More

    ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಿ: ಕ್ಷೇತ್ರ ಸಮನ್ವಯಾಧಿಕಾರಿ ಎಂ.ಜಗದೀಶಪ್ಪ

    ಹನುಮಸಾಗರ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶಿಕ್ಷಣ ಇಲಾಖೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶಿಕ್ಷಕರು ಶ್ರಮಿಸಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಂ.ಜಗದೀಶಪ್ಪ ಹೇಳಿದರು.

    ಗುಣಾತ್ಮಕ ಶಿಕ್ಷಣ ನೀಡಲು ಶ್ರಮಿಸಬೇಕು

    ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹನುಮಸಾಗರ ಮತ್ತು ಹನಮನಾಳ ವಲಯದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿದರು. ಎಲ್ಲ ಶಿಕ್ಷಕರು ಇಲಾಖೆ ಕಾರ್ಯಕ್ರಮಗಳ ಬಗ್ಗೆ ಸವಿವರವಾಗಿ ತಿಳಿದುಕೊಳ್ಳಬೇಕು. ದಾಖಲಾತಿ ಆಂದೋಲನ, ಮಕ್ಕಳ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.

    ವಿದ್ಯಾ ಪ್ರವೇಶ ಕಾರ್ಯಕ್ರಮ ಪರಿಚಯಿಸುತ್ತಿರುವುದು ವಿಶೇಷ

    ಬಿಆರ್‌ಪಿ ಡಾ.ಜೀವನ್‌ಸಾಬ್ ವಾಲಿಕಾರ ಮಾತನಾಡಿ, ಬುನಾದಿ ಅಕ್ಷರ ಮತ್ತು ಸಂಖ್ಯಾ ಜ್ಞಾನ ಆಧಾರಿತ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2022 ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಆಶಯದಂತೆ ಒಂದನೇ ತರಗತಿಗೆ ಬರುವ ವಿದ್ಯಾರ್ಥಿಗಳನ್ನು ಕಲಿಕಾ ಪರಿಸರಕ್ಕೆ ಹೊಂದಿಕೊಳ್ಳುವಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳ ಜ್ಞಾನಾತ್ಮಕ ಮತ್ತು ದೈಹಿಕ ವಿಕಾಸದ ಉದ್ದೇಶದಿಂದ 40 ದಿನಗಳ ಕಾಲ ವಿದ್ಯಾ ಪ್ರವೇಶ ಕಾರ್ಯಕ್ರಮ ಪರಿಚಯಿಸುತ್ತಿರುವುದು ವಿಶೇಷವಾಗಿದೆ. ಎಂದರು.

    ಇದನ್ನೂ ಓದಿ: ಹೆಣ್ಮಕ್ಕಳ ಯೋಜನೆಗೆ ಅನುದಾನ ಕೊರತೆ: 2ವರ್ಷದಿಂದ ನೆರವು ಸ್ಥಗಿತ; ಬೇಟಿ ಬಚಾವೋ, ಬೇಟಿ ಪಢಾವೋಗೆ ಹಿನ್ನಡೆ

    ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರಾದ ಯಮನಪ್ಪ ಲಮಾಣಿ, ಶಿಕ್ಷಣ ಸಂಯೋಜಕರಾದ ದಾವಲಸಾಬ ವಾಲಿಕಾರ, ಶಿವಾನಂದ ಪಂಪಣ್ಣನವರ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶರಣಗೌಡ ಗೌಡರ, ವಿಠ್ಠಲ್ ಪತ್ತಾರ, ಯಮನೂರಪ್ಪ ಕುರಿ, ವಸಂತ ರಾಜೂರ, ಹನುಮಂತಪ್ಪ ಗೋಡೆಕಾರ, ಮಂಜುನಾಥ ಪೂಜಾರಿ, ಹಾಗೂ ಹನುಮಸಾಗರ ಮತ್ತು ಹನುಮನಾಳ ವಲಯಗಳ ಮುಖ್ಯ ಶಿಕ್ಷಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts