ಗೊಳಸಂಗಿ: ಭಂಡಾರದೊಡೆಯನೆಂದೇ ಪ್ರಸಿದ್ಧಿಯಾದ ಗ್ರಾಮದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಸ್ಥಳೀಯ ಹಾಲುಮತ ಸಮಾಜದ ನೇತೃತ್ವದಲ್ಲಿ ಭಾನುವಾರ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ಬೆಳಗ್ಗೆ 6 ಗಂಟೆಗೆ ಅಭಿಷೇಕ ಮಾಡುವ ಮೂಲಕ ಮೂರು ದಿನದ ವೈಭವದ ಜಾತ್ರೆ ಆರಂಭವಾಯಿತು.
ಮಧ್ಯಾಹ್ನ 2 ಗಂಟೆ ವೇಳೆಗೆ ಬನಶಂಕರಿ ದೇವಸ್ಥಾನ ಬಳಿಯ ಗಂಗಾಸ್ಥಳದಿಂದ ಕಲಶ ಹಾಗೂ ಸ್ಥಳೀಯ, ವಂದಾಲ, ಹುಣಶಾಳ ಗ್ರಾಮಗಳ ಬೀರಲಿಂಗೇಶ್ವರ, ಕೆಂಚಮ್ಮದೇವಿ ಮತ್ತು ಬುದ್ನಿ ಗ್ರಾಮದ ಜಟ್ಟಿಂಗೇಶ್ವರ ದೇವರುಗಳ ಪಲ್ಲಕ್ಕಿಗಳ ಅದ್ದೂರಿ ಮೆರವಣಿಗೆ ಜರುಗಿತು.
ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ಪಾಲ್ಗೊಂಡ ಭಕ್ತರು ಭಂಡಾರದಲ್ಲಿ ಮಿಂದೆದ್ದು ಸಂಭ್ರಮದಿಂದ ಕುಣಿದಾಡಿದರು. ಇಂಗಳೇಶ್ವರದ ರೇವಣಸಿದ್ಧೇಶ್ವರ, ಉಣ್ಣಿಬಾವಿಯ ಜಟ್ಟಿಂಗೇಶ್ವರರ ಡೊಳ್ಳಿನ ವಾಲಗಗಳು ಮೆರವಣಿಗೆಯ ಸಂಭ್ರಮ ಇಮ್ಮಡಿಗೊಳಿಸಿದವು.
ಬಹುತೇಕ ಮಹಿಳೆಯರು ಹಾಗೂ ಪುರುಷರು ಹಳದಿ ಬಣ್ಣದ ಬಟ್ಟೆಯಲ್ಲಿ ಗಮನ ಸೆಳೆದರು.
ವೀರಗಾರಿಕೆಯ ಪೂಜಾರರಾದ ಹಳ್ಳದ ಗೆಣ್ಣೂರಿನ ಸಿದ್ದಪ್ಪ ಪೂಜಾರಿ, ಮಟ್ಟಿಹಾಳದ ಬೀರಪ್ಪ ಪೂಜಾರಿ, ಅರಷಣಗಿಯ ಸಿದ್ದಪ್ಪ ಪೂಜಾರಿ, ಅರಳಿಚಂಡಿಯ ಶಿವಾನಂದ ಪೂಜಾರಿ, ಯರಗಲ್ಲದ ಬೀರಪ್ಪ ಪೂಜಾರಿ, ಗೊಳಸಂಗಿಯ ಸೋಮಲಿಂಗ ಪೂಜಾರಿ, ಗೋಪಾಲ ದಳವಾಯಿ, ಮಲ್ಲಪ್ಪ ಮಂಕಣಿ, ಮಲಕಾಜಿ ಬೇನಾಳ, ಪ್ರಸಾದ ದಳವಾಯಿ, ಬಸವರಾಜ ಕಾರಜೋಳ, ಶಿವಯೋಗೆಪ್ಪ ಬೇನಾಳ, ಸುರೇಶ ಮಂಕಣಿ, ಮುದಕಪ್ಪ ಕಾರಜೋಳ, ಮಂಜುನಾಥ ಅಬಲಾಪುರ ಇತರರಿದ್ದರು.
ಇಡೀ ರಾತ್ರಿ ಗಾಯಕರಾದ ಸುಮಿತ್ರಾ ಮುಗಳಿಹಾಳ, ಪಿಂಟು ಅಳಗಿ ಹಾಗೂ ಸಂಗಡಿಗರಿಂದ ಡೊಳ್ಳಿನ ಪದಗಳ ಕಾರ್ಯಕ್ರಮ ಜರುಗಿದವು.