ಬೆಂಗಳೂರು: ಬಿಜೆಪಿ ಮುಖಂಡ ಹಾಗೂ ಮಾಜಿ ಕಾಪೋರೇಟರ್ಗೆ 150 ಕೋಟಿ ರೂ. ಸಾಲ ಕೊಡಿಸುವುದಾಗಿ ಆಮಿಷವೊಡ್ಡಿ ಶುಲ್ಕಕ್ಕೆಂದು 4.25 ಕೋಟಿ ರೂ. ಪಡೆದು ವಂಚಿಸಿರುವ ಪ್ರಕರಣ ಕೆಂಪಾಪುರ ಅಗ್ರಹಾರ ಠಾಣೆಯಲ್ಲಿ ದಾಖಲಾಗಿದೆ.
ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸ್ಪರ್ಧಿಸಿದ್ದ ಪಾಲಿಕೆ ಮಾಜಿ ಸದಸ್ಯ ಎಚ್. ರವೀಂದ್ರ ವಂಚನೆಗೊಳಗಾದವರು. ಈ ಕುರಿತು ಅವರು ಕೊಟ್ಟ ದೂರಿನ ಅನ್ವಯ ಚೆನ್ನೈ ಮೂಲದ ಆರೋಪಿಗಳಾದ ಹರಿಗೋಪಾಲ್ ಕೃಷ್ಣನ್ ನಾಡರ್, ರಂಜನ್, ಮುಬಾರಕ್, ರಂಜಿತ್ ಫಣಿಕರ್ ಹಾಗೂ ಅಭಿಷೇಕ್ ಗುಪ್ತಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಲೇಔಟ್ ನಿರ್ವಣಕ್ಕಾಗಿ ರವೀಂದ್ರಗೆ ಹಣದ ಅವಶ್ಯಕತೆ ಇತ್ತು. ಈ ವಿಚಾರವನ್ನು ಪರಿಚಯಸ್ಥ ದ್ರುವರಾಜ್ ಎಂಬಾತನಿಗೆ ತಿಳಿಸಿದ್ದರು. ಆತ ಸಂತೋಷ್ ಮತ್ತು ಕುಪು್ಪಸ್ವಾಮಿ ಎಂಬುವರನ್ನು ಪರಿಚಯಿಸಿಕೊಟ್ಟಿದ್ದ. ಇವರಿಬ್ಬರ ಮೂಲಕ ಆರೋಪಿ ಹರಿಗೋಪಾಲ ಕೃಷ್ಣನಾಡರ್ ರವೀಂದ್ರ ಅವರನ್ನು ಸಂರ್ಪಸಿದ್ದ. ಬಳಿಕ ಕಡಿಮೆ ಬಡ್ಡಿದರದಲ್ಲಿ 150 ಕೋಟಿ ರೂ. ಸಾಲ ಕೊಡಿಸುವುದಾಗಿ ನಂಬಿಸಿ, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕರಾರುಪತ್ರ ಮಾಡಿಸಿದ್ದ.
ಸಾಲ ಮಂಜೂರಾತಿ ಶುಲ್ಕದ ಹೆಸರಿನಲ್ಲಿ ರವೀಂದ್ರ ಅವರಿಂದ ಆರೋಪಿಗಳು 3.25 ಕೋಟಿ ರೂ. ಪಡೆದುಕೊಂಡಿದ್ದರು. ಬಳಿಕ ಕೆಲ ನೆಪ ಹೇಳಿ ಇನ್ನೂ ಮೂರು ಕೋಟಿ ರೂಪಾಯಿಗೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಮುಬಾರಕ್ ಎಂಬಾತ ಒಂದು ಕೋಟಿ ರೂ. ಪಡೆದಿದ್ದಾನೆ. ಅಭಿಷೇಕ್ ಗುಪ್ತಾ 2 ಕೋಟಿ ರೂ. ಮೌಲ್ಯದ ಎರಡು ಚೆಕ್ ತೆಗೆದುಕೊಂಡಿದ್ದಾನೆ. ಆರೋಪಿಗಳು ಈ ರೀತಿಯಾಗಿ 4.25 ಕೋಟಿ ರೂ ಹಾಗೂ 2 ಚೆಕ್ಗಳನ್ನು ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ರವೀಂದ್ರ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.