ಕಲಬುರಗಿ: ಹಜ್‌ಗೆ ಹೋಗುವ ತಂದೆ ತಾಯಿ ಭೇಟಿಗೆ ಬಂದಿದ್ದ ಮಹಿಳೆಯೊಬ್ಬರ ಆಭರಣ ಮತ್ತು ನಗದು ಹಣ ಕಳ್ಳತನವಾದ ಏಳು ತಿಂಗಳ ನಂತರ ರೋಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೀದರ್ ನಿವಾಸಿ ಖಾಸಗಿ ಕಾಲೇಜಿನ ಉಪನ್ಯಾಸಕಿ ಸಭಾ ಜೊಹರಾ ಜಬೀನ್ ಆಭರಣ ಮತ್ತು ಹಣ ಕಳೆದುಕೊಂಡವರು. ನಗರದ ನಯಾ ಮೊಹಲ್ಲಾದಲ್ಲಿನ ಕುಟುಂಬದವರ ಭೇಟಿಗೆ ೨೦೨೪ರ ಏ.೪ರಂದು ಬಂದಿದ್ದರು. ಬಂದ ದಿನ ಮೈ ಮೇಲೆ ಹಾಕಿಕೊಂಡ ಬಂಗಾರದ ಆಭರಣಗಳಾದ ೨೦ ಗ್ರಾಂನ ದೊಡ್ಡ ಸರ, ೬ ಗ್ರಾಂನ ಬಂಗಾರದ ಓಲೆ, ೧೦ ಗ್ರಾಂ ಮಂಗಳ ಸೂತ್ರ, ೩ ಗ್ರಾಂನ ಎರಡು ಬಂಗಾರದ ಉಂಗುರ ಸೇರಿ ಒಟ್ಟು ೩.೧೫ ಲಕ್ಷ ರೂ. ಮೌಲ್ಯದ ಆಭರಣಗಳನ್ನು ಬ್ಯಾಗ್‌ನಲ್ಲಿ ಹಾಕಿ ಮಲಗುವ ಕೋಣೆಯ ಗೋಡೆಯಲ್ಲಿ ನೇತು ಹಾಕಿದ್ದರು. ಏ.೭ರಂದು ಸಂಜೆ ನೋಡಿದಾಗ ಆಭರಣ ಮತ್ತು ಹಣ ಅಲ್ಲೆ ಇದ್ದವು. ಆದರೆ, ಏ.೮ರಂದು ಮಧ್ಯಾಹ್ನ ನೋಡಿದಾಗ ಆಭರಣ ಮತ್ತು ಹಣ ಕಳ್ಳತನವಾಗಿದ್ದವು. ಇದಾದ ನಂತರ ಏ.೯ರಂದು ತಂದೆ, ತಾಯಿ ಹಜ್‌ಗೆ ತೆರಳಿದ್ದರು ಮತ್ತು ನಾನು ಬೀದರ್‌ಗೆ ವಾಪಾಸ್ ಹೋಗಿದ್ದೆ ಎಂದು ಡಿ.೫ರಂದು ದೂರು ನೀಡಿದ್ದಾರೆ.
TAGGED:#Crime