ಕಾವೇರಿ ಕಾಲೇಜು ತಂಡ ಚಾಂಪಿಯನ್

ಗೋಣಿಕೊಪ್ಪಲು: ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಅಂತರ್ ಕಾಲೇಜು ಹಾಕಿ ಟೂರ್ನಿಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಬೆಂಗಳೂರು ಆಕ್ಸ್‌ಫರ್ಡ್ ಕಾಲೇಜು ತಂಡದ ವಿರುದ್ಧ ಜಯಗಳಿಸಿ ಸಾಧನೆ ಮಾಡಿತು.

ಕಾವೇರಿ ಕಾಲೇಜು ಪರ ಸೋಮಣ್ಣ ಬಾರಿಸಿದ ಏಕೈಕ ಗೋಲು ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಯಿತು. ಬೆಂಗಳೂರು ತಂಡ ಗೋಲು ದಾಖಲಿಸಲಾಗದೆ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ವಿಜೇತ ತಂಡಕ್ಕೆ 50 ಸಾವಿರ ರೂ. ನಗದು ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು. ಗೋಣಿಕೊಪ್ಪ ಕಾವೇರಿ ಕಾಲೇಜು ತಂಡದ ತರಬೇತುದಾರ ಮಿನ್ನಂಡ ಜೋಯಪ್ಪ ಅವರಿಗೆ ಬೆಸ್ಟ್ ಕೋಚ್ ಪ್ರಶಸ್ತಿ ನೀಡಲಾಯಿತು. ತಂಡದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಚಿಟ್ಯಪ್ಪ ಪಾಲ್ಗೊಂಡಿದ್ದರು.