VIDEO: ರಶೀದ್​ ಖಾನ್​ ಹೆಲಿಕಾಪ್ಟರ್​ ಹೊಡೆತಕ್ಕೆ ಚೆಂಡು ಮೈದಾನದಾಚೆಗೆ!

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್​.ಧೋನಿ ಅವರ ಹೆಲಿಕಾಪ್ಟರ್​ ಶಾಟ್​ ಎಂದರೆ ಕ್ರೀಡಾಭಿಮಾನಿಗಳ ಪಾಲಿಗೆ ಹಬ್ಬದ ಊಟದಂತೆ. ಧೋನಿ ಮೈದಾನದಲ್ಲಿದ್ದರೆ, ಹೆಲಿಕಾಪ್ಟರ್​ ಶಾಟ್​ ಎಂದು ಅಭಿಮಾನಿಗಳು ಗಟ್ಟಿ ಧ್ವನಿಯಲ್ಲಿ ಕೂಗುತ್ತಿರುತ್ತಾರೆ. ಹಾಗೇ ಹೆಲಿಕಾಪ್ಟರ್​ ಶಾಟ್​ ಹೊಡೆಯಲು ಪ್ರಯತ್ನಿಸಿ ಕೆಲವರು ಅದರಲ್ಲಿ ಯಶಸ್ವಿಯಾದವರು ಇದ್ದಾರೆ. ಆ ಸಾಲಿಗೆ ಆಫ್ಘಾನಿಸ್ತಾನ ತಂಡದ ಸ್ವಿನ್ನರ್​​ ರಶೀದ್​ ಖಾನ್​ ಸೇರಿದ್ದಾರೆ.

ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟ ಧೋನಿ ಹೆಲಿಕಾಪ್ಟರ್​ ಶಾಟ್​ ಬಾರಿಸಿದರೂ ಎಂದರೆ ಸಿಕ್ಸರ್​ ಹೋಗದೇ ಇರಲ್ಲ. ಅದೇ ಪ್ರಯತ್ನ ಮಾಡಿರುವ ಆಫ್ಘನ್ ಬೌಲರ್​ ರಶೀದ್​ ತಾವು ಬಾರಿಸಿದ ಹೆಲಿಕಾಪ್ಟರ್​ ಶಾಟ್​ನಿಂದ ಚೆಂಡನ್ನು ಮೈದಾನದಿಂದ ಆಚೆಗೆ ಕಳುಹಿಸಿ ಕ್ರೀಡಾಭಿಮಾನಿಗಳ ಹುಬ್ಬೇರುವಂತೆ ಮಾಡಿದ್ದಾರೆ. ಸಿಕ್ಸರ್​ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್​ ಆಗಿದೆ.

ಶಾರ್ಜಾದಲ್ಲಿ ನಡೆಯುತ್ತಿರುವ ಟಿ10 ಲೀಗ್​​ನಲ್ಲಿ ಮರಾಠ ಅರಬಿಯನ್ ಪರ ಆಡಿದ ರಶಿದ್​ ಖಾನ್​ ಪಕ್ತೂನ್ಸ್​ ತಂಡದ ಮಹಮ್ಮದ್​ ಇರ್ಫಾನ್​ ಓವರ್​ನಲ್ಲಿ ಹೆಲಿಕಾಪ್ಟರ್​ ಶಾಟ್​ ಬಾರಿಸಿದರು. ಆದರೂ ರಶೀದ್​ ಅವರ ತಂಡ 8 ವಿಕೆಟ್​ಗಳಿಂದ ಸೋಲಿಗೆ ಶರಣಾಯಿತು. ​

ಸಿಕ್ಸರ್​ ಮೂಲಕ ಧೋನಿಗೆ ಧನ್ಯವಾದ ಅರ್ಪಿಸಿರುವ ರಶೀದ್​ನನ್ನು ಅನ್ವೇಷಕ ಎಂದು ಹೊಗಳಿದ್ದಾರೆ. (ಏಜೆನ್ಸೀಸ್​)