PHOTOS| ಕ್ರೀಡಾಂಗಣದಲ್ಲಿ ಅಬ್ಬರಿಸುವ ‘ಮ್ಯಾಕ್ಸಿ’ ಕ್ಲೀನ್​ ಬೋಲ್ಡ್​ ಆಗಿದ್ದು ಮಾತ್ರ ಭಾರತದ ಹುಡುಗಿಗೆ!

ಮೆಲ್ಬೋರ್ನ್​: ತಮ್ಮ ವಿದ್ವಂಸಕಾರಿ ಬ್ಯಾಟಿಂಗ್​ನಿಂದ ಎಲ್ಲರನ್ನೂ ತಮ್ಮ ಅಭಿಮಾನದ ಬಲೆಯಲ್ಲಿ ಬೀಳುವಂತೆ ಮಾಡುವ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್​ಮನ್​ ಹಾಗೂ ಆಲ್​ರೌಂಡರ್​​ ಆಟಗಾರ ಗ್ಲೇನ್​ ಮ್ಯಾಕ್ಸ್​ವೆಲ್​ ಅವರು ಇದೀಗ ಸ್ವತಃ ಪ್ರೀತಿಯ ಬಲೆಯಲ್ಲಿ ಬಿದ್ದು, ಅಪ್ಪಟ ಪ್ರೇಮ ಪೂಜಾರಿಯಾಗಿದ್ದಾರೆ.

ಹೌದು, ಎಷ್ಟೋ ಲವ್ ಅಫೇರ್​ ಹಾಗೂ ಹಾರ್ಟ್​ಬ್ರೆಕ್​ ನಂತರ ಕೊನೆಗೂ ಗ್ಲೆನ್ ಮ್ಯಾಕ್ಸ್​ವೆಲ್ ಲವ್​ನಲ್ಲಿ ಬಿದ್ದಿದ್ದಾರೆ. ವಿಶೇಷ ಎಂದರೆ ಮ್ಯಾಕ್ಸಿ, ಕ್ಲೀನ್​ ಬೋಲ್ಡ್​ ಆಗಿರುವುದು ನಮ್ಮ ಭಾರತೀಯ ಮೂಲದ ಯುವತಿಗೆ. ಯಾರದು ಎಂಬ ಕೂತುಹಲವಿದೆಯಾ? ಆ ಕುತೂಹಲವನ್ನು ನಾವು ತಣಿಸುತ್ತೇವೆ ಮುಂದೆ ಓದಿ…
ವಿನಿ ರಾಮನ್​ ಎಂಬ ಹುಡುಗಿಯೊಂದಿಗೆ ಮ್ಯಾಕ್ಸಿಯ ಪ್ರೇಮ ಪುರಾಣ ಆರಂಭವಾಗಿದೆ. ಇನ್​ಸ್ಟಾಗ್ರಾಂನ ಪ್ರೋಫೈಲ್​ ಪ್ರಕಾರ ವಿನಿ ರಾಮನ್​ ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿ ವಾಸವಾಗಿದ್ದು, ಅವರೊಬ್ಬ ಫಾರ್ಮಾಸಿಸ್ಟ್​ ಆಗಿದ್ದಾರೆ. ಸದ್ಯ ಮ್ಯಾಕ್ಸಿ, ಪ್ರೀತಿಗೆ ಮನಸೋತಿರುವ ವಿನಿ, ಮ್ಯಾಕ್ಸಿಯೊಂದಿಗೆ ಡೇಟಿಂಗ್​ನಲ್ಲಿದ್ದಾರೆ. 2017ರಲ್ಲಿ ವಿನಿ ಹಾಗೂ ಮ್ಯಾಕ್ಸಿ​ ಮೊದಲ ಬಾರಿಗೆ ಭೇಟಿಯಾಗಿದ್ದರು. ಅಲ್ಲಿಂದ ಇಬ್ಬರ ಇನ್​ಸ್ಟಾಗ್ರಾಂನಲ್ಲಿ ಬರೀ ಡೇಟಿಂಗ್​ ಫೋಟೋಗಳದ್ದೇ ಕಾರುಬಾರು ಆಗಿದೆ.

ಇತ್ತೀಚೆಗೆ 2019ರ ಆಸ್ಟ್ರೇಲಿಯನ್​ ಕ್ರಿಕೆಟ್​ ಅವಾರ್ಡ್​ ಫಂಕ್ಷನ್​ಗೂ ವಿನಿಯನ್ನು ಕರೆದೊಯ್ದ ಗ್ಲೆನ್​, ಸಂಬಂಧವನ್ನು ಅಧಿಕೃತಗೊಳಿಸಿದ್ದರು. ವಿನಿ ನನ್ನ ಬೆಟರ್​ ಹಾಫ್ ಎಂದು ಮುದ್ದಾದ ಫೋಟೋವೊಂದನ್ನು ಹರಿಬಿಟ್ಟು ಎಲ್ಲ ಗಾಸಿಪ್​ಗೂ ಮ್ಯಾಕ್ಸಿ ಫುಲ್​ಸ್ಟಾಪ್​ ಹಾಕಿದ್ದರು. ಸದ್ಯ ಮ್ಯಾಕ್ಸಿ ವಿಶ್ವಕಪ್​ನಲ್ಲಿ ಬ್ಯುಸಿಯಾಗಿದ್ದು ಮುಂದಿನ ವರ್ಷ ಸಪ್ತಪದಿ ತುಳಿಯುವ ವಿಚಾರದಲ್ಲಿದ್ದಾರಂತೆ. (ಏಜೆನ್ಸೀಸ್​)

View this post on Instagram

Australian Cricket Awards • @gmaxi_32 🥂💕

A post shared by VINI (@vini.raman) on

View this post on Instagram

Miss you @gmaxi_32 ❤️👫 #prettyflyforawhiteguy

A post shared by VINI (@vini.raman) on

Leave a Reply

Your email address will not be published. Required fields are marked *