ಭೂದಾನಿ ಕುಟುಂಬಕ್ಕೆ ನೌಕರಿ ಕೊಡಲು ಒತ್ತಾಯ

ಗೊಳಸಂಗಿ: ಶೈಕ್ಷಣಿಕ ರಂಗದ ಅಭ್ಯುದಯಕ್ಕಾಗಿ ಭೂದಾನಗೈದ ದೇವರಗುಡಿ ಕುಟುಂಬದ ಒಬ್ಬ ಸದಸ್ಯರಿಗೆ ಶಿಕ್ಷಣ ಸಂಸ್ಥೆಯಲ್ಲಿ ಮಾನವೀಯತೆ ದೃಷ್ಟಿಯಿಂದ ನೌಕರಿಗೆ ಅವಕಾಶ ನೀಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಒತ್ತಾಯಿಸಿದರು.
ಸಮೀಪದ ಮುತ್ತಗಿ ಗೌರಿಶಂಕರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಭೂದಾನಿ ದಿ. ಗುರುಪಾದಪ್ಪ ಚಂದಪ್ಪ ದೇವರಗುಡಿ ಪರಿವಾರದವರಿಂದ ಮಂಗಳವಾರ ಆರಂಭಗೊಂಡ ಧರಣಿ ಸತ್ಯಾಗ್ರಹಕ್ಕೆ ಬುಧವಾರ ಬೆಂಬಲ ನೀಡಿ ಅವರು ಮಾತನಾಡಿದರು.
ಧರಣಿಗೆ ನಾನು ವೈಯಕ್ತಿಕವಾಗಿ ಬೆಂಬಲ ನೀಡಿದ್ದೇನೆ. ಇದಕ್ಕೆ ನಮ್ಮ ಸಂಘಟನೆಯ ಬೆಂಬಲ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎರಡನೇ ದಿನದ ಧರಣಿಯಲ್ಲಿ ಸಿದ್ದರಾಮ ಅಂಗಡಗೇರಿ, ಶಿವಪ್ಪ ದೇವನಗಾವಿ, ಹನುಮಂತ ಮಾಳಜಿ, ಚಂದ್ರಾಮಪ್ಪ ತೆಗ್ಗಿ, ಈರಪ್ಪ ಯರನಾಳ, ಶಾಂತಗೌಡ ಬಿರಾದಾರ, ಹನುಮಂತ ತೋಟದ, ಶಾರದಾ ಲಮಾಣಿ, ಈರಣ್ಣ ದೇವರಗುಡಿ, ಬೋರವ್ವ ಬಾಗೇವಾಡಿ, ಕಸ್ತೂರಿ ಕಾದಳ್ಳಿ, ಭಾರತಿ ದೇವರಗುಡಿ, ನೇತ್ರಾ ದೇವರಗುಡಿ, ಶ್ವೇತಾ ದೇವರಗುಡಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *