ಮುದ್ದೇಬಿಹಾಳ: ತಾಲೂಕಿನ ರಕ್ಕಸಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂ(ಪಿಕೆಪಿಎಸ್)ದ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಗೋಲ್ಮಾಲ್ ನಡೆಸಲಾಗಿದೆ. ಒಂದಕ್ಕಿಂತ ಹೆಚ್ಚು ಪಟ್ಟಿ ತಯಾರಿಸಿ ಮತದಾರರು, ಚುನಾವಣೆಗೆ ಸ್ಪರ್ಧಿಸಿದವರನ್ನು ಗೊಂದಲಕ್ಕೀಡು ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ನೈಜ ಮತದಾರರ ಒಂದೇ ಪಟ್ಟಿ ತಯಾರಿಸಿದ ನಂತರವೇ ಸೊಸೈಟಿಗೆ ಚುನಾವಣೆ ನಡೆಸಬೇಕು ಎಂದು ಸೊಸೈಟಿ ಚುನಾವಣೆಗೆ ಸ್ಪರ್ಧಿಸಿರುವ ಷೇರುದಾರರಾದ ಶಿವಶರಣಪ್ಪ ಪಟ್ಟಣಶೆಟ್ಟಿ, ಮಲ್ಲು ಪಟ್ಟಣಶೆಟ್ಟಿ, ಬಸವರಾಜ ಬಂಡಿವಡ್ಡರ ಆಗ್ರಹಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ, ದಾಖಲೆ ಪ್ರದರ್ಶಿಸಿ ಮಾತನಾಡಿದ ಅವರು, ಮೊದಲ ಪಟ್ಟಿಯಲ್ಲಿ 779 ಷೇರುದಾರರಲ್ಲಿ 130 ಷೇರುದಾರರು ಮತದಾನಕ್ಕೆ ಅರ್ಹರು ಎಂದು ತೋರಿಸಿದ್ದರೆ ಎರಡನೇ ಪಟ್ಟಿಯಲ್ಲಿ ಎಲ್ಲ 709 ಷೇರುದಾರರು ಮತದಾನಕ್ಕೆ ಅರ್ಹರು ಎಂದು ತೋರಿಸಲಾಗಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಇಲ್ಲಿ ಗೋಲ್ಮಾಲ್ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ದಾಖಲೆ ಪ್ರದರ್ಶಿಸಿದರು.
ಸೊಸೈಟಿ ಕಾರ್ಯದರ್ಶಿಯೇ ಇದಕ್ಕೆಲ್ಲ ಮೂಲ ಹೊಣೆಗಾರರು. ತಮ್ಮ ಮಾತು ಕೇಳುವವರನ್ನೇ ಆಯ್ಕೆ ಮಾಡಬೇಕು ಎನ್ನುವ ದುರುದ್ದೇಶದಿಂದ ಹೀಗೆ ಮಾಡಿದ್ದಾರೆ. ಇದೇ ಸೊಸೈಟಿಯ ಬಿನ್ ಶೇತ್ಕಿ ಸಾಲದಲ್ಲಿ 2&3 ಕೋಟಿ ರೂ. ಅವ್ಯವಹಾರ ನಡೆಸಿರುವ ಆರೋಪ ಕಾರ್ಯದರ್ಶಿ ಮೇಲಿದೆ.
ವಿಜಯಪುರದ ಡಿಸಿಸಿ ಬ್ಯಾಂಕ್ನವರು ಈ ಬಗ್ಗೆ ತನಿಖೆ ನಡೆಸಿದಾಗ 1,39,19,000 ರೂ. ಅವ್ಯವಹಾರ ಆಗಿದೆ ಎನ್ನುವುದು ಕಂಡು ಬಂದಿತ್ತು. ಈ ಪೈಕಿ 76.50 ಲ ರೂ. ಈಗಾಗಲೇ ಕಾರ್ಯದರ್ಶಿ ತುಂಬಿದ್ದಾರೆ. ಇಂಥ ಅವ್ಯವಹಾರವನ್ನೆಲ್ಲ ಮುಚ್ಚಿಹಾಕಲು ಷಡ್ಯಂತ್ರ ನಡೆಸತೊಡಗಿದ್ದಾರೆ ಎಂದು ಡಿಸಿಸಿ ಬ್ಯಾಂಕ್ನ ತನಿಖಾ ವರದಿ, ಹಣ ತುಂಬಿದ ದಾಖಲೆ ಪ್ರದರ್ಶಿಸಿದರು.
ಸೊಸೈಟಿಯಲ್ಲಿ ನಡೆದಿರುವ ಅವ್ಯವಹಾರ, ಚುನಾವಣೆಯಲ್ಲಿ ಗೋಲ್ಮಾಲ್ ಮಾಡುತ್ತಿರುವ ಕುರಿತು ಈಗಾಗಲೇ ಸಂಯುಕ್ತ ನಿಬಂಧಕರು, ಉಪನಿಬಂಧಕರು, ಸಹಕಾರ ಅಭಿವೃದ್ಧಿ ಅಧಿಕಾರಿಗಳು ಸೇರಿ ಹಲವರಿಗೆ ದೂರು ಸಲ್ಲಿಸಲಾಗಿದೆ. ಮೇಲಧಿಕಾರಿಗಳು ಈ ಕುರಿತು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಚುನಾವಣೆಗೆ ಸಂಬಂಧಿಸಿದ ಖಾಲಿ ದಾಖಲೆ ಮೇಲೆ ಉಪನಿಬಂಧಕರು ಸಹಿ ಮಾಡಿ ಕೊಡುತ್ತಾರೆ ಎಂದು ದಾಖಲೆಯೊಂದನ್ನು ಪ್ರದರ್ಶಿಸಿದ ಅವರು, ಈ ಬಗ್ಗೆ ಕೇಳಿದರೆ ನಾನ್ಯಾಕೆ ಖಾಲಿ ದಾಖಲೆ ಮೇಲೆ ಸಹಿ ಮಾಡಿ ಕೊಡಲಿ ಎಂದು ವಾದಿಸುತ್ತಾರೆ. ಅವರು ಸಹಿ ಮಾಡಿದ ದಾಖಲೆ ನೀಡಿದರೆ ತಪ್ಪಿನ ಅರಿವಾಗಿ ಉತ್ತರ ನೀಡದೆ ಪ್ರಕರಣ ಕೈಬಿಡುವಂತೆ ಬೇರೆಯವರಿಂದ ಒತ್ತಡ ಹಾಕಿಸುತ್ತಾರೆ. ಎಲ್ಲ ದಾಖಲೆ ಕೊಟ್ಟರೂ ಅವರು ಮೌನವಾಗಿರುವುದರ ಹಿಂದೆ ಸೊಸೈಟಿ ಅವ್ಯವಹಾರಗಳಿಗೆ ಅವರ ಕುಮ್ಮಕ್ಕಿದೆ ಎನ್ನುವ ಸಂಶಯ ಹುಟ್ಟು ಹಾಕುತ್ತದೆ. ಜಿಲ್ಲಾಮಟ್ಟದ ಅಧಿಕಾರಿಗಳೇ ಸಹಕಾರ ಸಂದಲ್ಲಿ ಅವ್ಯವಹಾರ ನಡೆಯಲು ಆಸ್ಪದ ಕೊಟ್ಟರೆ ಮುಗ್ಧ ರೈತರ ಪಾಡೇನು ಎಂದು ಪ್ರಶ್ನಿಸಿದ ಅವರು ಜಿಲ್ಲಾ ಸಹಕಾರ ಸಂದವರು ನಿಯಮ ಉಲ್ಲಂಘಿಸಿ ರೈತರನ್ನು ವಂಚಿಸುತ್ತಿರುವುದನ್ನು ತಡೆಗಟ್ಬಬೇಕು ಎಂದರು.
ಪಟ್ಟಣಶೆಟ್ಟಿ ಅವರು ಪ್ರತ್ಯೇಕವಾಗಿ ಮಾತನಾಡಿ, ಸೊಸೈಟಿಯಿಂದ 2020ರ ಜನವರಿ 6 ರಂದು ನಾನು 5.50 ಲ ರೂ. ಸಾಲ ಪಡೆದಿದ್ದೆ. 2020ರ ಜನವರಿ 13 ರಂದು ನನ್ನ ಗಮನಕ್ಕಿಲ್ಲದೆ ತಾವೇ ಹಣ ಕಟ್ಟಿ ಖಾತೆ ಕ್ಲೋಸ್ ಮಾಡಿದರು. 2020ರ ಜನವರಿ 14 ರಂದು 7.50 ಲ ರೂ. ವನ್ನು ನನಗೆ ಗೊತ್ತಿಲ್ಲದಂತೆ ಖರ್ಚು ಹಾಕಿದರು. ಇದ್ಯಾವುದೂ ನನಗೆ ಗೊತ್ತಿಲ್ಲ. 4 ವರ್ಷದ ನಂತರ ನನ್ನ ಹೊಲ ಮಾರಿ ಸಾಲದ ಕಂತು ಕಟ್ಟಿ, ಹೊಲದ ಭೋಜಾ ಕಡಿಮೆ ಮಾಡಿಸಲು ಹೋದಾಗ ಈ ಹಗರಣ ನನ್ನ ಗಮನಕ್ಕೆ ಬಂದಿದೆ.
ಇದನ್ನು ಪ್ರಶ್ನಿಸಿದರೆ ನನ್ನ ವಿರುದ್ಧವೇ ಮಾತನಾಡಿದರು. ಅನಿವಾರ್ಯವಾಗಿ ಹೊಲ ಉಳಿಸಿಕೊಳ್ಳಲು ಎಲ್ಲ ಸಾಲ, ಬಡ್ಡಿ ಕಟ್ಟಿದೆ. ಇಂಥ ಟನೆಗಳು ಆ ಸೊಸೈಟಿಯಲ್ಲಿ ಬಹಳಷ್ಟು ನಡೆದಿವೆ ಎಂದು ಇದಕ್ಕೆ ಸಂಬಂಧಿಸಿದ ದಾಖಲೆ ಪ್ರದರ್ಶಿಸಿದರು. ಸೊಸೈಟಿ ಷೇರುದಾರ, ರಕ್ಕಸಗಿ ಗ್ರಾಪಂ ಮಾಜಿ ಉಪಾಧ್ಯ ಅಯ್ ಧಣಿ ನಾಡಗೌಡ ಇದ್ದರು.