ಗೋ ಶಾಲೆ ನಿರ್ಮಾಣಕ್ಕೆ ಅನುಮತಿ ನೀಡಿ

blank

ಕಳಸ: ರಸ್ತೆ ಕಚೇರಿ ಮುಂದೆ ನಿಂತು ಪ್ರತಿಭಟನೆ ಮಾಡುವ ಮುಂಚಿತವಾಗಿ ಕಳಸದ ಸರ್ವೇ ನಂ.494ರಲ್ಲಿ ಗೋ ಶಾಲೆ ನಿರ್ಮಿಸಲು ಅನುಮತಿ ನೀಡಬೇಕು ಎಂದು ವಿಶ್ವ ಹಿಂದು ಪರಿಷತ್ ಹಾಸನ ವಿಭಾಗದ ಸಂಚಾಲಕ ಆರ್.ಡಿ ಮಹೇಂದ್ರ ಹೇಳಿದರು.
ಕಳಸದ ಗೇರುತೋಟದಲ್ಲಿ ವಿಶ್ವ ಹಿಂದು ಪರಿಷತ್ ಭಜರಂಗದಳ ಕಳಸ ಪ್ರಖಂಡದಿಂದ ನಡೆದ ಗೋ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಗೊಂದು ಗೋಶಾಲೆ ಬೇಕು ಎಂದು ಸರ್ಕಾರವೇ ಆದೇಶ ಮಾಡಿದೆ. ಆದರೆ ಸರ್ಕಾರ ಅದನ್ನು ಮಾಡುತ್ತಿಲ್ಲ. ಕಳೆದ ಎರಡು ವರ್ಷದಿಂದ ಕಳಸದ ಗೇರು ತೋಟದಲ್ಲಿರುವ ಗೋಮಾಳ ಭೂಮಿಯನ್ನು ಗೋ ಶಾಲೆಗೆ ನೀಡುವಂತೆ ಕೇಳಲಾಗುತ್ತಿದೆ. ಅಲ್ಲದೆ ಅದೇ ಸ್ಥಳದಲ್ಲಿ ಎರಡು ವರ್ಷದಿಂದ ಗೋ ಪೂಜೆ ಮಾಡುವ ಮೂಲಕ ಹೋರಾಟ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ನಾವು ಕಚೇರಿ ಕಟ್ಟಡ ಮಾಡಲು ಭೂಮಿ ಕೇಳುತ್ತಿಲ್ಲ. ಗೋ ರಕ್ಷಣೆಗಾಗಿ ಕೇಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕಚೇರಿ ಮುಂದೆ ನಮ್ಮ ಕೂಗು ಕೇಳಿಸುವ ಮೊದಲು ಗೋ ಶಾಲೆಗೆ ಭೂಮಿ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಧರ್ಮ ಪ್ರಸಾರಕ ಪ್ರಮುಖ್ ಜಗದೀಶ್ ಭಟ್ ಮಾತನಾಡಿ, ಕಳೆದ 20 ವರ್ಷಗಳಿಂದ ಗೋ ಶಾಲೆ ಭೂಮಿಗಾಗಿ ಹೋರಾಟ ನಡೆಸಲಾಗುತ್ತಿದೆ. ಗೋವಿಗಾಗಿ ಇರುವ ಭೂಮಿಯಾಗಿದೆ. ಸರ್ಕಾರ ಭೂಮಿ ಕೊಟ್ಟರೆ ಒಂದು ವರ್ಷದೊಳಗೆ ಇಲ್ಲಿ ಗೋಶಾಲೆ ನಿರ್ಮಾಣ ಮಾಡಲಾಗುವುದು. ಆದಷ್ಟು ಬೇಗ ಈ ಭೂಮಿಯನ್ನು ಗೋ ಶಾಲೆಗೆ ಭೂಮಿ ಮಂಜೂರು ಮಾಡಿಕೊಡ ಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು.
ಕಲಶೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಅನಂತ ಪದ್ಮನಾಭ ಭಟ್ ಮಾತನಾಡಿ, ಗೋವುಗಳನ್ನು ಸುಖವಾಗಿಟ್ಟುಕೊಂಡರೆ ಲೋಕ ಸುಖವಾಗಿರುತ್ತದೆ. ಇದು ಪ್ರತೀ ನಿತ್ಯ ಗೋ ಪೂಜೆ ನಡೆಯುತ್ತಿಲ್ಲ. ಗೋವುಗಳನ್ನು ಸಾಕಬೇಕು ಎಂದು ಹೇಳಿದರು.
ವಿಶ್ವ ಹಿಂದು ಪರಿಷತ್ ಜಿಲ್ಲಾ ಉಪಾಧ್ಯಕ್ಷ ಉಮೇಶ್, ಜಿಲ್ಲಾ ಸಂಯೋಜಕ ಅಜಿತ್ ಕುಲಾಲ್, ಸಹ ಸಂಯೋಜಕ ಮಂಜುನಾಥ್ ದುರ್ಗಾವಾಹಿನಿ ತಾಲೂಕು ಸಂಯೋಜಕಿ ಮೈನಾ, ಕಳಸ ಗ್ರಾ ಪಂ ಅಧ್ಯಕ್ಷೆ ಉಷಾ ವಿಶ್ವನಾಥ್, ಮುಖಂಡರಾದ ಸುಜಯ ಸದಾನಂದ, ಸುಜಿಲ್, ಸಂತೋಷ್, ಪ್ರವೀಣ್, ದೀಕ್ಷಿತ್, ಕಾರ್ತಿಕ್ ಇತರರು ಇದ್ದರು.

Share This Article

ಭಾರತದ ನೋಟಿನಲ್ಲಿರುವ ಮಹಾತ್ಮ ಗಾಂಧಿಜಿ ಅವರ ಫೋಟೋ ಕ್ಲಿಕ್ಕಿಸಿದ್ದು ಯಾವಾಗ & ಎಲ್ಲಿ?; ಇಲ್ಲಿದೆ ಸಂಪೂರ್ಣ ಮಾಹಿತಿ | Information

ಭಾರತದ ನೋಟಿನಲ್ಲಿ ಮಹಾತ್ಮ ಗಾಂಧಿ ಅವರ ಫೋಟೋವನ್ನು ನೀವು ನೋಡಿರಬಹುದು. ಆದರೆ ನೋಟಿನ ಮೇಲೆ ನಗುತ್ತಿರುವ…

ಇಬ್ಬನಿಯಿಂದ ಚಳಿಗಾಲದಲ್ಲಿ ತುಳಸಿ ಗಿಡ ಹಾಳಾಗುತ್ತಿದೆಯೇ?; ಆರೈಕೆಗಾಗಿ ಇಲ್ಲಿದೆ ಸಿಂಪಲ್​ ಟ್ರಿಕ್​​ | Health Tips

ತುಳಸಿಯು ಔಷಧೀಯ ಸಸ್ಯವಾಗಿರುವುದರ ಜತೆಗೆ ಧಾರ್ಮಿಕ ನಂಬಿಕೆಗಳನ್ನೂ ಹೊಂದಿದೆ. ಈ ಸಸ್ಯವನ್ನು ಹಿಂದೂ ಧರ್ಮದಲ್ಲಿ ಅತ್ಯಂತ…

ಬಿಪಿ ಹೆಚ್ಚಾಗಲು ಈ ಆಹಾರ ಪದಾರ್ಥಗಳು ಕಾರಣವೇ; ತಜ್ಞರು ಹೇಳಿದ್ದೇನು? | Health Tips

ನೂಡಲ್ಸ್, ಪಾಪಡ್, ಉಪ್ಪಿನಕಾಯಿ, ಸಾಸ್ ಮತ್ತು ನಮ್ಕೀನ್ ಬಹುತೇಕ ಈ ಎಲ್ಲಾ ಆಹಾರ ಪದಾರ್ಥಗಳು ಪ್ರತಿಯೊಬ್ಬರ…