ಹಟ್ಟಿಚಿನ್ನದಗಣಿ: ಬಿರುಬಿಸಿಲಿನ ಶಾಖಕ್ಕೆ ಬಸವಳಿದಿದ್ದ ಪಟ್ಟಣದ ಜನರಿಗೆ ಶುಕ್ರವಾರ ಸುರಿದ ಅಕಾಲಿಕ ಮಳೆ ತಂಪಿನ ಅನುಭವ ನೀಡಿತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ ಬಿಬಿಎಂಪಿ ಸಹಾಯವಾಣಿ 1533ಗೆ ಕರೆ ಮಾಡಿ.. BBMP Helpline
ಇದ್ದಕ್ಕಿದಂತೆ ಮೊಡಕವಿದ ವಾತಾವರಣ ನಿರ್ಮಾಣವಾಗಿ ಗುಡುಗು, ಮಿಂಚು, ಸಿಡಿಲು, ಬಿರುಗಾಳಿಯಿಂದ ಕೂಡಿದ ಮಳೆ ಸಾಯಂಕಾಲದವರೆಗೆ ಸುರಿಯಿತು. ಮಳೆಯಿಂದ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿಯಿತು. ವರ್ಷದ ಪ್ರಥಮ ಮಳೆಯಲ್ಲಿ ಮಕ್ಕಳು ಆಟವಾಡುವ ದೃಶ್ಯ ಕಂಡುಬಂತು.
ಕೆಲವೆಡೆ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಗುಡುಗು ಸಿಡಿಲಾರ್ಭಟಕ್ಕೆ ಪಟ್ಟಣದಲ್ಲಿ ಸಂಪೂರ್ಣ ವಿದ್ಯುತ್ ಕಡಿತಗೊಳಿಸಲಾಗಿತ್ತು. ಮಳೆಯ ಆರ್ಭಟಕ್ಕೆ ಜನರು ಮನೆಯಿಂದ ಹೊರಬರಲು ಹೆದರುವಂತಾಯಿತು.