ಛತ್ತೀಸ್​ಗಢದಲ್ಲಿ 12ನೇ ಶತಮಾನದ 57 ಚಿನ್ನದ ನಾಣ್ಯಗಳು ಪತ್ತೆ

ರಾಯ್ಪುರ: ಛತ್ತೀಸ್​ಗಢದ ಕೊಂಡಾಗೋನ್ ಜಿಲ್ಲೆಯಲ್ಲಿ ರಸ್ತೆ ಕಾಮಗಾರಿ ಮಾಡುತ್ತಿದ್ದ ವೇಳೆ 12 ನೇ ಶತಮಾನದ ಚಿನ್ನದ ನಾಣ್ಯಗಳು ದೊರೆತಿದೆ.
ಕೊರ್ಕೋಟಿ ಹಾಗೂ ಬೇದ್ಮಾ ಹಳ್ಳಿಗಳ ನಡುವೆ ರಸ್ತೆ ನಿರ್ಮಾಣ ಕೆಲಸ ನಡೆಯುತ್ತಿತ್ತು. ಈ ವೇಳೆ ಮಹಿಳಾ ಕಾರ್ಮಿಕಳಿಗೆ ಒಂದು ಮಡಿಕೆ ಸಿಕ್ಕಿದ್ದು ಅದರಲ್ಲಿ 57 ಚಿನ್ನದ ನಾಣ್ಯಗಳಿವೆ. ಅಲ್ಲದೆ ಬೆಳ್ಳಿ ನಾಣ್ಯಗಳು, ಚಿನ್ನದ ಕಿವಿಯೋಲೆಯೂ ಸಿಕ್ಕಿದೆ ಎಂದು ಜಿಲ್ಲಾಧಿಕಾರಿ ನೀಲಕಂಠ ಟೇಕಂ ತಿಳಿಸಿದ್ದಾರೆ.

ಈ ಮಡಕೆ ಕೆಲವು ಅಡಿಗಳ ಆಳದಲ್ಲಿ ಸಿಕ್ಕಿದ್ದು ಅದನ್ನು ಕೆಲಸಗಾರರು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ನಂತರ ಕೊರ್ಕೋಟಿ ಸರ್​ಪಂಚ್​ ನೆಹರುಲಾಲ್ ಬರ್ಗೆಲ್​ ತಮಗೆ ನೀಡಿದ್ದಾಗಿ ಡಿಸಿ ನೀಲಕಂಠ ಮಾಹಿತಿ ನೀಡಿದ್ದಾರೆ.

ಈ ನಾಣ್ಯಗಳನ್ನು 12 ಅಥವಾ 13ನೇ ಶತಮನಕ್ಕೆ ಸೇರಿದ್ದು ಎಂದು ಪ್ರಾಥಮಿಕ ಪರೀಕ್ಷೆಯಲ್ಲಿ ತಿಳಿದುಬಂದಿದ್ದು ಅದರ ಮೇಲೆ ಯಾದವ ರಾಜವಂಶ ವಿದರ್ಭವನ್ನು ಆಳುತ್ತಿದ್ದಾಗ ಪ್ರಚಲಿತದಲ್ಲಿದ್ದ ಲಿಪಿಯು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.