ಗೋಕಾಕದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ಗೋಕಾಕ: ನಗರದ ಕಿಲ್ಲಾದಲ್ಲಿರುವ ಶ್ರೀ ಬಸವೇಶ್ವವರ ದೇವಸ್ಥಾನದಲ್ಲಿ ವಿಶ್ವಗುರು ಬಸವ ಜಯಂತಿ ಅಂಗವಾಗಿ 3 ದಿನಗಳವೆರೆಗೆ ವಿವಿಧ ಧರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇಲ್ಲಿಯ ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಿದವು. 6ರಂದು ವಿದ್ಯಾರ್ಥಿಗಳಿಗೆ ಶ್ರೀ ಬಸವೇಶ್ವರ ಜೀವನ ಕುರಿತು ಭಾಷಣ ಸ್ಪರ್ಧೆ ಹಾಗೂ ಬಸವೇಶ್ವರ ಕುರಿತ ವಚನ ಗಾಯನ ಕಾರ್ಯಕ್ರಮ ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 7ರಂದು ಬೆಳಗ್ಗೆ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಲಾಯಿತು.

ನಂತರ ಭಜನಾ ಕಾರ್ಯಕ್ರಮ, ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಡಾ.ವಿ.ಬಿ.ಉಪ್ಪಿನ ಅವರು ಧ್ವಜಾರೋಹಣ ಮಾಡಿದರು. ರವೀಂದ್ರ ಕಿತ್ತೂರ ದಂಪತಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು. ಅಕ್ಕನ ಬಳಗ ಮಾತೆಯರಿಂದ ಶ್ರೀ ಬಸವೇಶ್ವರ ನಾಮಕರಣ ಮತ್ತು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, 12 ಗಂಟೆಗೆ ಮಹಾಪ್ರಸಾದ ನಡೆಯಿತು.

ಸಂಜೆ ಶ್ರೀ ಬಸವೇಶ್ವರ ಭಾವಚಿತ್ರದ ಪಲ್ಲಕ್ಕಿ ಉತ್ಸವಕ್ಕೆ ಡಾ.ಶೆಟ್ಟೆಪ್ಪ ಗೋರೋಶಿ ದಂಪತಿ ಚಾಲನೆ ನೀಡಿದರು. ನಂತರ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಿ.ಬಿ.ಅಂಗಡಿ, ಮಹಾಂತೇಶ ತಾಂವಶಿ, ಸೋಮಶೇಖರ ಮಗದುಮ್ಮ, ಎಲ್.ಪಿ.ಪಾಟೀಲ, ಲೋಕಯ್ಯ ಹಿರೇಮಠ, ಅಶೋಕ ಪೂಜಾರಿ, ಅಶೋಕ ಹೆಗ್ಗಣ್ಣವರ, ಈರಯ್ಯ ಹಿರೇಮಠ, ಬಿ.ಎಸ್.ಕುಂಬಾರ, ವಿಶ್ವನಾಥ ಕಡಕೋಳ ಇತರರು ಇದ್ದರು.