿಸುವ ಮೆರವಣಿಗೆ ನಡೆಯಿತು.

Leave a Reply

Your email address will not be published. Required fields are marked *