More

    ಯುವ ಸಮೂಹಕ್ಕೆ ಮೌಲ್ಯಧಾರಿತ ಶಿಕ್ಷಣ ನೀಡಿ

    ರಿಪ್ಪನ್‌ಪೇಟೆ: ಆಧುನಿಕ ತಂತ್ರಜ್ಞಾನದಿಂದ ಒತ್ತಡದ ಜೀವನದಲ್ಲಿ ಬದುಕುತ್ತಿರುವ ಯುವ ಸಮೂಹಕ್ಕೆ ಮೌಲ್ಯಧಾರಿತ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು. ಆಗ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದು ರೋಟರಿ ಜಿಲ್ಲಾ ಗೌರ್ನರ್ ಬಿ.ಸಿ ಗೀತಾ ಹೇಳಿದರು.
    ಪಟ್ಟಣದ ರೋಟರಿ ಕ್ಲಬ್ ಭವನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ನಿರ್ಮಾಣ ಪುರಸ್ಕಾರ ಹಾಗೂ ರೋಟರಿ ಜಿಲ್ಲಾ ಗೌರ್ನರ್ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಯುವ ಸಮೂಹ ಒಳ್ಳೆಯ ಶಿಕ್ಷಣವನ್ನು ಪಡೆದಿದ್ದರೂ ಉತ್ತಮ ಸಂಸ್ಕಾರದ ಅರಿವಿಲ್ಲ. ಒಳ್ಳೆಯ ಸಂಸ್ಕಾರದ ಅರಿವಿದ್ದರೆ ಮಾತ್ರ ಮಾನವನ ಜೀವನದಲ್ಲಿ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬಹುದು ಎಂದರು.
    ಈ ಬಾರಿಯ ರಾಷ್ಟ್ರ ನಿರ್ಮಾಣ ಪುರಸ್ಕಾರಕ್ಕೆ ಭಾಜನರಾದ ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ. ಮಂಜುನಾಥ್, ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗಣಿತಶಾಸದ ಉಪನ್ಯಾಸಕ ಸತೀಶ್ ಹಾಗೂ ಹೆದ್ದಾರಿಪುರ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಸುರೇಶಪ್ಪ ಅವರನ್ನು ಸನ್ಮಾನಿಸಲಾಯಿತು.
    ರಿಪ್ಪನ್‌ಪೇಟೆ ರೋಟರಿ ಕ್ಲಬ್ ಅಧ್ಯಕ್ಷ ದೇವದಾಸ್ ಎಚ್.ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ರವಿ ಕೋಟೋಜಿ, ಎಂ.ಬಿ.ಚಂದ್ರಪ್ಪ, ಎಚ್.ಎಂ.ಸುರೇಶ್, ಎಂ.ಬಿ.ಲಕ್ಷ್ಮಣ ಗೌಡ, ಸೆಬಾಸ್ಟಿನ್ ಮ್ಯಾಥ್ಯೂಸ್, ಎಂ.ರಾಮಚಂದ್ರ ಇದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts