ಮನೆಬಾಡಿಗೆಗಿಂತಲೂ ಗೃಹ ಸಾಲದ ಮಾಸಿಕ ಕಂತು ಕಡಿಮೆ ಮಾಡಲು ಸರ್ಕಾರದ ಗುರಿ: ವಿತ್ತ ಸಚಿವ ಅರುಣ್​ ಜೇಟ್ಲಿ

ನವದೆಹಲಿ: ಮನೆ ಬಾಡಿಗೆಗಿಂತಲೂ ಗೃಹ ಸಾಲದ ಮಾಸಿಕ ಕಂತು ಕಡಿಮೆ ಮಾಡುವ ನಿಟ್ಟಿನಲ್ಲಿ ಬಡ್ಡಿ ದರಗಳನ್ನು ಇಳಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅತುಣ್​ ಜೇಟ್ಲಿ ಹೇಳಿದ್ದಾರೆ. ಹೊಸ ವಿತ್ತ ವರ್ಷದ ಆರಂಭದಲ್ಲಿ ಭಾರತೀಯ ರಿಸರ್ವ್​ ಬ್ಯಾಂಕ್​ 2ನೇ ಬಾರಿಗೆ ರೆಪೋ ದರಗಳನ್ನು 25 ಅಂಶಗಳಷ್ಟು ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತೀಯ ರಿಸರ್ವ್​ ಬ್ಯಾಂಕ್​ ರೆಪೋ ದರಗಳನ್ನು ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಬ್ಯಾಂಕ್​ಗಳು ಕೂಡ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತವೆ ಎಂಬ ನಿರೀಕ್ಷೆಯಿದೆ. ಹಾಗೇನಾದರೂ ಆದಲ್ಲಿ ಬಡ್ಡಿ ದರಗಳು ಕಡಿಮೆಯಾಗಲಿವೆ ಎಂದು ಹೇಳಿದರು.

ನಿಧಿಗಳ ಆಂಶಿಕ ವೆಚ್ಚ (ಮಾರ್ಜಿನಲ್​ ಕಾಸ್ಟ್​ ಆಫ್​ ಫಂಡ್ಸ್​) ಆಧರಿಸಿ ಬ್ಯಾಂಕ್​ಗಳು ಬಡ್ಡಿದರವನ್ನು ಇಳಿಸುತ್ತವೆ. ಇದೀಗ ಈ ಕುರಿತು ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲೇ ಸಾಲದ ಮೇಲಿನ ಬಡ್ಡಿ ದರಗಳನ್ನು ಇಳಿಕೆ ಮಾಡುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. (ಏಜೆನ್ಸೀಸ್​)