ಪಶುವೈದ್ಯಲೋಕಕ್ಕೆ ಅಚ್ಚರಿ ತಂದ ಮೇಕೆಮರಿ: ಇಂತಹ ವಿಚಿತ್ರ ನೀವು ಕೇಳಿದ್ದೀರಾ?

ಬಾಗಲಕೋಟೆ: ಇಲ್ಲೊಂದು ಅಪರೂಪದ ಕುರಿಮರಿ ಹುಟ್ಟಿದ್ದು, ಪಶುವೈದ್ಯಕೀಯ ಲೋಕಕ್ಕೇ ಅಚ್ಚರಿ ತಂದಿದೆ. ಸ್ಥಳೀಯರು, ಈ ಮೇಕೆಯ ಬಗ್ಗೆ ಕೇಳಿದವರೆಲ್ಲ ಆಶ್ಚರ್ಯಚಕಿತರಾಗಿದ್ದಾರೆ.

ತುಳಸಿಗೇರಿ ಗ್ರಾಮದ ಹನುಮಂತ ದಾಸನ್ನವರ ಎಂಬುವರ ಮನೆಯಲ್ಲಿ ಇರುವ ಮೇಕೆಮರಿ ಹುಟ್ಟಿದ ಮೂರೇ ದಿನಕ್ಕೆ ಹಾಲು ನೀಡುತ್ತಿದೆ. ಮೇ 10ರಂದು ಹುಟ್ಟಿರುವ ಮೇಕೆಮರಿ ಇಂದಿಗೂ ಒಂದು ಕಪ್​ನಷ್ಟು ಹಾಲು ಕೊಡುತ್ತಿದ್ದು ಅಚ್ಚರಿ ಮೂಡಿಸಿದೆ.

ಗ್ರಾಮಕ್ಕೆ ಭೇಟಿ ನೀಡಿರುವ ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಇಲಾಖೆ ಪ್ರಭಾರ ಡಿಡಿ ಡಾ.ಆರ್.ಎಸ್.ಪದ್ರಾ ನೇತೃತ್ವದಲ್ಲಿ ಮೇಕೆಮರಿಯ ಆರೋಗ್ಯ ತಪಾಸಣೆ ಮಾಡಿದ್ದಾರೆ. ಅದು ಹಾಲುಕೊಡುವುದನ್ನು ಕಂಡು ಅಧಿಕಾರಿಗಳೂ ಆಶ್ಚರ್ಯ ಚಕಿತರಾಗಿದ್ದಾರೆ. ಮೇಕೆಮರಿ ನೀಡಿದ 10 ಎಂಎಂ ಹಾಲು ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ.