VIDEO| ದೇಶದ ನಾಗರಿಕರಿಗೆ ಧೋನಿ ಮಗಳು ಜೀವಾ ಕಳುಹಿಸಿದ ವಿಡಿಯೋ ಸಂದೇಶವೇನು?

ನವದೆಹಲಿ: ಬಿಡುವಿನ ಸಮಯದಲ್ಲಿ ಸದಾ ಮಗಳೊಂದಿಗೆ ಸಮಯ ಕಳೆಯುವ ಕೂಲ್​ ಕ್ಯಾಪ್ಟನ್​ ಖ್ಯಾತಿಯ ಎಂ.ಎಸ್​. ಧೋನಿ ಅವರು ಐಪಿಎಲ್​ ನಡುವೆಯೇ ಇಂದು ನಡೆದ ದೇಶದ 5ನೇ ಹಂತದ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ವಿಶೇಷ ಅಂದರೆ, ಮತದಾನದ ಬಳಿಕ ತಮ್ಮ ಮಗಳೊಂದಿಗೆ ಸೇರಿ ದೇಶದ ನಾಗರಿಕರಿಗೆ ವಿಡಿಯೋ ಸಂದೇಶವೊಂದನ್ನು ರವಾನಿಸಿದ್ದಾರೆ.

ಚೆನ್ನೈ ಸೂಪರ್​​ ಕಿಂಗ್ಸ್​ ತಂಡದ ಅಧಿಕೃತ ಟ್ವಿಟರ್​ ಖಾತೆಯಲ್ಲಿ ವಿಡಿಯೋವೊಂದು ಅಪ್​ಲೋಡ್​ ಮಾಡಿ, ನೀವು ಈ ಸೂಪರ್​ ಮಗುವಿನ ಧ್ವನಿಯನ್ನು ಕೇಳಿದ್ದೀರಿ. ಮತದಾನದ ಹಕ್ಕು ನಿಮ್ಮ ಹಕ್ಕು. ನಿಮ್ಮ ನಾಯಕನ್ನು ಆಯ್ಕೆ ಮಾಡುವ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಅಡಿಬರಹವನ್ನು ಬರೆದುಕೊಂಡಿದೆ. ಏಳು ಸೆಕೆಂಡ್​ಗಳ ವಿಡಿಯೋದಲ್ಲಿ ಧೋನಿ ಮಗಳು ಜೀವಾ ಹೋಗಿ ನಮ್ಮ ಅಪ್ಪ-ಅಮ್ಮ ಮತದಾನ ಮಾಡಿದ ರೀತಿ ನೀವು ಮತದಾನ ಮಾಡಿ ಎಂದು ಜನರಿಗೆ ಸಂದೇಶ ರವಾನಿಸಿದ್ದಾಳೆ. ಅಲ್ಲದೆ, ತಂದೆ ಧೋನಿ ಮತದಾನ ಮಾಡಿದ ಬೆರಳಿನ ಶಾಹಿಯನ್ನು ತೋರಿದ ರೀತಿಯಲ್ಲೇ ತನ್ನ ಬೆರಳನ್ನು ಸಾಂಕೇತಿಕವಾಗಿ ತೋರುವ ಮೂಲಕ ನೋಡುಗರ ಮನವನ್ನು ಜೀವಾ ಗೆದ್ದಿದ್ದಾಳೆ.

ಜಾರ್ಖಂಡ್​ ರಾಜಧಾನಿ ರಾಂಚಿಯ ನಿವಾಸಿಯಾಗಿರುವ ಧೋನಿ, ಇಂದು ತಮ್ಮ ರಾಜ್ಯದಲ್ಲಿ ನಡೆಯುತ್ತಿರುವ ರಾಷ್ಟ್ರದ ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನದಲ್ಲಿ ಮತ ಚಲಾವಣೆ ಮಾಡಿದ್ದಾರೆ. ಐಪಿಎಲ್​ ನಡುವೆಯೂ ತಮ್ಮ ಹಕ್ಕನ್ನು ಧೋನಿ ಚಲಾಯಿಸಿದ್ದಾರೆ.

ಐಪಿಎಲ್​ನಲ್ಲೂ ಉತ್ತಮ ಪ್ರದರ್ಶನ ತೋರುತ್ತಿರುವ ಧೋನಿ ನೇತೃತ್ವದ ಸಿಎಸ್​ಕೆ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, ಟ್ರೋಫಿ ಗೆಲ್ಲುವ ಫೇವರಿಟ್​ ತಂಡವಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *