Wednesday, 12th December 2018  

Vijayavani

ಅಂತೂ ಹೊರಬಿತ್ತು ಮಧ್ಯಪ್ರದೇಶದ ಫಲಿತಾಂಶ: ಅತಂತ್ರ ರಾಜ್ಯದಲ್ಲಿ ಯಾರಿಗೆ ಅಧಿಕಾರ?        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಮಾಡಲು ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದಲೂ ಹಕ್ಕು ಮಂಡನೆ        ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತೆಯ ಕುರಿತು ಚರ್ಚಿಸಲು ರಾಜ್ಯಸಭೆಯಲ್ಲಿ ಸಮಯ ಕೋರಿದ ಟಿಎಂಸಿ        ರಾಹುಲ್​ ಗಾಂಧಿಯನ್ನು ದೇಶ ಒಪ್ಪಿಕೊಳ್ಳುತ್ತಿದೆ ಎಂದ ಎಂಎನ್​ಎಸ್​ ವರಿಷ್ಠ ರಾಜ್​ ಠಾಕ್ರೆ        ತೆಲಂಗಾಣದ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಕೆ. ಚಂದ್ರಶೇಖರ್​ ರಾವ್​       
Breaking News

ತಮಿಳುನಾಡಿನ ಗುತ್ತಿಗೆದಾರ ಸಂಸ್ಥೆ ಮೇಲೆ ಐಟಿ ದಾಳಿ: ಅಲ್ಲಿ ಸಿಕ್ಕ ಸಂಪತ್ತು ಎಷ್ಟು ಗೊತ್ತೇ?

Tuesday, 17.07.2018, 1:21 PM       No Comments

ಚೆನ್ನೈ: ಆದಾಯ ತೆರಿಗೆ ಇಲಾಖೆ ತಮಿಳುನಾಡಿನ ರಸ್ತೆ ನಿರ್ಮಾಣ ಸಂಸ್ಥೆಯೊಂದರ ಮೇಲೆ ಸೋಮವಾರ ದಾಳಿ ನಡೆಸಿದ್ದು, ಅಧಿಕ ಪ್ರಮಾಣದ ಹಣ ಮತ್ತು ಚಿನ್ನವನ್ನು ವಶಕ್ಕೆ ಪಡೆದಿದೆ. ದಾಳಿ ವೇಳೆ 100 ಕೆಜಿ ಚಿನ್ನದ ಗಟ್ಟಿಗಳು, 160 ಕೋಟಿ ರೂಪಾಯಿ ನಗದನ್ನು ಜಪ್ತಿ ಮಾಡಲಾಗಿದೆ.
ಆದಾಯ ತೆರಿಗೆ ಇಲಾಖೆ ತನ್ನ ಇತಿಹಾಸದಲ್ಲೇ, ಇಡೀ ದೇಶದಲ್ಲೇ ಈ ಮೊತ್ತದ ಹಣ ಮತ್ತು ಚಿನ್ನವನ್ನು ವಶಕ್ಕೆ ಪಡೆದಿದ್ದು ಇದೇ ಮೊದಲು ಎಂದು ಅಧಿಕಾರಿಗಳು ಹೇಳಿದ್ದಾರೆ.

ತಮಿಳುನಾಡಿನಲ್ಲಿ ರಸ್ತೆ ನಿರ್ಮಾಣದ ಗುತ್ತಿಗೆ ಪಡೆಯುವ ಎಸ್​ಪಿಕೆ ಸಂಸ್ಥೆ ಮತ್ತು ಅದರ ಪಾಲುದಾರಿಕಾ ಸಂಸ್ಥೆಗಳ ಒಟ್ಟು 22 ಸ್ಥಳದಲ್ಲಿ ದಾಳಿ ಸೋಮವಾರದಿಂದ ಪರಿಶೀಲನೆ ನಡೆಯುತ್ತಿದೆ. ದಾಖಲೆ ಪತ್ರಗಳ ಪರಿಶೀಲನೆ ನಡೆಸುತ್ತಿರುವ ಆದಾಯ ತೆರಿಗೆ ಇಲಾಖೆಯು ಈ ವರೆಗೆ 100 ಕೆಜಿ ಚಿನ್ನದ ಗಟ್ಟಿ ಮತ್ತು 160 ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆದಿದೆ. ದಾಳಿ ಇನ್ನೂ ಮುಂದುವರಿದಿದೆ. ಪರಿಶೀಲನೆ ಮುಕ್ತಾಯವಾಗುವ ಹೊತ್ತಿಗೆ ಇನ್ನಷ್ಟು ಹಣ, ಅಕ್ರಮ ಸಂಪತ್ತು ಸಿಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಅದಾಯ ತೆರಿಗೆ ಇಲಾಖೆಯು ಈ ವರೆಗೆ ಇಡೀ ದೇಶದಲ್ಲಿ ನಡೆಸಿದ ಬೇರೆಲ್ಲಾ ದಾಳಿಗಳಿಗಿಂತಲೂ ಈ ದಾಳಿಯಲ್ಲಿ ಅಪಾರ ಪ್ರಮಾಣದ ಸಂಪತ್ತು ಪತ್ತೆ ಹಚ್ಚಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದಕ್ಕೂ ಹಿಂದೆ 2016ರಲ್ಲಿ ತಮಿಳುನಾಡಿನ ಗಣಿ ಉದ್ಯಮಿ ಬಳಿ ಸಿಕ್ಕಿದ್ದ 110 ಕೋಟಿ ರೂಪಾಯಿಗಳ ಹಣವೇ ಅತಿ ದೊಡ್ಡ ಮೊತ್ತವಾಗಿತ್ತು.

ಎಸ್​ಪಿಕೆ ಸಂಸ್ಥೆ ಆದಾಯ ತೆರಿಗೆ ಇಲಾಖೆಗೆ ವಂಚಿಸಿರುವುದು ದಾಖಲೆಗಳ ಪರಿಶೀಲನೆ ವೇಳೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ಸಂಘಟಿಸಿದ್ದರು.

Leave a Reply

Your email address will not be published. Required fields are marked *

Back To Top