ಗೋಕರ್ಣ: ಸಮುದ್ರ ತೀರದ ಆಸುಪಾಸು ಬಡ ಮೀನುಗಾರರು, ಕೃಷಿಕರು ಇನ್ನಿತರ ನಾಗರಿಕರು ಮನೆ ಕಟ್ಟಿಕೊಳ್ಳಲು ಸಿಆರ್ರೆಡ್ (ಕರಾವಳಿ ವಲಯ ನಿಯಂತ್ರಣ) ಕಾನೂನು ಅಡ್ಡಿಪಡಿಸುತ್ತದೆ. ಅನಾದಿಯಿಂದ ಅರಣ್ಯದಲ್ಲಿರುವವರಿಗೆ ಅರಣ್ಯ ಕಾಯ್ದೆ ಮತ್ತು ಮಂದಿರ ಸುತ್ತಲಿನವರಿಗೆ ಪ್ರಾಚ್ಯವಸ್ತು ಇಲಾಖೆ ನಿಯಮಗಳು ಕಟ್ಟಡ ಕಟ್ಟಲು, ರಿಪೇರಿ ಮಾಡಲು ಮತ್ತು ಯಾವುದೇ ಬದಲಾವಣೆ ಮಾಡಲು ಸರ್ವಥಾ ಒಪ್ಪಿಗೆ ನೀಡದೆ ಸತಾಯಿಸುವ ಪದ್ಧತಿ ಬೆಳೆದು ಬಂದಿದೆ. ಆದರೆ, ಸರ್ಕಾರಿ ಸ್ವಾಧೀನದ ನಿಗಮವೊಂದು ಕಾನೂನಾತ್ಮಕವಾದ ಯಾವುದೇ ಪರವಾನಗಿ, ನಿರಾಕ್ಷೇಪಣಾ ಪತ್ರ (ಎನ್ಒಸಿ) ಇಲ್ಲದೆ ಅಕ್ರಮವಾಗಿ ಬೃಹತ್ ವಾಣಿಜ್ಯ ಸಮುಚ್ಚಯವನ್ನು ಇಲ್ಲಿಯ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಿರ್ವಿುಸುತ್ತಿರುವುದು ವ್ಯಾಪಕ ವಿರೋಧವನ್ನು ಹುಟ್ಟಿಹಾಕಿ ನಿರ್ಮಾಣ ವಿವಾದದ ಸುಳಿಗೆ ಸಿಲುಕಿದೆ.
ಸಕ್ರಮವಾದ ಅಕ್ರಮ: ಇಲ್ಲಿನ ಗಂಜಿಗದ್ದೆಯಲ್ಲಿ 13 ರೈತ ಕುಟುಂಬಗಳಿಗೆ ಸೇರಿದ 2 ಎಕರೆ 29 ಗುಂಟೆ 2 ಆಣೆ ಭತ್ತದ ಬೆಳೆ ಬೆಳೆವ ಫಲವತ್ತಾದ ಕೃಷಿ ಭೂಮಿಯನ್ನು ಸರ್ಕಾರ 1994ರಲ್ಲಿ ವಾಣಿಜ್ಯೇತರ ಉದ್ದೇಶಗಳಿಗಾಗಿ ಸ್ವಾಧೀನ ಪಡಿಸಿಕೊಂಡಿತು. ರೈತರ ವಿರೋಧದ ನಡುವೆಯೂ ಅಲ್ಲಿ ಬಸ್ ನಿಲ್ದಾಣ ನಿರ್ವಿುಸಲಾಯಿತು. ಆದರೆ, ಆ ಭೂಮಿಯ ಪೂರ್ಣ ಪ್ರದೇಶವನ್ನು ಸಾರಿಗೆ ನಿಗಮಕ್ಕೆ ಒಪ್ಪಿಸದೇ ಭಾಗಶಃ ಜಮೀನು ಕಾನೂನಾತ್ಮಕವಾಗಿ ಹಸ್ತಾಂತರವಾಗದೆ ಹಾಗೇ ಉಳಿದಿರುವುದರಿಂದ ಕಾನೂನು ಪ್ರಕ್ರಿಯೆ ಅಪೂರ್ಣವಾಗಿದೆಯಾಗಿ ಇವತ್ತಿಗೂ ಸಂಬಂಧಿಸಿದ ರೈತರಿಂದ ದೂರುಗಳಿವೆ. ಜತೆಗೆ ಕೆಲವು ರೈತರಿಗೆ ಪರಿಹಾರದ ಪೂರ್ಣ ಮೊತ್ತ ಸಂದಾಯವಾಗಿಲ್ಲ ಎಂಬ ಆಪಾದನೆಯಿದೆ. ಇಂತಹ ಸ್ಥಳದಲ್ಲಿ ಬಸ್ ನಿಲ್ದಾಣ ನಿರ್ವಿುಸಿ ಕೆಲ ವರ್ಷಗಳ ನಂತರ ಪ್ರವೇಶ ದ್ವಾರದಲ್ಲಿ ವಾಣಿಜ್ಯ ಮಳಿಗೆಗಳನ್ನು ಸಹ ನಿಗಮ ನಿರ್ವಿುಸಿ ಬಾಡಿಗೆಗೆ ನೀಡಿತು.
ತಲೆ ಎತ್ತಲಿದೆ ಬಹು ಮಹಡಿ?: ಈ ನಿಲ್ದಾಣದಲ್ಲಿ ವಾಹನ ನಿಲುಗಡೆಗಾಗಿ ಮೀಸಲಿಟ್ಟ ವಿಶಾಲ ಜಾಗದಲ್ಲಿ ಕಳೆದ ಕೆಲವು ದಿನಗಳಿಂದ ಬಹು ಮಹಡಿ ವಸತಿ ಸಮುಚ್ಚಯ ಮತ್ತು ಹೋಟೆಲ್ ನಿರ್ವಣಕ್ಕೆ ಸಿದ್ಧತೆ ನಡೆದಿದೆ. ನಿಗಮದಿಂದ ಗುತ್ತಿಗೆದಾರರನ್ನು ಗೊತ್ತುಪಡಿಸಿದ್ದು, ಭರದಿಂದ ಕಾಮಗಾರಿ ಮುಂದುವರಿದೆ. ಸಾರ್ವಜನಿಕ ಉಪಯೋಗಕ್ಕಾಗಿ ಮಾತ್ರ ಎಂದು ಬಲವಂತವಾಗಿ ರೈತರಿಂದ ವಶಕ್ಕೆ ಪಡೆದ ಕೃಷಿ ಭೂಮಿಯನ್ನು ಈಗ ಮೂಲ ಒಪ್ಪಂದ ಮತ್ತು ಕಾನೂನಿಗೆ ವಿರೋಧವಾಗಿ ವಾಣಿಜ್ಯ ಲಾಭಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ವಿರುದ್ಧ ಸಾರ್ವಜನಿಕರಿಂದ, ಸ್ಥಳೀಯ ಪಂಚಾಯಿತಿಯಿಂದ, ಸಂಬಂಧಿಸಿದ ರೈತರಿಂದ ಮತ್ತು ಕ್ಷೇತ್ರದ ಸಕರಿಂದ ಕೂಡ ಬಲವಾದ ಆಕ್ಷೇಪ ವ್ಯಕ್ತವಾಗಿದೆ. ಇದರ ಸಂಗಡ ಚುನಾಯಿತ ಪ್ರತಿನಿಧಿ, ಜಾಗಕ್ಕೆ ಹೊಂದಿಕೊಂಡಿರುವವರು ಮತ್ತು ಭೂಮಿ ಕಳೆದುಕೊಂಡವರು ಈ ಸಂಬಂಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ತಡೆಯಾಜ್ಞೆಗೆ ಮನವಿ ಮಾಡಿದ್ದಾರೆ.
ಸಕಾರಾತ್ಮಕ ವಿರೋಧ: ಬಸ್ ನಿಲ್ದಾಣದಲ್ಲಿ ಲಾಜ್, ಹೋಟೆಲ್ ಮತ್ತು ವಾಣಿಜ್ಯ ಸಂಕೀರ್ಣ ಕಟ್ಟುವ ಬಗ್ಗೆ ಸರ್ಕಾರಕ್ಕೆ ಮತ್ತು ನ್ಯಾಯಾಯಲಯಕ್ಕೆ ಸಲ್ಲಿಸಿರುವ ದೂರಿನಲ್ಲಿ ಈ ರೀತಿ ಕಾರಣಗಳನ್ನು ನೀಡಲಾಗಿದೆ.
ಪಂಚಾಯಿತಿ ನೋಟೀಸ್: ಸ್ಥಳೀಯರ ಆಕ್ಷೇಪಕ್ಕೆ ಪುಷ್ಟಿಯಾಗಿ ಸ್ಥಳೀಯ ಪಂಚಾಯಿತಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗೀಯ ಅಧಿಕಾರಿಗಳಿಗೆ ಎನ್ಒಸಿ ಪಡೆಯದೆ ಕಟ್ಟಡ ನಿರ್ಮಾಣ ಮಾಡುತ್ತಿರುವ ಸಂಬಂಧ ಈಗಾಗಲೇ ಎರಡು ನೋಟೀಸ್ ಜಾರಿಗೊಳಿಸಿದೆ. ಸೆ. 11ರಂದು ನೀಡಲಾದ ನೋಟೀಸ್ನಲ್ಲಿ ಕಟ್ಟಡ ನಿರ್ವಣಕ್ಕೆ ಪರವಾನಗಿ ಪಡೆಯದೆ ವಾಹನಗಳ ರ್ಪಾಂಗ್ ಬಗ್ಗೆ ಮೀಸಲಾದ ಗರಿಷ್ಠ ಜಾಗದಲ್ಲಿ ಕಟ್ಟಡ ಕಟ್ಟುತ್ತಿರುವುದರಿಂದ ವಾಹನಗಳು ತಂಗಲು ಅತೀವ ಅನನುಕೂಲವಾಗಲಿದೆ. ಸದರಿ ಸ್ಥಳ ಸರ್ಕಾರಿ ವಾಹನಗಳ ಜತೆಗೆ ವಿಶೇಷ ರಜಾದಿನಗಳಲ್ಲಿ ಮತ್ತು ಮಹಾಶಿವರಾತ್ರಿ ಜಾತ್ರಾ ಸಂದರ್ಭದಲ್ಲಿ ಬರುವ ಯಾತ್ರಿಕರ ವಾಹನಗಳಿಗೂ ನಿಲ್ಲಿಸಲು ಪ್ರಶಸ್ತ ಸ್ಥಳವಾಗಿ ಇವತ್ತಿಗೂ ಉಪಯೋಗದಲ್ಲಿದೆ. ಈ ಹಿನ್ನೆಲೆಗಳಿಂದ ಪಂಚಾಯಿತಿ ಸರ್ವ ಸದಸ್ಯರ ಸಾಮಾನ್ಯ ಸಭೆ ಕಟ್ಟಡ ರಚನೆಯನ್ನು ಕೂಡಲೇ ನಿಲ್ಲಿಸಲು ಸರ್ವಾನುಮತದಿಂದ ಠರಾಯಿಸಿದೆ. ಇದರ ಸಂಗಡ ಜನಪ್ರತಿನಿಧಿಗಳ ಮತ್ತು ಸ್ಥಳೀಯರ ಆಗ್ರಹದ ಮೇರೆಗೆ ಸ್ಥಳೀಯ ಶಾಸಕ ದಿನಕರ ಶೆಟ್ಟಿ ಅವರು ಸ್ಥಳಕ್ಕೆ ಭೇಟಿಯಿತ್ತ ವೇಳೆ ನಿರ್ವಣವನ್ನು ಪರಿಶೀಲಿಸಿ ಕಾಮಗಾರಿ ನಿಲ್ಲಿಸಲು ಸೂಚಿಸಿದ್ದಾರೆ. ಆದಾಗ್ಯೂ ಕಟ್ಟಡ ಕಾರ್ಯವನ್ನು ನಿಲ್ಲಿಸದೆ ಮುಂದುವರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಕಾಯ್ದೆ ಉಲ್ಲೇಖ 3ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದಾಗಿ ಪಂಚಾಯತಿ ನೋಟೀಸ್ನಲ್ಲಿ ಎಚ್ಚರಿಸಲಾಗಿದೆ.
ಸರ್ಕಾರಿ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಉದ್ದೇಶದ ಕಟ್ಟಡಕ್ಕೆ ಎನ್ಒಸಿ ನೀಡುವ ಬಗ್ಗೆ ಸಾರಿಗೆ ಇಲಾಖೆ ವತಿಯಿಂದ ಪರವಾನಗಿಗಾಗಿ ಪಂಚಾಯಿತಿಗೆ ಲಿಖಿತ ಮನವಿ ನೀಡಲಾಗಿತ್ತು. ಪಂಚಾಯಿತಿ ವತಿಯಿಂದ ಕಟ್ಟಡ ನಿರ್ಮಾಣ ಪರವಾನಗಿ ಪಡೆಯಲು ಒದಗಿಸಬೇಕಾದ ವಿವಿಧ ದಾಖಲೆಗಳನ್ನು ಸಲ್ಲಿಸುವಂತೆ ಜೂ. 10ರಂದು ಸಾರಿಗೆ ಇಲಾಖೆ ವಿಭಾಗೀಯ ಅಧಿಕಾರಿಗಳಿಗೆ ಲಿಖಿತ ವಿವರ ರವಾನಿಸಲಾಗಿತ್ತು. ಆದರೆ, ಸಾರಿಗೆ ಇಲಾಖೆಯಿಂದ ಯಾವುದೇ ದಾಖಲೆಯನ್ನು ಪಂಚಾಯಿತಿಗೆ ಒದಗಿಸಿಲ್ಲ. ಈ ನಡುವೆ ಕಟ್ಟಡ ರಚನೆಗೆ ಸಾರ್ವಜನಿಕರು, ಚುನಾಯಿತ ಜನಪ್ರತಿನಿಧಿಗಳು ಮತ್ತು ಶಾಸಕರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಗ್ರಾಪಂ ಅಧಿನಿಯಮ 1993ರ ನಿಯಮ 64ರ ಪ್ರಕಾರ ಸಂಬಂಧಿಸಿದ ಸಾರಿಗೆ ಅಧಿಕಾರಿಗಳಿಗೆ ಸೆ. 11ರಂದು ಎರಡನೇ ನೋಟೀಸ್ ಕೊಡಲಾಗಿದೆ.
| ಮಂಜುನಾಥ ಕೆ., ಅಭಿವೃದ್ಧಿ ಅಧಿಕಾರಿ ಗೋಕರ್ಣ ಗ್ರಾಪಂ