ಸಮುದ್ರಮಾರ್ಗದಲ್ಲಿ ವಿಶ್ವಯಾನ ಮಾಡಿದ ‘ತಾರಿಣಿ’ ನಾರಿಯರಿಗೆ ಶೌರ್ಯ ಪ್ರಶಸ್ತಿ?

ನವದೆಹಲಿ: 254 ದಿನಗಳ ಕಾಲ ಸಮುದ್ರಮಾರ್ಗದ ಮೂಲಕ ತಾರಿಣಿ ನೌಕೆಯಲ್ಲಿ 21,600 ನಾಟಿಕಲ್​ ಮೈಲಿ ದೂರವನ್ನು ಕ್ರಮಿಸಿ ವಿಶ್ವಯಾನ ಮುಗಿಸಿ ಬಂದ ಆರೂ ಮಹಿಳೆಯರಿಗೆ ಶೌರ್ಯ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಆಗಸ್ಟ್​ 15, ಸ್ವಾತಂತ್ರ್ಯ ದಿನದಂದು ನೌಕಾಪಡೆಯ ಮಹಿಳೆಯರಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಶಿಫಾರಸ್ಸು ಮಾಡಲಾಗಿದ್ದು, ಇದನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ ಎನ್ನಲಾಗಿದೆ.

ಲೆ.ಕಮಾಂಡರ್ ವಾರ್ತಿಕಾ ಜೋಶಿ ನೇತೃತ್ವದ ತಂಡದ ಇತರ ಸದಸ್ಯರಾದ ಲೆ.ಕಮಾಂಡರ್​ಗಳಾದ ಪಿ.ಸ್ವಾತಿ ಮತ್ತು ಪ್ರತಿಭಾ ಜಮ್ವಾಲ್, ಲೆಫ್ಟಿನೆಂಟ್​ಗಳಾದ ಬಿ.ಐಶ್ವರ್ಯಾ, ಪಾಯಲ್ ಗುಪ್ತಾ ಮತ್ತು ಎಸ್.ವಿಜಯಾದೇವಿ ಅವರ ಹೆಸರುಗಳು ಶೌರ್ಯ ಪ್ರಶಸ್ತಿಯಲ್ಲಿ ಕೇಳಿ ಬಂದಿದೆ.

2017ರ ಸೆಪ್ಟೆಂಬರ್​ 10ರಂದು ಗೋವಾದಿಂದ ಶುರುವಾಗಿ 2018ರ ಮೇ 21 ರಂದು ಐಎಸ್​ಎಸ್​ವಿ ತಾರಿಣಿ ನೌಕೆ ಬರೋಬ್ಬರಿ 8 ತಿಂಗಳ ವಿಶ್ವಯಾನ ಸಂಪನ್ನಗೊಳಿಸಿ ವಾಪಸಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ತಾರಿಣಿ ತಂಡದ ಆರು ಮಹಿಳೆಯರನ್ನು ಶ್ಲಾಘಿಸಿ ಸ್ವಾಗತಿಸಿದ್ದರು. (ಏಜೆನ್ಸೀಸ್​)

ತಾರಿಣಿ ಪರಿಕ್ರಮ ನಾರಿ ಪರಾಕ್ರಮ