More

    ಮಕ್ಕಳಿಗೆ ಸಂಸ್ಕಾರ, ಲಿಂಗದೀಕ್ಷೆ ನೀಡಿ

    ಲಕ್ಷ್ಮೇಶ್ವರ: ವೀರಶೈವ ಧರ್ಮ ಪರಂಪರೆಯಲ್ಲಿ ಪ್ರತಿಯೊಬ್ಬ ಮಕ್ಕಳಿಗೆ ಸಂಸ್ಕಾರ, ಲಿಂಗದೀಕ್ಷೆ ಮತ್ತು ಜಂಗಮ ವಟುಗಳಿಗೆ ಅಯ್ಯಚಾರವು ಬಹು ಪ್ರಮುಖ ಘಟ್ಟವಾಗಿದೆ. ಅಯ್ಯಚಾರದ ಸಂಸ್ಕಾರ ನೀಡುವುದರಿಂದ ಧಾರ್ಮಿಕ ಕಾರ್ಯ, ಪೂಜೆ-ಪುನಸ್ಕಾರಗಳಲ್ಲಿ ಪಾಲ್ಗೊಳ್ಳುವ ಅಧಿಕಾರ ದೊರಕಿದಂತಾಗುತ್ತದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
    ಪಟ್ಟಣದ ಚನ್ನಮ್ಮನವನ ಕಲ್ಯಾಣಮಂಟಪದಲ್ಲಿ ಸಾಮೂಹಿಕ ಅಯ್ಯಚಾರ, ವಿವಾಹ ಹಾಗೂ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ಅಯ್ಯಚಾರ ಪಡೆದ ವಟುಗಳು ದಿನನಿತ್ಯ ಪೂಜೆ, ಅನುಷ್ಠಾನಗಳನ್ನು ಮಾಡಿಕೊಂಡು ಧರ್ಮ ಸಂರಕ್ಷಿಸುವ ಕಾರ್ಯ ಮಾಡಬೇಕಾಗಿದೆ. ಧರ್ಮ, ಸಂಸ್ಕಾರ, ಮೌಲ್ಯಗಳು ನಮ್ಮ ಹಿರಿಯರ ಬಳುವಳಿಯಾಗಿವೆ ಎಂದರು.
    ಬನ್ನಿಕೊಪ್ಪ ಜಪದಕಟ್ಟಿಮಠದ ಸುಜ್ಞಾನದೇವ ಶಿವಾಚಾರ್ಯರು ಆಶೀರ್ವಚನ ನೀಡಿ, ವಟುಗಳಿಗೆ ಜೋಳಿಗೆ, ಕೈಯಲ್ಲಿ ದಂಡ ಅವರ ಬಲ ಕಿವಿಯಲ್ಲಿ ಪಂಚಾಕ್ಷರಿ ಮಂತ್ರ ಬೋಧಿಸಿ, ಲಿಂಗ-ಅಂಗ ಸಂಸ್ಕಾರ ನೀಡಿದರು. 20ಕ್ಕೂ ಹೆಚ್ಚು ವಟುಗಳು ಅಯ್ಯಚಾರದ ದೀಕ್ಷೆಯನ್ನು ಸ್ವಾಮಿಗಳಿಂದ ಪಡೆದುಕೊಂಡರು.
    ಶಿರಹಟ್ಟಿ ಫಕೀರೇಶ್ವರ ಸಂಸ್ಥಾನಮಠದ ಉತ್ತರಾ ಧಿಕಾರಿ ಶ್ರೀ ಫಕೀರ ದಿಂಗಾಲೇಶ್ವರ ಮಹಾ ಸ್ವಾಮಿಗಳು ಆಗಮಿಸಿ ವಟುಗಳನ್ನು ಮತ್ತು ವಧು-ವರರನ್ನು ಆಶೀರ್ವದಿಸಿದರು. ಮಳೆಮಲ್ಲಿಕಾರ್ಜುನ ಸ್ವಾಮೀಜಿ, ಇತರರು ಉಪಸ್ಥಿತರಿದ್ದರು.
    ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಜಯಲಕ್ಷ್ಮೀ ಗಡ್ಡದೇವರಮಠ, ಸುಜಾತಾ ದೊಡ್ಡಮನಿ, ಹುಮಾಯೂನ್ ಮಾಗಡಿ, ನಾಗಪ್ಪ ವಡಕಣ್ಣವರ, ಎಸ್.ಪಿ. ಪಾಟೀಲ, ಚಂಬಣ್ಣ ಬಾಳಿಕಾಯಿ, ಆನಂದ ಗಡ್ಡದೇವರಮಠ, ಜಯಲಕ್ಷ್ಮೀ ಗಡ್ಡದೇವರಮಠ, ರಾಜಣ್ಣ ಕುಂಬಿ, ಜಯಕ್ಕ ಕಳ್ಳಿ, ಎಂ. ಸಿದ್ದಲಿಂಗಯ್ಯ, ಜೆ.ಆರ್. ಕೊಪ್ಪದ, ತಿಪ್ಪಣ್ಣ ಸಂಶಿ, ಅಮರೇಶ ತೆಂಬದಮನಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts