ಬಂಗಾರ, ಬೆಳ್ಳಿ 320 ರೂ. ಅಗ್ಗ

ಮುಂಬೈ: ಸ್ಥಳೀಯ ಆಭರಣ ತಯಾರಕರಿಂದ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ಚಿನ್ನದ ದರ ಪ್ರತಿ 10 ಗ್ರಾಂ.ಗೆ 320 ರೂಪಾಯಿ ಇಳಿದಿದೆ. ಇದರಿಂದಾಗಿ ಆಭರಣ ಚಿನ್ನದ ದರ ಪ್ರತಿ 10 ಗ್ರಾಂ.ಗೆ 30,300 ರೂ. ಅಪರಂಜಿ ಚಿನ್ನದ ದರ 30,450 ರೂ. ತಲುಪಿತು. ಬೆಳ್ಳಿಯ ದರ ಕೂಡ ಕೆ.ಜಿ.ಗೆ 320 ರೂಪಾಯಿ ಇಳಿಕೆಯಾಗಿದ್ದು, 37,020 ರೂ. ದಾಖಲಾಗಿದೆ. ಮತ್ತೊಂದೆಡೆ ಡಾಲರ್ ಎದುರು ರೂಪಾಯಿ ಶುಕ್ರವಾರದ ವಹಿವಾಟಿನಲ್ಲಿ ಬಲಗೊಂಡಿದ್ದು 72.49 ರೂ. ತಲುಪಿದೆ.