ಹೊನ್ನಾವರ: ವಿದ್ಯಾರ್ಥಿಗಳ ಮಾನಸಿಕ ಒತ್ತಡ ಕಡಿಮೆ ಮಾಡಿ ಅವರನ್ನು ಸಂಸ್ಕಾರಯುಕ್ತ ಪ್ರಜೆಗಳನ್ನಾಗಿಸಬೇಕು ಎಂದು ಶೈಕ್ಷಣಿಕ ಸಲಹೆಗಾರ ಎಸ್.ಜೆ. ಕೈರನ್ ಹೇಳಿದರು.
ತಾಲೂಕಿನ ಅರೆಅಂಗಡಿಯ ಎಸ್‌ಎಸ್‌ಕೆಪಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ವಿವಿಧ ತರಗತಿಗಳ ಉದ್ಘಾಟನೆ, ಪಾಲಕರ ಸಭೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ರಾಮದಾಸ ಆಚಾರಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರ ಮತ್ತು ಪಾಲಕರ ಪಾತ್ರ ಮಹತ್ವವಾದುದು ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮುಖ್ಯಾಧ್ಯಾಪಕಿ ಶೈಲಾ ಹೆಗಡೆ ಸ್ವಾಗತಿಸಿದರು. ದಿವ್ಯ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಶಾಂತಿಕಾ ಹೆಗಡೆ ವಂದಿಸಿದರು.