ಪ್ರೇಕ್ಷಕರನ್ನು ರಂಚಿಸಿದ ದೀಪಿಕಾ ದಾಸ್

ವಿಜಯವಾಣಿ ಸುದ್ದಿಜಾಲ ಕಮಲನಗರ
ಕಿರುತೆರೆ ನಟಿ ರಾಗಿಣಿ ದಾಸ್ ನೃತ್ಯ, ಯುವಕರಲ್ಲಿ ಜೋಷ್ನ ಕೂಗಾಟ, ನಟಿಯೊಂದಿಗೆ ಹೆಜ್ಜೆ ಹಾಕಿದ ಪುಟ್ಟ ಪುಟ್ಟ ಮಕ್ಕಳು, ಕಿಕ್ಕಿರಿದ ಜನಸ್ತೋಮ… ಇದು ಪಟ್ಟಣದ ರಾಂಪೂರ ಕ್ರಾಸ್ ಬಳಿ ಇರುವ ಗೋಲ್ಡನ್ ವ್ಯಾಲಿ ಇಂಟರ್ನ್ಯಾಷನಲ್ ಸ್ಕೂಲ್ನ ವಾಷರ್ಿಕ ಸಮ್ಮೇಳನದಲ್ಲಿ ಕಂಡು ಬಂದ ದೃಶ್ಯ.

ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕಿರುತೆರೆ ನಟಿ ದೀಪಿಕಾ ದಾಸ್ ಅವರು ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿ, ಗಮನ ಸೆಳೆದರು. ಆಂಖ್ ಮಾರೆ ಓ ಲಡ್ಕಿ, ಆಂಖ್ ಮಾರೆ , ಮೈ ನಾಗಿನ್ ನಾಗಿನ್ ಹಿಂದಿ ಗೀತೆಗಳಿಗೆ ನೃತ್ಯ ಮಾಡಿದರು. ವರ್ಣರಂಜಿತ ವೇದಿಕೆ ಮೇಲೆ ನಾಗಿಣಿ ಪ್ರದರ್ಶನ ನೀಡುತ್ತಿದ್ದರೆ ಇತ್ತ ಎಲ್ಲ ದಿಕ್ಕುಗಳಿಂದ ಹುಮ್ಮಸ್ಸಿನ ಕೂಗಾಟ, ಪ್ರೀತಿಯ ಚಪ್ಪಾಳೆ ಬಂದವು. ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆಸಿಕೊಂಡರು.

ದೀಪಿಕಾ ದಾಸ್ ಅವರನ್ನು ಶಾಲಾ ಆಡಳಿತ ಮಂಡಳಿಯಿಂದ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿ, ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಕಮಲನಗರದಲ್ಲಿ ಸುಸಜ್ಜಿತ ಶಾಲೆಯಿರುವುದು ಹೆಮ್ಮೆಯ ಸಂಗತಿ. ಈ ಶಾಲೆಯಲ್ಲಿ ಬಡ, ಪ್ರತಿಭಾವಂತ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಲಿ ಎಂದು ಆಶಯ ವ್ಯಕ್ತಪಡಿಸಿದರು.

ಸಂಸ್ಥೆ ಸಂಯೋಜಕ ಅರುಣಕುಮಾರ ಪಾಟೀಲ್ ಮಾತನಾಡಿ, ಸದೃಢ ಸಮಾಜ ನಿಮರ್ಾಣಕ್ಕೆ ಶಿಕ್ಷಣ ಪ್ರಬಲ ಅಸ್ತ್ರ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯೇ ಶಿಕ್ಷಣದ ಉದ್ದೇಶ. ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ಹೇಳಿದರು.

ಸಂಸ್ಥೆ ಅಧ್ಯಕ್ಷೆ ಜಯಶ್ರೀ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಕಿರುತೆರೆ ನಟ ಅಕ್ಷಯ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕಾಂತ ಹಣಮಶೆಟ್ಟೆ, ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ ಪೂಜಾರಿ, ಮುಖಂಡ ಬಾಲಾಜಿ ತೇಲಂಗ್, ದೇವಾನಂದ ಪಾಟೀಲ್, ರಾಜಕುಮಾರ ಬಿರಾದಾರ ಬಾಬುರಾವ ಚಿಕ್ಕಮುರ್ಗಿ, ಶಿವಕುಮಾರ ಪಾಟೀಲ್, ಶಿವಕುಮಾರ ಝಲ್ಪೆ ಇತರರಿದ್ದರು.

ಸಂಸ್ಥೆ ಕಾರ್ಯದರ್ಶಿ ಸರಳಾ ಪಾಟೀಲ್ ಸ್ವಾಗತಿಸಿದರು. ಪ್ರವೀಣ ಬಿರಾದಾರ ವಂದಿಸಿದರು. ಪ್ರೊ.ಶಿವಾಜಿ ಆರ್.ಎಚ್ ನಿರೂಪಣೆ ಮಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಟ್ರೋಫಿ ನೀಡಿ ಪ್ರೋತ್ಸಾಹಿಸಲಾಯಿತು.