More

  ಕಾನಸೂರು ಸಂಘದ ಸುವರ್ಣ ಮಹೋತ್ಸವ 25ರಂದು

  ಸಿದ್ದಾಪುರ: ತಾಲೂಕಿನ ತಾರೇಹಳ್ಳಿ ಕಾನಸೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸುವರ್ಣಮಹೋತ್ಸವ ಸಮಾರಂಭ ಸಂಘದ ದಿ. ಸುಬ್ರಾಯ ಹೆಗಡೆ ಮುತ್ಮುರ್ಡ ವೇದಿಕೆಯಲ್ಲಿ ಫೆ. 25ರಂದು ಜರುಗಲಿದೆ ಎಂದು ಸಂಘದ ಅಧ್ಯಕ್ಷ ಮಂಜುನಾಥ ಗಣಪತಿ ಜೋಶಿ ಈರಗೊಪ್ಪ ಹೇಳಿದರು.

  ಸಂಘದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸುವರ್ಣ ಮಹೋತ್ಸವ ಉದ್ಘಾಟಿಸುವರು. ಶಾಸಕ ಭೀಮಣ್ಣ ಟಿ. ನಾಯ್ಕ ಸುವರ್ಣ ಸಹಕಾರ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಸಂಸದ ಅನಂತಕುಮಾರ ಹೆಗಡೆ, ಶಾಸಕ ಶಿವರಾಮ ಹೆಬ್ಬಾರ, ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಜಿಲ್ಲಾ ಸಹಕಾರ ಉಪನಿಬಂಧಕ ಮಂಜುನಾಥ ಸಿಂಗ್, ಇತರರು ಪಾಲ್ಗೊಳ್ಳುವರು.

  ಮಧ್ಯಾಹ್ನ 2.30ರಿಂದ ಅಡಕೆ ತೋಟದಲ್ಲಿ ಉಪ ಬೆಳೆಗಳು ಮತ್ತು ಸುಧಾರಿತ ನಿರ್ವಹಣಾ ವಿಧಾನಗಳು ಸಂವಾದ ನಡೆಯಲಿದೆ. ಪ್ರಗತಿಪರ ಕೃಷಿಕರಾದ ಗೋಪಾಲ ಹೆಗಡೆ ಹುಳಗೋಳ, ಸೀತಾರಾಮ ಹೆಗಡೆ ನೀರ್ನಳ್ಳಿ ಹಾಗೂ ರಾಮಚಂದ್ರ ಹೆಗಡೆ ಗಡಿಕೈ ಪಾಲ್ಗೊಳ್ಳುವರು. ನಂತರ ಸಹಕಾರ ಸಂಘಗಳಲ್ಲಿ ಸದಸ್ಯರ ಪಾತ್ರ ಹಾಗೂ ತೆರಿಗೆ ಕಾನೂನುಗಳ ಅರಿವು ಕುರಿತು ಶಿರಸಿಯ ಚಾರ್ಟರ್ಡ್ ಅಕೌಂಟಂಟ್ ಮಂಜುನಾಥ ಶೆಟ್ಟಿ ಮಾಹಿತಿ ನೀಡುವರು. ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಬಿಳಗಿ, ಟಿಎಸ್​ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಶಿರಸಿ ಟಿಎಂಎಸ್ ಅಧ್ಯಕ್ಷ ಜಿ.ಎಂ. ಹೆಗಡೆ, ಶಿರಸಿಯ ಕದಂಬ ಮಾರ್ಕೆಟಿಂಗ್​ನ ಅಧ್ಯಕ್ಷ ಶಂಭುಲಿಂಗ ಹೆಗಡೆ, ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಆರ್.ಜಿ. ಭಾಗ್ವತ್, ಶಿರಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ. ಶ್ರೀನಿವಾಸ, ಇತರರು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಸಂಘದಲ್ಲಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರು, ನಿವೃತ್ತ ಮುಖ್ಯ ಕಾರ್ಯನಿರ್ವಾಹಕರನ್ನು ಹಾಗೂ ಸಾಧಕರನ್ನು ಸನ್ಮಾನಿಸಲಾಗುವುದು.

  ನಂತರ ರವಿ ಮೂರೂರು ತಂಡದವರಿಂದ ಸಂಗೀತ ಕಾರ್ಯಕ್ರಮ ಹಾಗೂ ಕೊಂಡದಕುಳಿ ರಾಮಚಂದ್ರ ಹೆಗಡೆ ಬಳಗದವರಿಂದ ದಕ್ಷಯಜ್ಞ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

  ಉಪಾಧ್ಯಕ್ಷ ರಾಮಚಂದ್ರ ಎಂ. ಹೆಗಡೆ ಕಲ್ಕಟ್ಟೆ, ಸದಸ್ಯರಾದ ಗುರುನಾಥ ಜಿ. ಹೆಗಡೆ ದೇವಿಸರ, ಮಂಜುನಾಥ ಡಿ. ಭಟ್ಟ ಕಲ್ಕಟ್ಟೆ, ಹರಿನಾರಾಯಣ ಜಿ. ಭಟ್ಟ ಜಿಗಳೇಮನೆ. ಶ್ರೀಪಾದ ವಿ. ಹೆಗಡೆ ಮಾದನಕಳ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಎನ್. ಹೆಗಡೆ ಕಲ್ಕಟ್ಟೆ ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts