More

    ಬೆಳಗಾವಿ: ಗೋಹತ್ಯಾ ನಿಷೇಧ ಕಾಯ್ದೆ ಅನುಷ್ಠಾನವಾಗಲಿ

    ಬೆಳಗಾವಿ: ಗೋ ರಕ್ಷಕರ ನಿರ್ಲಕ್ಷೃದಿಂದ ಸಾವಿರಾರು ಗೋವು ಕಸಾಯಿಖಾನೆ ಪಾಲಾಗುತ್ತಿದ್ದು, ಕೇಂದ್ರ ಸರ್ಕಾರ ಗೋ ಹತ್ಯಾ ನಿಷೇಧ ಕಾಯ್ದೆ ಜಾರಿಗೊಳಿಸುವ ಮೂಲಕ ಗೋ ರಕ್ಷಣೆಗೆ ಮುಂದಾಗಬೇಕಿದೆ ಎಂದು ಶ್ರೀಶೈಲ ಜಗದ್ಗರು ಡಾ. ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದ್ದಾರೆ.

    ಚನ್ಮಮ್ಮ ಕಿತ್ತೂರು ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಭಾರತೀಯ ಗೋವು ಸಂರಕ್ಷಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಗೋ ಸಂರಕ್ಷಣಾ ವರದಿ ಬಿಡುಗಡೆ ಮತ್ತು ಗೋ ಸಂರಕ್ಷಣಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

    ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪೂಜ್ಯ ಸ್ಥಾನ ನೀಡಲಾಗಿದ್ದು, 33 ಕೋಟಿ ದೇವರುಗಳು ಗೋವಿನಲ್ಲಿವೆ ಎಂದು ಪೂಜಿಸಲಾಗುತ್ತದೆ. ಆರೋಗ್ಯ ಸರಿ ಇಲ್ಲ ಎಂದು ಆಸ್ಪತ್ರೆಗೆ ಹೋಗುವ ಬದಲು ಗೋ ಶಾಲೆಗೆ ಭೇಟಿ ನೀಡಿ ಸೇವೆ ಮಾಡಬೇಕು. ಗೋ ಸೇವೆ ಮಾಡುವುದರಿಂದ ಅಸಾಮಾನ್ಯ ರೋಗಗಳು ನಿವಾರಣೆಯಾಗುತ್ತವೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಗೋ ತಳಿಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕು ಎಂದರು. ಜಿಪಂ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಮಾತನಾಡಿ, ಸರ್ಕಾರಗಳು ಗೋ ತಳಿಗಳ ಸಂರಕ್ಷಣೆ ಕುರಿತು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ ಗೋ ಉತ್ಪಾದನೆ ಉತ್ತೇಜಿಸುವ ಕೆಲಸ ಮಾಡಬೇಕಿದೆ. ಲಾಭಾಂಶಗಳನ್ನು ಲೆಕ್ಕ ಹಾಕದೆ ಪ್ರತಿಯೊಬ್ಬರು ಮನೆಗಳಲ್ಲಿ ಗೋ ಸಾಕಣೆ ಪ್ರಾರಂಭಿಸಬೇಕು ಎಂದರು.

    ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಬಹುಮುಖ ಉಪಕಾರಿಯಾಗಿರುವ ಗೋ ಮಾತೆಯ ರಕ್ಷಣೆ ನಮ್ಮ ಜವಾಬ್ದಾರಿಯಾಗಬೇಕು. ಗೋ ಹತ್ಯಾ ನಿಷೇಧ ಕಾಯ್ದೆ ಜಾರಿಗೆ ತರುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು. ಭಾರತೀಯ ಗೋ ಸಂರಕ್ಷಣಾ ಸಮಿತಿ ಸಂಸ್ಥಾಪಕ ದಯಾನಂದ ಸವದಿ ಮಾತನಾಡಿ, ದಿನಕಳೆದಂತೆ ಗೋ ರಕ್ಷಣೆ ರಾಜಕೀಯ ದಾಳವಾಗಿ ಬಳಕೆಯಾಗುತ್ತಿದೆ. ತಾರತಮ್ಯ ಮಾಡುತ್ತಿರುವುದು ಸರಿಯಲ್ಲ. ಕೂಡಲೆ ಗೋವು ಗಣತಿ ನಡೆಸಿ ಅವುಗಳ ತಳಿ ರಕ್ಷಣೆಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಿಕಿಯ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಮಾತನಾಡಿದರು. ವಿರಕ್ತಯ್ಯ ಸಾಲಿಮಠ, ಜಿಪಂ ಸದಸ್ಯರಾದ ರೋಹಿಣಿ ಪಾಟೀಲ, ಸಂದೀಪ ದೇಶಪಾಂಡೆ, ಈರಣ್ಣ ಮಾರಿಹಾಳ, ಜಗದೀಶ ವಸ್ತ್ರದ, ಡಾ.ಮಹಾಂತೇಶ ಕಲ್ಮಠ, ಗುರುಸಿದ್ದಯ್ಯ ಕಲ್ಮಠ, ಚನ್ನಬಸವಯ್ಯ ಹಿರೇಮಠ ಇದ್ದರು. ವೈ.ಎಂ ತಳವಾರ ಪ್ರಾರ್ಥಿಸಿದರು. ಗಂಗಾಧರ ಪೂಜೇರ ಸ್ವಾಗತಿಸಿದರು. ಸಿದ್ದು ಹುಲಮನಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts