ಹರಿಹರ: ಬಂಗಾರದ ಮಣ್ಣಿನಲ್ಲಿ ಬೆಳ್ಳಿ ಲಿಂಗ ಒಡಮೂಡಿತು, ಆ ಲಿಂಗದ ಮೇಲೆ ಕಾಳಿಂಗ ಸರ್ಪ ಕುಂತಿತು, ಆ ಸರ್ಪಕ್ಕೆ ಗರುಡ ಕುಕ್ಕಿತಲೇ ಎಚ್ಚರ…
ಇದು ಈ ಬಾರಿಯ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ತಾಲೂಕಿನ ಯಲವಟ್ಟಿ ಆಂಜನೇಯ ಸ್ವಾಮಿಯ ಪೂಜಾರಪ್ಪರ ಕಾರ್ಣಿಕ ನುಡಿ.
ಪ್ರತಿವರ್ಷ ನಗರದ ತುಂಗಭದ್ರಾ ನದಿಪಾತ್ರದ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ನಾಗಪಂಚಮಿಯಂದು ತಾಲೂಕಿನ ಯಲವಟ್ಟಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ ಕಾರ್ಣಿಕ ನುಡಿಯುತ್ತದೆ.
ಹರಿಹರ ತಾಲೂಕು ಸೇರಿದಂತೆ ಅಕ್ಕಪಕ್ಕದ ತಾಲೂಕಿನ ವಿವಿಧ ದೇವತಾ ಮೂರ್ತಿಗಳು ತುಂಗಭದ್ರಾ ನದಿಯಲ್ಲಿ ಪೂಜೆ ಸಲ್ಲಿಸಿ ನಂತರ ಸಂಗಮೇಶ್ವರ ದೇವಸ್ಥಾನ ಆವರಣದಲ್ಲಿ ಸೇರುತ್ತವೆ.
ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ಕಾರ್ಣಿಕ ಮುಗಿದ ನಂತರ ಗೋವಿಂದಾ ಗೋವಿಂದ ಎನ್ನುತ್ತ ಜಯ ಘೋಷ ಹಾಕಿದರು. ಕಾರ್ಣಿಕದ ಬಗ್ಗೆ ಕೆಲವರು ರೈತರ ಬಗ್ಗೆ ಅಂದರೆ ಇನ್ನೂ ಕೆಲವರು ರಾಜಕಾರಣದ ಬಗ್ಗೆ ಎನ್ನುವ ಅವರದೇ ರೂಪದಲ್ಲಿ ವಿಶ್ಲೇಷಿಸಿದರು.