ಡಂಬುಲಾ: ಬೌಲಿಂಗ್ನಲ್ಲಿ ದಿಟ್ಟ ತಿರುಗೇಟು ನೀಡಿದ ನ್ಯೂಜಿಲೆಂಡ್ ತಂಡ ಆತಿಥೇಯ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ 2ನೇ ಹಾಗೂ ಅಂತಿಮ ಪಂದ್ಯದಲ್ಲಿ ಅಲ್ಪಮೊತ್ತವನ್ನು ರಸಿಕೊಂಡು 5 ರನ್ಗಳಿಂದ ಜಯಿಸಿದೆ. ಕೊನೇ ಓವರ್ನಲ್ಲಿ ಲಂಕಾಗೆ 8 ರನ್ ಬೇಕಿದ್ದಾಗ ಗ್ಲೆನ್ ಫಿಲಿಪ್ಸ್ 5 ಎಸೆತಗಳಲ್ಲಿ 3 ವಿಕೆಟ್ ಉರುಳಿಸಿ ಕಿವೀಸ್ ಗೆಲ್ಲಿಸಿದರು. ಇದರಿಂದ 2 ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ.
ರಣಗಿರಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಕಿವೀಸ್, ಸ್ಪಿನ್ನರ್ ವಾನಿಂದು ಹಸರಂಗ (17ಕ್ಕೆ 4) ಮತ್ತು ವೇಗಿ ಮಥೀಶ ಪಥಿರಣ (11ಕ್ಕೆ 3) ಮಾರಕ ದಾಳಿಗೆ ಕುಸಿದು 19.3 ಓವರ್ಗಳಲ್ಲಿ 108 ರನ್ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಲಂಕಾ 19.5 ಓವರ್ಗಳಲ್ಲಿ 103 ರನ್ಗಳಿಗೆ ಆಲೌಟ್ ಆಗಿ ಸೋಲುಂಡಿತು.
ನ್ಯೂಜಿಲೆಂಡ್: 19.3 ಓವರ್ಗಳಲ್ಲಿ 108 (ರಾಬಿನ್ಸನ್ 0, ಯಂಗ್ 30, ಚಾಪ್ಮನ್ 2, ಫಿಲಿಪ್ಸ್ 4, ಬ್ರೇಸ್ವೆಲ್ 0, ಸ್ಯಾಂಟ್ನರ್ 19, ಕ್ಲಾರ್ಕ್ಸನ್ 24, ಹಸರಂಗ 17ಕ್ಕೆ 4, ಪಥಿರಣ 11ಕ್ಕೆ 3, ತುಷಾರ 22ಕ್ಕೆ 2). ಶ್ರೀಲಂಕಾ: 19.5 ಓವರ್ಗಳಲ್ಲಿ 103 (ನಿಸ್ಸಂಕಾ 52, ಕಮಿಂಡು 1, ಅಸಲಂಕಾ 0, ರಾಜಪೆ 15, ತೀಕ್ಷಣ 14, ಗ್ಯುರ್ಸನ್ 7ಕ್ಕೆ 3, ಬ್ರೇಸ್ವೆಲ್ 23ಕ್ಕೆ 2, ಫಿಲಿಪ್ಸ್ 6ಕ್ಕೆ 3).
ರಣಜಿ ಟ್ರೋಫಿಯಲ್ಲಿ ಕರ್ನಾಟಕದ ನಾಕೌಟ್ ಹಾದಿ ಕಠಿಣ; ಹೀಗಿದೆ ಮುಂದಿನ ಸವಾಲು…