More

  ಚಿನ್ನ, ವಜ್ರಾಭರಣ ಪ್ರದರ್ಶನಕ್ಕೆ ಚಾಲನೆ

  ಬೆಳಗಾವಿ: ಚಂದುಕಾಕಾ ಸರ್ಾ ಸಂಸ್ಥೆಯಿಂದ ಹಾರೂಗೇರಿ ಪಟ್ಟಣದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ಚಿನ್ನ ಮತ್ತು ವಜ್ರಾಭರಣಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

  ಜಂಬಗಿ ಉದ್ಯೋಗ ಸಮೂಹ ಅಧ್ಯಕ್ಷ ಡಾ.ಬಾಲಕೃಷ್ಣ ಜಂಬಗಿ, ನರಗುಂದ ಕೈಗಾರಿಕಾ ಸಮೂಹದ ಅಧ್ಯಕ್ಷ ಗಿರೀಶ ನರಗುಂದ ಮಾತನಾಡಿ ‘ಆಕರ್ಷಕ ಮತ್ತು ಶುದ್ಧತೆಗೆ ಹೆಸರಾದ ಚಂದುಕಾಕಾ ಸರ್ಾ ಸಂಸ್ಥೆಯ ಆಭರಣಗಳು ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿವೆ’ ಎಂದರು.

  ಅಥಣಿ-ಗೋಕಾಕ ರಸ್ತೆಯ ಡಾ.ಚನ್ನಗೌಡರ ಕಾಂಪ್ಲೆಕ್ಸ್‌ನಲ್ಲಿ ಶುಕ್ರವಾರ ಆರಂಭಗೊಂಡಿರುವ ಪ್ರದರ್ಶನ ಡಿ.18ರ ವರೆಗೆ ನಡೆಯುತ್ತದೆ. ಉದ್ಯಮಿಗಳಾದ ಅಜಿತ ಹಿಪ್ಪರಗೆ, ಬಾಹುಬಲಿ ಪರಗೊಂಡ, ನಗರಸೇವಕರಾದ ಆನಂದ ಪಾಟೀಲ, ಅಜಿತ ಟಕ್ಕನ್ನವರ, ಡಾ.ಸರಿತಾ ಚೌಗುಲಾ, ಡಾ.ಅಮೃತಾ ಮುಗಲಬಾದ್, ಡಾ.ಮಹಾದೇವಿ ಚೌಗುಲಾ, ಡಾ.ಪರವಿನ್ ಮುಲ್ಲಾ, ಡಾ.ಪಲ್ಲವಿ, ಬಕ್ಕತನೂರ, ದೀಪಕ ರಾಯನಾಡೆ, ಅಹಿತಹಂತ ಪಾಟೀಲ, ಸಿದ್ಧಾರ್ಥ ಶಹಾ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts