ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮ ಪಂಚಾಯಿತಿ 2ನೇ ಅವಧಿಗೆ ನೂತನ ಅಧ್ಯಕ್ಷರಾಗಿ ಜ್ಞಾನದೇವ ರಾಮಪ್ಪ ಮುನೇನಕೊಪ್ಪ ಮಂಗಳವಾರ ಅವಿರೋಧ ಆಯ್ಕೆಯಾದರು.
ಒಟ್ಟು 9 ಸದಸ್ಯ ಬಲ ಹೊಂದಿರುವ ಭೈರನಹಟ್ಟಿ ಗ್ರಾಪಂ ವತಿಯಿಂದ ಜ್ಞಾನದೇವ ಮುನೇನಕೊಪ್ಪ ಒಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಚುನಾವಣೆ ಅಧಿಕಾರಿ ಎಸ್.ಕೆ. ಇನಾಂದಾರ ಅವಿರೋಧ ಆಯ್ಕೆ ಎಂದು ಘೋಷಿಸಿದರು.
ಗ್ರಾಪಂ ಸದಸ್ಯರಾದ ಲಕ್ಷ್ಮವ್ವ ನಾಗಪ್ಪ ಕಟ್ಟಿಮನಿ, ನಾಗಪ್ಪ ಶಿವಪ್ಪ ಬೆನ್ನೂರ, ಪುಷ್ಪಾ ಬಸನಗೌಡ ಪಾಟೀಲ, ಸುಮಿತ್ರಾ ಯಂಕಪ್ಪ ಐನಾಪೂರ, ಶರಣಬಸಪ್ಪ ಶಿವರಾಯಪ್ಪ ನರಸಾಪೂರ, ಚನ್ನಪ್ಪ ನರಸಪ್ಪ ಬೆಳವಣಿಕಿ, ಯಲ್ಲವ್ವ ಯಂಕಪ್ಪ ಮಾದರ, ಚಂದ್ರು ದಂಡಿನ, ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾಗವೇಣಿ ಸೂಲಕಟ್ಟಿ ಉಪಸ್ಥಿತರಿದ್ದರು.