ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿನ ದೃಢ ಪ್ರವೃತ್ತಿಯ ಮಧ್ಯೆ ದಾಸ್ತಾನುದಾರರು ಮತ್ತು ಚಿಲ್ಲರೆ ಮಾರಾಟಗಾರರು ಖರೀದಿ ಹೆಚ್ಚಿಸಿದ ಪರಿಣಾಮವಾಗಿ ಚಿನ್ನದ ಬೆಲೆ ಮಂಗಳವಾರ ಮತ್ತೆ ಐನೂರು ರೂ. ಹೆಚ್ಚಳವಾಗಿ ಮತ್ತೊಂದು ಸಾರ್ವಕಾಲಿಕ ದಾಖಲೆ ನಿರ್ವಿುಸಿದೆ.
ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಸೋಮವಾರ 1,300 ರೂ. ಏರಿಕೆಯಾಗಿ 10 ಗ್ರಾಂಗೆ 90,750 ರೂ.ಗೆ ತಲುಪಿತ್ತು. ಮಂಗಳವಾರ ಮತ್ತೆ 500 ರೂ. ಹೆಚ್ಚಳವಾಗಿ 91,250 ರೂ.ಗೆ ಮುಟ್ಟಿತು. ಶೇ. 99.5 ಶುದ್ಧತೆಯ ಚಿನ್ನದ ಬೆಲೆ ಸೋಮವಾರ 90,350 ರೂ. ಇದ್ದದ್ದು ಮಂಗಳವಾರ 450 ರೂ. ಏರಿಕೆಯಾಗಿ 90,800 ರೂ.ಗೆ ತಲುಪಿತು.
ಬೆಳ್ಳಿಯ ದರ ಪ್ರತಿ ಕೆಜಿಗೆ 1,02,500 ರೂ. ಇದೆ. ಬೆಂಗಳೂರಿನಲ್ಲಿ ಸ್ಟ್ಯಾಂಡರ್ಡ್ ಚಿನ್ನ (ಶೇ. 99.5 ಶುದ್ಧತೆ) ಮಂಗಳವಾರ 10 ಗ್ರಾಂಗೆ 92,590 ರೂ. ಇತ್ತು. ಆಭರಣ ಚಿನ್ನ ಪ್ರತಿ ಗ್ರಾಂಗೆ 8,497 ರೂ. ಇತ್ತು. ಬೆಳ್ಳಿ ಕೆಜಿಗೆ 1,06,400 ರೂ. ಇತ್ತು ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಆಗ ನನಗೆ 11 ವರ್ಷ, 56 ಸಾವಿರ ರೂ. ವಿಮೆ ಹಣ! ಬಾಲ್ಯದ ದಿನಗಳಲ್ಲಿ ಪಟ್ಟ ಕಷ್ಟ ನೆನೆದು ಥಮನ್ ಭಾವುಕ | Thaman