ನವದೆಹಲಿ: ಆಭರಣ ಮಾರಾಟಗಾರರು ಮತ್ತು ಜನರಿಂದ ಹೆಚ್ಚಿದ ಬೇಡಿಕೆ, ಪ್ರಬಲ ಜಾಗತಿಕ ಪ್ರವೃತ್ತಿಯಿಂದಾಗಿ ಚಿನ್ನದ ಬೆಲೆ ಬುಧವಾರ -ಠಿ;630 ಏರಿಕೆಯಾಗಿ, 10 ಗ್ರಾಂಗೆ -ಠಿ;82,700ಕ್ಕೆ ತಲುಪುವ ಮೂಲಕ ಸಾರ್ವಕಾಲಿಕ ಏರಿಕೆ ದಾಖಲಿಸಿತು.
ಳೆದ 6 ದಿನಗಳಿಂದ ಚಿನ್ನದ ಬೆಲೆ ಏರುತ್ತಿದೆ. ಶೇ. 99.9ರಷ್ಟು ಶುದ್ಧತೆಯ ಚಿನ್ನ 2024ರ ಅ. 31ರಂದು 10 ಗ್ರಾಂಗೆ 82,400 ರೂ.ಗೆ ತಲುಪಿ ಸಾರ್ವಕಾಲಿಕ ದಾಖಲೆ ನಿರ್ವಿುಸಿತ್ತು. ಶೇ. 99.5ರಷ್ಟು ಶುದ್ಧತೆಯ ಚಿನ್ನ ಕೂಡ ಅದೇ ದಿನ 82 ಸಾವಿರ ರೂ.ಗೆ ತಲುಪಿ, ಸಾರ್ವಕಾಲಿಕ ದಾಖಲೆ ನಿರ್ವಿುಸಿತ್ತು. ಬುಧವಾರ ಶೇ. 99.9 ಶುದ್ಧತೆಯ ಚಿನ್ನ 82,700 ರೂ.ಗೆ ಮತ್ತು ಶೇ. 99.5ರಷ್ಟು ಶುದ್ಧತೆಯ ಚಿನ್ನ 82,330 ರೂ.ಗೆ ಮಾರಾಟವಾಗಿ ಮೊದಲಿನ ದಾಖಲೆಗಳನ್ನು ಮುರಿದಿದೆ. ಬೆಳ್ಳಿ ದರ ಕೂಡ ಬುಧವಾರ 1 ಸಾವಿರ ರೂ.ನಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ 94 ಸಾವಿರ ರೂ.ಗೆ ತಲುಪಿತು ಎಂದು ಅಖಿಲ ಭಾರತ ಸರಾಫರ ಸಂಘ ತಿಳಿಸಿದೆ.