ಜಾಗತಿಕ ಮಟ್ಟದ ವಸತಿ ಶಾಲೆ-ಕಾಲೇಜು

ಮಂಗಳೂರಿನ ಹೃದಯ ಭಾಗದಿಂದ ಏಳು ಕಿ.ಮೀ ದೂರದಲ್ಲಿರುವ ಶಕ್ತಿನಗರದಲ್ಲಿ ಸುಂದರ ಪ್ರಕೃತಿಯ ಮಡಿಲಲ್ಲಿ ಸ್ಥಾಪನೆಗೊಂಡಿರುವ ಶಿಕ್ಷಣ ಸಂಸ್ಥೆ ‘ಶಕ್ತಿ ವಸತಿ ಶಾಲೆ’ ಹಾಗೂ ‘ಶಕ್ತಿ ಪಿ.ಯು. ಕಾಲೇಜು’. ಶಕ್ತಿ ಎಜುಕೇಷನ್ ಟ್ರಸ್ಟ್ ವತಿಯಿಂದ ಇವು ನಡೆಯುತ್ತಿವೆ.

ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ: ಶಕ್ತಿ ಎಜುಕೇಷನ್ ಟ್ರಸ್ಟ್ ವತಿಯಿಂದ 2015ರಲ್ಲಿ ಈ ಶಾಲೆಯನ್ನು ಆರಂಭಿಸಲಾಯಿತು. ನಾಲ್ಕು ತರಗತಿಗಳು ತಲಾ 25 ಮಕ್ಕಳಂತೆ ಕಾರ್ಯ ನಿರ್ವಹಿಸುತ್ತಿದೆ. ಪೂರ್ಣ ತರಬೇತಿ ಪಡೆದ ಪರಿಣತ ಶಿಕ್ಷಕರ ಸೂಕ್ತ ಮಾರ್ಗದರ್ಶನದಿಂದ ಶಾಲೆ ನಡೆಯುತ್ತಿದೆ.

ಶಕ್ತಿ ವಸತಿ ಶಾಲೆ: 2018ರಲ್ಲಿ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸಲಾಗಿದೆ. ವಿಶಾಲವಾದ ಪ್ರದೇಶದಲ್ಲಿ ವಿನೂತನ ವಿನ್ಯಾಸ ಹೊಂದಿರುವ ಕಟ್ಟಡಗಳನ್ನು ಇವು ಹೊಂದಿದ್ದು, ಅನುಭವಿ ಶಿಕ್ಷಕರಿಂದ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಅತ್ಯುತ್ತಮ ಪ್ರಯೋಗಾಲಯಗಳು, ಆಧುನಿಕ ಬೋಧನೋಪಕರಣಗಳು ಹಾಗೂ ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನು ಎಲ್ಲಾ ತರಗತಿಗಳಿಗೂ ಒದಗಿಸಲಾಗಿದೆ. ಎಲ್ಲಾ ಕೊಠಡಿಗಳೂ ಎ.ಸಿ ಸೌಲಭ್ಯ ಹೊಂದಿವೆ. ಸಂವಹನ ಕಲೆಯಲ್ಲಿ ಪಳಗಿರುವ ತರಬೇತಿ ಪಡೆದ ಅನುಭವಿ ಶಿಕ್ಷಕರ ತಂಡ ಈ ಶಾಲೆಯಲ್ಲಿದೆ ಎಂಬುದು ಹೆಗ್ಗಳಿಕೆ.

ಇಲ್ಲಿ ಒಂದನೇ ತರಗತಿಯಿಂದ ಸಿ.ಬಿ.ಎಸ್.ಇ ಪಠ್ಯಕ್ರಮ ಜಾರಿಯಲ್ಲಿದೆ. ಆಟೋಟಗಳಿಗೆ, ಡ್ರಾಯಿಂಗ್, ಹಾಡು, ನೃತ್ಯ, ನಾಟಕ ಮೊದಲಾದ ಲಲಿತ ಕಲೆಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ. ಸರ್ಕಾರದ ನಲಿ-ಕಲಿ ವಿಧಾನವನ್ನು ಇಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಅವಶ್ಯಕತೆಗೆ ಅನುಗುಣವಾಗಿ ಆಪ್ತ ಸಮಾಲೋಚಕರು ಕಾರ್ಯನಿರ್ವಹಿಸುತ್ತಿದ್ದಾರೆ. ವಿಶಾಲವಾದ ಆಟದ ಮೈದಾನ, ಗುಣಮಟ್ಟದ ಈಜುಕೊಳ ಈ ಶಾಲೆಯಲ್ಲಿದೆ. ಎಲ್ಲಾ ಆಟಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಶಾಲಾ ವಾಹನ: ಊರಿನ ಮತ್ತು ಪರವೂರಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ. 5ನೆಯ ತರಗತಿಯ ನಂತರದ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಇದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 1 ರಿಂದ 8 ನೇ ತರಗತಿಯ ವರೆಗೆ ತರಗತಿಗಳು ನಡೆಯಲಿವೆ.

ಶಕ್ತಿ ಪದವಿ ಪೂರ್ವ ಕಾಲೇಜು: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಸರ್ಕಾರದಿಂದ ಅನುಮತಿ ಪಡೆದು ತರಗತಿಗಳನ್ನು 2018ರ ಶೈಕ್ಷಣಿಕ ಸಾಲಿನಿಂದ ಆರಂಭಿಸಲಾಗಿದೆ. PCMB,PCMC ಮತ್ತು PCMS ಆಯ್ಕೆಗಳು ವಿಜ್ಞಾನ ವಿಭಾಗದಲ್ಲಿದ್ದು, ವಾಣಿಜ್ಯ ವಿಭಾಗದಲ್ಲಿ EBAC ಹಾಗೂ SEBA ಆಯ್ಕೆಗಳಿರುತ್ತವೆ. 2000 ಚದರ ಅಡಿಯಲ್ಲಿ ಪ್ರತ್ಯೇಕ ಸುಸಜ್ಜಿತ ಪ್ರಯೋಗಾಲಯಗಳು, ನುರಿತ ಪ್ರಾಧ್ಯಾಪಕರಿಂದ ವಿಶೇಷ ತರಗತಿಗಳು ಇಲ್ಲಿನ ವೈಶಿಷ್ಟ್ಯ.

ಭಾಷೆಗಳ ಕಲಿಕೆಗೆ ವಿಶೇಷ ಪ್ರಯತ್ನ ನೀಡಲಾಗುತ್ತದೆ. ಇಂಗ್ಲಿಷ್ ಜತೆಗೆ, ಕನ್ನಡ, ಹಿಂದಿ, ಫ್ರೆಂಚ್ ಹಾಗೂ ಸಂಸ್ಕೃತ ವಿಷಯವನ್ನು ಆಯ್ಕೆ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶವಿದೆ.

ಶಕ್ತಿ ಕೋಚಿಂಗ್ ಅಕಾಡೆಮಿ: ವಿಶೇಷ ತರಗತಿಗಳನ್ನು ನಡೆಸಲು ಮಂಗಳೂರಿನ ಬಿಕರ್ನಕಟ್ಟೆಯ ಕ್ಲಾಸಿಕ್ ಪ್ರೈಡ್​ನಲ್ಲಿ ಶಕ್ತಿ ಕೋಚಿಂಗ್ ಅಕಾಡೆಮಿ ಪ್ರಾರಂಭಿಸಲಾಗಿದೆ. ಈ ಕೋಚಿಂಗ್ ಅಕಾಡೆಮಿಯಲ್ಲಿ ರಾಜ್ಯ ಹಾಗೂ ಅಂತರ ರಾಜ್ಯದ ಯಾವುದೇ ವಿದ್ಯಾರ್ಥಿಯು ತಮಗೆ ಅವಶ್ಯವಿರುವ ವಿಜ್ಞಾನ ಹಾಗೂ ವಾಣಿಜ್ಯದ ಕೋಚಿಂಗನ್ನು ಪಡೆಯಬಹುದು. ಅವುಗಳು ಘಉಉಖ, ಒಐಕMಉ, ಅಐಐMಖ ಮತ್ತು ಇತರ ವೈದ್ಯಕೀಯ ಪ್ರವೇಶದ ಪರೀಕ್ಷೆಗಳ ತರಬೇತಿ.

JEE ((MAIN & ADVANCED KCET COMED-K, KVPYಆಗಿದೆ. ವಾಣಿಜ್ಯ ವಿದ್ಯಾರ್ಥಿಗಳಿಗೆ CA,CPT,CS & CLAT  ತರಬೇತಿ ನೀಡಲಾಗುತ್ತದೆ.

ಕರ್ನಾಟಕ ಹಾಗೂ ದೇಶದ ಅನೇಕ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ರ್ಯಾಂಕ್ ಪಡೆಯಲು ಕಾರಣೀಭೂತರಾದ ನುರಿತ ಅಧ್ಯಾಪಕರ ಈ ಕೋಚಿಂಗ್ ಅಕಾಡೆಮಿಯನ್ನು ಮುನ್ನಡೆಸುತ್ತಾರೆ.

ಕ್ಯಾಂಟೀನ್: 350 ಮಂದಿ ಕುಳಿತು ಊಟ ಮಾಡಬಹುದಾದ ವಿಶಾಲ ಕ್ಯಾಂಟೀನ್ ಸೌಲಭ್ಯವನ್ನು ಈ ಕಾಲೇಜು ಹೊಂದಿದೆ. ನಾಲ್ಕು ಎಕರೆ ವಿಸ್ತೀರ್ಣ ಹೊಂದಿರುವ ಜಾಗದಲ್ಲಿ ಆಟದ ಮೈದಾನ, ಈಜು ಕೊಳ, ಕ್ರೀಡಾ ಕೊಠಡಿ, ಭದ್ರತಾ ಕೊಠಡಿ, ಸಿಸಿಟಿವಿ ನಿಯಂತ್ರಣ, ಹವಾ ನಿಯಂತ್ರಿತ ಕೊಠಡಿಗಳನ್ನು ನಾವು ಕಾಣಬಹುದು.

ವೈದ್ಯರ ಲಭ್ಯತೆ: 24 ಗಂಟೆಗಳ ಕಾಲವೂ ಕರೆಗೆ ತಕ್ಷಣ ಪ್ರತಿಕ್ರಿಯಿಸಿ ವಿದ್ಯಾರ್ಥಿಗಳ ಆರೋಗ್ಯ ಪಾಲನೆಗೆ ಗಮನ ಕೊಡುವ ನುರಿತ ವೈದ್ಯಾಧಿಕಾರಿಗಳು ನಮ್ಮೊಂದಿಗಿದ್ದಾರೆ.

ಅತ್ಯುತ್ತಮ ವಸತಿ ಸೌಲಭ್ಯ

ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪದವಿ ಪೂರ್ವ ಕಾಲೇಜು ಅತ್ಯುತ್ತಮ ಅಂತಾರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ನಿಲಯ ಹೊಂದಿದ್ದು ಪ್ರತಿಯೊಂದು ಕೊಠಡಿಯಲ್ಲಿ ನಾಲ್ಕು ವಿದ್ಯಾರ್ಥಿಗಳಿಗೆ ವಾಸ ಕಲ್ಪಿಸಲಾಗಿದೆ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಸ್ಥಳದಲ್ಲಿ ವಸತಿ ನಿಲಯ ಕಲ್ಪಿಸಲಾಗಿದೆ. ಹವಾನಿಯಂತ್ರಿತ ಕೊಠಡಿಗಳ ಸೌಲಭ್ಯ ಕೂಡ ಇದೆ. ಎಲ್ಲಾ ಕೊಠಡಿಗಳು ಪ್ರತ್ಯೇಕ ಶೌಚಾಲಯ ಹಾಗೂ ಸ್ನಾನ ಗೃಹಗಳನ್ನು ಹೊಂದಿದೆ.

ಸಂರ್ಪಸಿ: ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್ ಮತ್ತು ಶಕ್ತಿ ಪ.ಪೂ ಕಾಲೇಜು

ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಹತ್ತಿರ, ಶಕ್ತಿನಗರ

ಮಂಗಳೂರು5016 Website: www.shakthi.net.in Email: [email protected]

PH: 08242230452 / 9686000046 /9611588813

Leave a Reply

Your email address will not be published. Required fields are marked *