ಸರ್ಕಾರ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡದಿರುವುದು ನಾಚಿಕೆಗೇಡಿನ ಸಂಗತಿ: ಟಿ.ಎ.ಶರವಣ

1 Min Read
ಸರ್ಕಾರ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡದಿರುವುದು ನಾಚಿಕೆಗೇಡಿನ ಸಂಗತಿ: ಟಿ.ಎ.ಶರವಣ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಉತ್ಸವ ನಡೆಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ, ಆದರೆ ಸರ್ಕಾರಿ ಶಾಲಾ ಮಕ್ಕಳಿಗೆ ಒಂದು ಜೊತೆ ಸಮವಸ್ತ್ರ ಮತ್ತು ಶೂ ನೀಡಲು ಕಡೆಗಣಿಸುತ್ತಿರುವುದು ನಾಚೀಕೆಗೆಡಿನ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಟೀಕಿಸಿದ್ದಾರೆ.

ಬಡವರ ಮಕ್ಕಳು ಕಲಿಯುವ ಸರ್ಕಾರಿ ಶಾಲೆಯ ಸಮವಸ್ತ್ರ-ಶೂನಲ್ಲಿ ಕೂಡ ದುಡ್ಡು ತಿನ್ನುತ್ತಿರುವುದು ಅತ್ಯಂತ ಹೀನ ಕೃತ್ಯ. ನಿಮ್ಮ ದುರಹಂಕಾರದ ಆಡಳಿತಕ್ಕೆ ಕೋರ್ಟ್ ಸರಿಯಾಗಿ ಛೀಮಾರಿ ಹಾಕಿದೆ. ಈ ಭ್ರಷ್ಟ ಸರ್ಕಾರಕ್ಕೆ ಎಷ್ಟು ಛೀಮಾರಿ ಹಾಕಿದರೂ ಅನ್ಯಾಯ ಅಕ್ರಮ ಮಾಡುವುದನ್ನು ಬಿಡುತ್ತಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಉತ್ಸವ, ಸಮಾವೇಶ, ಪಕ್ಷದ ಪ್ರಚಾರ ಮಾಡುವುದರಲ್ಲಿ ಇರುವ ಉತ್ಸಾಹ ಸರ್ಕಾರಿ ಶಾಲೆಗಳ ಮೇಲಿಲ್ಲ. ವಿದ್ಯೆ ಮಕ್ಕಳೆಲ್ಲ ಹಕ್ಕು, ಆದರೆ ಸರ್ಕಾರ ಸರ್ಕಾರಿ ಶಾಲೆಗಳೆಂದರೆ ತಾತ್ಸಾರ ತೋರುತ್ತಿದೆ. ವರ್ಷವೇ ಮುಗಿಯುತ್ತ ಬಂದರೂ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡದಷ್ಟು ಸರ್ಕಾರ ದಿವಾಳಿಯಾಗಿದೆಯೇ ಎಂದು ಸದನದಲ್ಲಿ ಪ್ರಶ್ನಿಸಿದ್ದೆ. ಮಾತ್ರವಲ್ಲ ಕೂಡಲೇ ಶಾಲಾ ಮಕ್ಕಳಿಗೆ ಸಮವಸ್ತ್ರ-ಶೂ ಒದಗಿಸಬೇಕು ಎಂದೂ ಒತ್ತಾಯಿಸಿದ್ದೆ ಎಂಬುದಾಗಿ ಅವರು ತಿಳಿಸಿದ್ದಾರೆ.

ಇನ್ನೇನು ನಿಮ್ಮ ಕೆಲಸದ ಅವಧಿ ಮುಗಿಯುತ್ತೆ, ಮನೆಗೆ ಹೊರಡಿ: ಈ ಕಂಪನಿಯಲ್ಲಿ ಉದ್ಯೋಗಿಗಳಿಗೆ ಹೀಗೊಂದು ಎಚ್ಚರಿಕೆ!

See also  ಅರ್ಜಿಗಳ ಸಮಿತಿ ಭೇಟಿ
Share This Article