-ಗಣೇಶೋತ್ಸವ ವಿಸರ್ಜನೆ ಮೆರವಣಿಗೆ ಅದ್ಧೂರಿ ಚಾಲನೆ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಈ ಬಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾನ ಮಾಡುವ ಸೌಹಾರ್ದತೆಯ ಸಾರಿದ್ದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಕಾರ್ಯಕ್ಕೆ ಬೆಳಗಾವಿ ಗಣೇಶ ಮಂಡಳಿಗಳು, ಹಿಂದು ಪರ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು ಮುಕ್ತ ಕಂಠದಿಂದ ಹೆಮ್ಮೆ ವ್ಯಕ್ತಪಡಿಸಿದರು.
ನಗರದ ಹುತಾತ್ಮಕ ಚೌಕ್ ನಲ್ಲಿ ಮಂಗಳವಾರ ಗಣೇಶ ಮಹಾಮಂಡಳಿ, ಪಾಲಿಕೆ ಆಯೋಜಿಸಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕಾರ್ಯಕ್ಕೆ ಎಲ್ಲರು ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಡಿಸಿ ಮೊಹಮ್ಮದ್ ರೋಷನ್ ಮಾತನಾಡಿ, ಶಾಂತಿ ಸೌಹಾರ್ದತೆಯಿಂದ ನಾವೆಲ್ಲಾ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸೋಣ. ನಾವೆಲ್ಲಾ ಒಂದು ಒಗ್ಗಟ್ಟಿನಿಂದ ಹಬ್ಬದಲ್ಲಿ ಭಾಗವಹಿಸೋಣ ಎಂದರು.
ವಿಧಾನಪರಿಷತ್ ನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ,ಬೆಳಗಾವಿ ಗಣೇಶೋತ್ಸವ ಕ್ಕೆ 100ವರ್ಷಗಳ ಇತಿಹಾಸ ಹೊಂದಿದೆ. ಲೋಕಮಾನ್ಯ ಬಾಲಗಂಗಾಧರ ತಿಲಕ ಅವರು ಆರಂಭಿಸಿರುವ ಗಣೇಶೋತ್ಸವ ಇಂದಿಗೂ ಅದ್ಧೂರಿಯಾಗಿ ನಡೆಯುತ್ತಿದೆ.ಬೆಳಗಾವಿಯಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಆಗುವುವುದು ಹೆಮ್ಮೆಯ ವಿಷಯ.ಮುಂಬೈ ಬಿಟ್ಟರೆ ಬೆಳಗಾವಿಯಲ್ಲಿ ಉತ್ಸವ, ಮೂರ್ತಿಗಳ ನಿರ್ಮಾಣ. ಆಗುತ್ತಿವೆ.ಸಾಮರಸ್ಯ ದ ಮೂಲಕ ಗಣೇಶೋತ್ಸವ ಆಚರಿಸಿ ಅಧಿಕಾರಿಗಳು, ಜನಪ್ರತಿನಿಧಿಗಳ ಕೈ ಜೋಡಿಸಿದ್ದಾರೆ. ಅದೇ ರೀತಿ ಯಶಶ್ವಿಯಾಗಿ ಮೆರವಣಿಗೆ ಜರುಗಲಿ ಎಂದು ಶುಭ ಹಾರೈಸಿದರು.
ಶಾಸಕ ಅಭಯ ಪಾಟೀಲ ಮಾತನಾಡಿ,ಕಾಕತಾಳೀಯ ಎಂಬಂತೆ ವೇದಿಕೆಯ ಮೇಲೆ ಅಮರ್, ಅಕ್ಬರ್, ಅಂತೋನಿ ಭಾಗವಹಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾಗಿದ್ದು, ನಾವೆಲ್ಲಾ ಸೌಹಾರ್ದ ತೆಯಿಂದ ಗಣೇಶೋತ್ಸವ ಆಚರಿಸೋಣ ಎಂದರು.
ಶಾಸಕ ಆಸೀಫ್ ಸೇಠ್, ಮೇಯರ್ ಸವಿತಾ ಕಾಂಬಳೆ, ಉಪಮೇಯರ್ ಆನಂದ ಚೌಹಾನ್, ಮಾಜಿ ಶಾಸಕ ಅನೀಲ ಬೆನಕೆ, ಜಿಪಂ ಸಿಇಒ ರಾಹುಲ ಶಿಂಧೆ, ಗಣೇಶ ಮಂಡಳ ಅಧ್ಯಕ್ಷ ವಿಜಯ ಜಾಧವ ಇತರರಿದ್ದರು.
ಸೌಹಾರ್ದತೆ ಸಂದೇಶ ಸಾರಿದ ಗಣೇಶ ವಿಸರ್ಜನೆ ಮೆರವಣಿಗೆ ವೇದಿಕೆ
ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…
ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach ) ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…
Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..
ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan) ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…
ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes
ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…