ಮೂವರ ಸಾವು, ಇಬ್ಬರ ಸ್ಥಿತಿ ಗಂಭೀರ

blank
blank

ಗೊಳಸಂಗಿ: ಸಮೀಪದ ರಾಷ್ಟ್ರೀಯ ಹೆದ್ದಾರಿ-50ರ ಹಂಗರಗಿ ಕ್ರಾಸ್‌ನಲ್ಲಿ ಭಾನುವಾರ ಬೆಳಗ್ಗೆ ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿ ಇಬ್ಬರು ತೀವ್ರ ಗಾಯಗೊಂಡಿದ್ದಾರೆ.

ಕಾರಿನಲ್ಲಿದ್ದ ಹರಿಯಾಣ ಮೂಲದ ಚಾಲಕ ರಾಜೇಶ್(32), ಆಂಧ್ರಪ್ರದೇಶದ ವಿಶಾಖಪಟ್ಟಣದ ಏಸುರಾವ್(32) ಸ್ಥಳದಲ್ಲೇ ಮೃತಪಟ್ಟರೆ, ಬುಜಂಗರಾವ್(38) ಚಿಕಿತ್ಸೆಗಾಗಿ ಆಂಬುಲೆನ್ಸ್‌ನಲ್ಲಿ ಸಾಗಿಸುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಉತ್ತರಪ್ರದೇಶ ಮೂಲದ ಪ್ರಮೋದ ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣದ ರಾಮು ಎಂಬುವವರನ್ನು ವಿಜಯಪುರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಐವರು ಭದ್ರಾವತಿಯ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.

ಗುಜರಾತ್ ಮೂಲದ ಲಾರಿ ಚಾಲಕ-ಕ್ಲೀನರ್ ಲಾರಿ ಬಿಟ್ಟು ಪರಾರಿಯಾಗಿದ್ದಾರೆ. ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆದ್ದಾರಿ ತಡೆ
ಅಪಘಾತದ ಸುದ್ದಿ ತಿಳಿದ ಗೊಳಸಂಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಕೂಡಲೇ ಹಂಗರಗಿ ಕ್ರಾಸ್‌ನಲ್ಲಿ ಮೇಲ್ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿ ಒಂದೂವರೆ ಗಂಟೆಗೂ ಅಧಿಕ ಕಾಲ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟಿಸಿ ಟಯರ್‌ಗೆ ಬೆಂಕಿ ಹಚ್ಚಿದರು. ಇದರಿಂದ ಅಂದಾಜು 10 ಕಿ.ಮೀ.ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವಲ್ಲದೆ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.

ಬಸವನಬಾಗೇವಾಡಿ ಸಿಪಿಐ ಸೋಮಶೇಖರ ಜುಟ್ಟಲ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ನಿರತರ ಮನವೊಲಿಸಲು ಮುಂದಾದರಾದರೂ ಪ್ರಯೋಜನವಾಗಲಿಲ್ಲ.

ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಅರಸಿದ್ದಿ, ಡಿವೈಎಸ್‌ಪಿ ಈ. ಶಾಂತವೀರ, ಮನಗೂಳಿ ಪಿಎಸ್‌ಐ ಎನ್.ಬಿ. ಶಿವೂರ, ಚಂದ್ರಶೇಖರ ಹೆರಕಲ್ಲ, ಎಎಸ್‌ಐ ಎಂ.ಎ. ಮುಲ್ಲಾ ಮತ್ತಿತರರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರ ಮನವೊಲಿಸಿ ಹೆದ್ದಾರಿ ಸಂಚಾರ ಸುಗಮಗೊಳಿಸಿದರು.





Share This Article

ವಿದುರ ನೀತಿ: ಇಂತಹ ಜನರಿಂದ ದೂರ ಇರಿ.. ಇಲ್ಲವಾದ್ರೆ ಅಪಾಯಕ್ಕೆ ಸಿಲುಕುತ್ತೀರಿ! | Vidura Niti

Vidura Niti: ಮಹಾಭಾರತದಲ್ಲಿ ಪ್ರಮುಖರಲ್ಲಿ ವಿದುರ ಕೂಡ ಒಬ್ಬರು. ಬರೀ ಕೌರವ ಮತ್ತು ಪಾಂಡವರಿಗೆ ಮಾತ್ರ…

ಹುರಿದ ಜೋಳ ಅಥವಾ ಬೇಯಿಸಿದ ಜೋಳ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್​? ಇಲ್ಲಿದೆ ಮಾಹಿತಿ.. | Corn,

Corn: ಸಾಮಾನ್ಯವಾಗಿ ರಸ್ತೆಗಳ ಬದಿಯಲ್ಲಿ ಹುರಿದ ಜೋಳ ಮಾರಾಟ ಮಾಡುವುದನ್ನು ಅಧಿಕ ಗಮನಿಸಿರುತ್ತೀರಾ ಅಲ್ವಾ.. ಹಾಗೇ…