27 ವಿದ್ಯಾರ್ಥಿಗಳಿಗೆ ಸುವರ್ಣ, ರಜತ, ಕಂಚಿನ ಪದಕ

ಶ್ರವಣಬೆಳಗೊಳ:  ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ 13ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಪದಕ, ಪ್ರಶಸ್ತಿಪತ್ರ ಹಾಗೂ ನಗದು ಬಹುಮಾನ ನೀಡಲಾಯಿತು.


2017-18ನೇ ಸಾಲಿನಲ್ಲಿ ದೇಶಾದ್ಯಂತ ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಪ್ರಾಕೃತ ಪರೀಕ್ಷೆ ನಡೆಸಿದ್ದು, ಸರ್ಟಿಫಿಕೇಟ್, ಡಿಪ್ಲೊಮಾ, ಪ್ರಥಮಾ, ಮಧ್ಯಮಾ ಹಾಗೂ ರತ್ನ ತರಗತಿಗಳಲ್ಲಿ ಒಟ್ಟು 637 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 504 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 257 ಪ್ರಥಮ ಶ್ರೇಣಿ, 55 ದ್ವಿತೀಯ ಶ್ರೇಣಿ ಹಾಗೂ 156 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಗಳಿಸಿದ್ದಾರೆ. 27 ವಿದ್ಯಾರ್ಥಿಗಳು ಸುವರ್ಣ, ರಜತ ಹಾಗೂ ಕಂಚಿನ ಪದಕ ಹಾಗೂ ಪ್ರಶಸ್ತಿಪತ್ರ ಪಡೆದರು.


ಕನ್ನಡ ಮಾಧ್ಯಮದ ಪ್ರಾಕೃತ ಸರ್ಟಿಫಿಕೇಟ್ ತರಗತಿಯಲ್ಲಿ ಅಲಗೂರಿನ ಪ್ರವೀಣ ಬಾ.ನ್ಯಾಮಗೌಡ ಸುವರ್ಣ, ಅಲಗೂರಿನ ಮಹದೇವ ಪಿ.ಯಲಗುದ್ರಿ ರಜತ ಹಾಗೂ ಬೆಂಗಳೂರಿನ ಮೈಥಿಲಿ ಕಂಚಿನ ಪದಕ ಪಡೆದಿದ್ದಾರೆ.

ಡಿಪ್ಲೊಮಾ ತರಗತಿಯಲ್ಲಿ ಪುತ್ತೂರಿನ ಸಿ.ಎಚ್.ಆಶಾ ಸುವರ್ಣ, ಪುತ್ತೂರಿನ ಕೃಪಾ ರಜತ ಹಾಗೂ ಬೆಂಗಳೂರಿನ ಎಸ್.ಶಾಂತಲಾ ಕಂಚಿನ ಪದಕ ಗಳಿಸಿದ್ದಾರೆ. ಪ್ರಥಮಾ ತರಗತಿಯಲ್ಲಿ ಜಮಖಂಡಿಯ ಸುಷ್ಮಾ ಮ.ದೈಗೊಂಡ ಸುವರ್ಣ, ಹುಬ್ಬಳ್ಳಿಯ ಬಿಂದು ಎಸ್.ಸೂಜಿ ರಜತ ಹಾಗೂ ಹುಬ್ಬಳ್ಳಿಯ ಚಂದನ ವಿ.ಮುತ್ತಿನ್ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಮಧ್ಯಮಾ ತರಗತಿಯಲ್ಲಿ ಹಾಸನದ ಡಾ.ವೀಣಾ ಸುವರ್ಣ, ಹೊನ್ನಾರತಿಯ ಗೌರಿ ಎಸ್.ಭಾರದ್ವಾಜ್ ರಜತ ಹಾಗೂ ಬೆಂಗಳೂರಿನ ಎಸ್.ಆರ್.ಸರಸ್ವತಮ್ಮ ಕಂಚಿನ ಪದಕ ಪಡೆದಿದ್ದಾರೆ.

ಪ್ರಾಕೃತ ರತ್ನ ಅಂತಿಮ ವರ್ಷದಲ್ಲಿ ಹಬ್ಬಳ್ಳಿಯ ಸ್ನೇಹಲ್‌ವಿಜಯ್ ಶ್ರೀಪನ್ನವರ್ ಸುವರ್ಣ, ಹುಬ್ಬಳ್ಳಿಯ ಅನಿತಾ ಬಿ.ಉಮಚಗಿ ರಜತ ಹಾಗೂ ಜಮಖಂಡಿಯ ಪರಪ್ಪಾ ನ್ಯಾಮಣ್ಣ ನಂದಗಾವ್ ಕಂಚಿನ ಪದಕ ಗಳಿಸಿದ್ದಾರೆ.


ಹಿಂದಿ ಮಾಧ್ಯಮದ ಡಿಪ್ಲೊಮಾ ತರಗತಿಯಲ್ಲಿ ದೆಹಲಿಯ ಅಭಿಷೇಕ್ ಜೈನ್ ಸುವರ್ಣ, ಸಹರನ್ಪರ್‌ನ ಸಂಧ್ಯಾ ಜೈನ್ ರಜತ ಹಾಗೂ ಸಹರನ್ಪರ್‌ನ ಅಶ್ವಿನಿ ಜೈನ್ ಕಂಚಿನ ಪದಕ ಪಡೆದಿದ್ದಾರೆ. ಪ್ರಥಮಾ ತರಗತಿಯಲ್ಲಿ ಅಕ್ಲೂಜ್‌ನ ಹೇಮಾ ರೂಪೇಶ್ ಫಡೆ ಸುವರ್ಣ, ಕೊತ್ಮಾದ ನೀಲೂ ಜೈನ್ ರಜತ ಹಾಗೂ ಥಾನೆಯ ಅಂಬೂಡ್ಕರ್ ಅನುಪಮ ನೇಮಿಸಾಗರ್ ಕಂಚಿನ ಪದಕ ಗಳಿಸಿದ್ದಾರೆ.

ಮಧ್ಯಮಾ ತರಗತಿಯಲ್ಲಿ ಕೊಲ್ಹಾಪುರದ ಅಶ್ವಿನಿ ಅರುಣ್ ಬಿಂಡಗೆ ಸುವರ್ಣ, ಜಮಖಂಡಿರ ಡಾ.ಜ್ಯೋಸ್ನಾ ಸಿ.ಸಮಾಜ್ ರಜತ ಹಾಗೂ ಕೊಲ್ಹಾಪುರದ ವೈಶಾಲಿ ನಿತೀನ್ ಚಿವಟೆ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.


ರತ್ನ-ಅಂತಿಮ ವರ್ಷದಲ್ಲಿ ಕೊಲ್ಹಾಪುರದ ಡಾ.ಸುಷ್ಮಾ ಗುಣವಂತ್ ಸುವರ್ಣ, ಹುಬ್ಬಳ್ಳಿಯ ಸುಜಾತಾ ಎ.ದಯಣ್ಣವರ್ ರಜತ ಹಾಗೂ ವಾರಣಾಸಿಯ ಪ್ರಕಾಶ್ ರೇಗ್ಮಿ ಅವರಿಗೆ ಕಂಚಿನ ಪದಕ ಹಾಗೂ ನಗದು ಬಹುಮಾನದೊಂದಿಗೆ ಪ್ರಮಾಣಪತ್ರ ನೀಡಲಾಯಿತು. ಟಾಪ್ 10 ರಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಅಂಕಸೂಚಿ ಹಾಗೂ ಪ್ರಶಸ್ತಿಪತ್ರ ವಿತರಿಸಲಾಯಿತು.

Leave a Reply

Your email address will not be published. Required fields are marked *