Goat Milk Health Benefits : ಸಾಮಾನ್ಯವಾಗಿ ನಾವು ಹಸುವಿನ ಹಾಲು ಅಥವಾ ಎಮ್ಮೆ ಹಾಲು ಹೆಚ್ಚು ಕುಡಿಯುತ್ತೇವೆ. ಆದರೆ ಹಿಂದಿನ ದಿನಗಳಲ್ಲಿ ಅಂದರೆ ನಮ್ಮ ಅಜ್ಜಿ ತಾತಂದಿರ ಕಾಲದಲ್ಲಿ ಮೇಕೆ ಹಾಲು ಕೂಡ ಕುಡಿಯುತ್ತಿದ್ದರು. ಈಗಲೂ ಕೆಲವು ದೂರದ ಹಳ್ಳಿಗಳಲ್ಲಿ ಮಾತ್ರ ಈ ಮೇಕೆ ಹಾಲು ಕುಡಿಯುತ್ತಾರೆ. ಮೇಕೆ ಹಾಲು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ನಾವು ಇಂದು ನಿಮಗೆ ಮೇಕೆ ಹಾಲಿನಿಂದ ಆರೋಗ್ಯಕಲ್ಕೆ ಸಿಗುವ ಪ್ರಯೋಜನಗಳ ಕುರಿತಾಗಿ ತಿಳಿಸಿ ಕೊಡಲಿದ್ದೇವೆ…
ಮೇಕೆ ಹಾಲಿನಲ್ಲಿ ಪ್ರೋಟೀನ್, ಆರೋಗ್ಯಕರವಾದ ಕೊಬ್ಬುಗಳು, ಜೀವಸತ್ವಗಳು, ಕಬ್ಬಿಣ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ.
ಬಹುತೇಕ ಜನರಿಗೆ ಹಾಲು ಕುಡಿಯವುದರಿಂದ ಒಂದು ರೀತಿ ಅಲರ್ಜಿಯಾಗುವ ಸಂಭವವಿರುತ್ತದೆ. ಆದರೆ ಮೇಕೆ ಹಾಲು ಅಲರ್ಜಿಯಂತ ಸಮಸ್ಯೆಯನ್ನು ಹೊಂದಿಲ್ಲ
ಮೇಕೆ ಹಾಲು ವಿಟಮಿನ್ ಎ ನ ಅತ್ಯುತ್ತಮವಾದ ಮೂಲವಾಗಿದೆ.
ವಿಟಮಿನ್ ಎ ಭರಿತ ಆಹಾರವನ್ನು ಸೇವನೆ ಮಾಡುವುದರಿಂದ ಕಣ್ಣಿನ ಪೊರೆ, ಕೆಲವು ರೀತಿಯ ಕ್ಯಾನ್ಸರ್ ಅಪಾಯಗಳಿಂದ ಮುಕ್ತಿ ಹೊಂದಬಹುದು.
ಮೇಕೆ ಹಾಲು ತ್ವರಿತವಾಗಿ ಜೀರ್ಣವಾಗುತ್ತದೆ. ಹೆಚ್ಚು ಪ್ರೋಟೀನ್ ಹೊಂದಿರುವ ಮೇಕೆ ಹಾಲು ನಿಮ್ಮ ಜೀರ್ಣಕ್ರಿಯೆಗೆ ಅಡ್ಡಿಯುಂಟು ಮಾಡುವುದಿಲ್ಲ.
ಅಧಿಕ ರಕ್ತದ ಕೊಲೆಸ್ಟ್ರಾಲ್ ಹೊಂದಿರುವ ಜನರಲ್ಲಿ ಮೇಕೆ ಹಾಲು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಮೇಕೆ ಹಾಲು ಅಪಧಮನಿಗಳು ಮತ್ತು ಪಿತ್ತಕೋಶದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.