ಗುಳೇದಗುಡ್ಡ: ಪಟ್ಟಣದ ಡಿಪೋದಿಂದ ಬಾಗಲಕೋಟೆಗೆ ತೆರಳು ಬಸ್‌ಗಳು ತೀರಾ ಹಳೆಯದಾಗಿದ್ದು, ದಾರಿಯಲ್ಲಿ ಕೆಟ್ಟು ನಿಲ್ಲುತ್ತಿವೆ. ಆದ್ದರಿಂದ ಕೂಡಲೇ ಹೊಸ ಬಸ್‌ಗಳನ್ನು ಓಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ರವಿ ಅಂಗಡಿ ಆಗ್ರಹಿಸಿದರು.
ಸ್ಥಳೀಯ ಬಸ್ ಡಿಪೋಕ್ಕೆ ಭೇಟಿ ನೀಡಿದ್ದ ಬಾಗಲಕೋಟೆ ಕೆಎಸ್‌ಆರ್‌ಟಿಸಿ ವಿಭಾಗೀಯ ತಾಂತ್ರಿಕ ಅಧಿಕಾರಿ ಎಸ್.ಬಿ. ಬೈಸರಕರ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಗುಳೇದಗುಡ್ಡ ಬಸ್ ಡಿಪೋದ ಬಸ್ ಬೂದಿನಗಡ ಬಳಿ ಬಸ್ ಚಕ್ರದ ನಟ್‌ಬೋಲ್ಟ್ ಕಳಚಿಬಿದ್ದು ಸ್ವಲ್ಪದರಲ್ಲೇ ಅನಾಹುತ ತಪ್ಪಿದೆ. ಬಸ್‌ಗಳು ಹಳೆಯದಾಗಿದ್ದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಇದರಿಂದ ಬಸ್‌ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ಸಾರ್ವಜನಕರಿಗೆ ಅಪಾಯವಾದರೆ ಯಾರು ಜವಾಬ್ದಾರರು? ಎಂದು ಪ್ರಶ್ನಿಸಿದರು. ಕೂಡಲೇ ಹಳೇಯ ಅಪಾಯಕಾರಿ ಬಸ್‌ಗಳನ್ನು ತೆರವುಗೊಳಿಸಿ ಹೊಸ ಬಸ್‌ಗಳನ್ನು ನೀಡದಿಂದರೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದಕ್ಕೆ ಉತ್ತರಿಸಿದ ಎಸ್.ಬಿ. ಬೈಸರಕರ, ಇನ್ನು ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಮೊನ್ನೆ ನಡೆದ ಘಟನೆಗೆ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಹಂತ ಹಂತವಾಗಿ ಗುಳೇದಗುಡ್ಡ ಬಸ್ ಡಿಪೋಕ್ಕೆ ಹೊಸ ಬಸ್ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಾಮಾಜಿಕ ಕಾರ್ಯಕರ್ತ ಅಶೋಕ ಹೆಗಡಿ ಮಾತನಾಡಿದರು.
ಡಿಪೋ ಮ್ಯಾನೇಜರ್ ವಿದ್ಯಾ ನಾಯಕ, ಮಲ್ಲೇಶಪ ಬೆಣ್ಣಿ, ಸಿದ್ರಾಮಪ್ಪ ಪುರಾಣಿಕಮಠ, ಪ್ರಕಾಶ ವಾಳದಉಂಕಿ, ವಸಂತಸಾ ಧೋಂಗಡೆ, ಶ್ರೀಶೈಲ ಕುಂಬಾರ, ಸಂತೋಷ ನಾಯನೇಗಲಿ, ಭುವನೇಶ ಪೂಜಾರಿ, ಬಾಳು ನಿರಂಜನ, ಸಂತೋಷ ತಿಪ್ಪಾ, ಸೋಮಶೇಖರ ಕಲಬುಗಿರ, ವಿಜಯ ಕವಿಶೆಟ್ಟಿ, ಶ್ಯಾಮಸುಂದರ ಭಜಂತ್ರಿ ಇದ್ದರು.