ಸಿನಿಮಾ

ಮಾಂಗಲ್ಯ ಸರ ಅಪಹರಣ

ದೊಡ್ಡಬಳ್ಳಾಪುರ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿ ಬಂದ ಬೈಕ್ ಸವಾರರಿಬ್ಬರು ಮಾಂಗಲ್ಯ ಸರ ಎಗರಿಸಿ ಪರಾರಿಯಾದ ಘಟನೆ ನಡೆದಿದೆ.
ನಗರದ ಶಾಂತಿನಗರ 10ನೇ ಕ್ರಾಸ್‌ನ ನಿವಾಸಿ ಭಾರತಿ ಮಾಂಗಲ್ಯ ಸರ ಕಳೆದುಕೊಂಡವರು. ಶಾಂತಿನಗರ 10ನೇ ಕ್ರಾಸ್‌ನಲ್ಲಿ ಭಾವ, ಅತ್ತಿಗೆಯೊಂದಿಗೆ ಯಲಹಂಕದ ಆಸ್ಪತ್ರೆಗೆ ತೆರಳಿ ವಾಪಸಾಗುತ್ತಿದ್ದಾಗ ಹಿಂದಿನಿಂದ ಬಂದ ಬೈಕ್ ಸವಾರರಿಬ್ಬರು 23 ಗ್ರಾಂತೂಕದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾರೆ.
ಈ ವೇಳೆ ಭಾರತಿ ಮತ್ತು ಆಕೆಯ ಅತ್ತಿಗೆ ಕೂಗಿಕೊಂಡರೂ ಪ್ರಯೋಜನವಾಗಿಲ್ಲ. ಮಹಿಳೆ ಕಿರುಚಿಕೊಳ್ಳುತ್ತಿದ್ದಂತೆ ಸ್ಥಳದಲ್ಲೇ ಇದ್ದ ಪ್ರಕಾಶರಾವ್ ಎಂಬಾತ ಸರಗಳ್ಳರನ್ನು ಹಿಂಬಾಲಿಸಿದ್ದಾರಾದರೂ ಕೈಗೆ ಸಿಕ್ಕಿಲ್ಲ. ಇದಕ್ಕೂ ಮುನ್ನ ನಗರದ ಕುಚ್ಚಪ್ಪನ ಪೇಟೆಯಲ್ಲಿ ಸರಗಳ್ಳರು ಉಮಾಬಾಯಿ ಎಂಬ ವೃದ್ಧೆಯ ಸರವನ್ನು ಕಸಿದು ಪರಾರಿಯಾಗಿದ್ದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ, ಪೊಲೀಸ್ ಇನ್‌ಸ್ಪೆಕ್ಟರ್ ಹರೀಶ್‌ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಂಕಿತ ಪ್ರವೀಣ್ ಮತ್ತು ಸುಬ್ರಹ್ಮಣಿ ಎಂಬುವ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನಗರ, ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

Latest Posts

ಲೈಫ್‌ಸ್ಟೈಲ್