ಸಾಗರ: ಶುಚಿ-ರುಚಿಯಾದ ಆಹಾರವನ್ನು ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟ ನೌಕರರ ಕೆಲಸ ಸಾರ್ಥಕವಾದುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಅಜಿತ ಸಭಾಭವನದಲ್ಲಿ ಶನಿವಾರ ತಾಲೂಕು ಪಂಚಾಯಿತಿ ಮತ್ತು ಅಕ್ಷರ ದಾಸೋಹದಿಂದ ಆಯೋಜಿಸಿದ್ದ ಅಡುಗೆ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣದ ಜತೆ ಆಹಾರವೂ ಮುಖ್ಯ. ಅಕ್ಷರ ದಾಸೋಹ ಸರ್ಕಾರದ ಅತಿಮುಖ್ಯವಾದ ಯೋಜನೆ. ಈ ಮಹತ್ವಾಕಾಂಕ್ಷಿ ಯೋಜನೆ ಯಶಸ್ವಿಗೊಳಿಸುವಲ್ಲಿ ನಿಮ್ಮ ಪಾತ್ರ ಪ್ರಮುಖವಾದುದು ಎಂದರು.
ಅಡುಗೆ ಮಾಡುವಾಗ ಶುಚಿ-ರುಚಿ ಪಾಲನೆ ಮಾಡುವ ಜತೆಗೆ ಮಕ್ಕಳು ಅಡುಗೆ ತಯಾರಿಸುವ ಜಾಗದಲ್ಲಿ ಬಾರದಂತೆ ಗಮನವಹಿಸಬೇಕು. ನೀವು ಸಹ ಹೆಚ್ಚು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕು. ಅಡುಗೆಯವರದು ಸಾಕಷ್ಟು ಸಮಸ್ಯೆಗಳಿವೆ. ಅದನ್ನು ನನ್ನ ಗಮನಕ್ಕೂ ಕಾಲಕಾಲಕ್ಕೆ ತಂದಿದ್ದೀರಿ. ನಿಮ್ಮ ಧ್ವನಿಯಾಗಿ ಸರ್ಕಾರದ ಜತೆ ಮಾತುಕತೆ ನಡೆಸುತ್ತೇನೆ. ನಿಮಗೆ ವಹಿಸಿರುವ ಹೊಣೆಗಾರಿಕೆ ಜವಾಬ್ದಾರಿಯಿಂದ ನಿಭಾಯಿಸಿ ಎಂದು ತಿಳಿಸಿದರು.
ತಾಪಂ ಇಒ ಶಿವಪ್ರಕಾಶ್, ಬಿಇಒ ಪರಶುರಾಮಪ್ಪ, ಸಮನ್ವಯಾಧಿಕಾರಿ ಡಾ. ಅನ್ನಪೂರ್ಣ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭೂಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶ್, ಕೆ.ಜಗನ್ನಾಥ್, ಪರಮೇಶ್ವರ ಹೊಸಕೊಪ್ಪ, ಶೋಭಾ, ವಿ.ಟಿ.ಸ್ವಾಮಿ, ಎಚ್.ಬಿ.ದಿನೇಶ್ ಇತರರಿದ್ದರು.
ಮಕ್ಕಳಿಗೆ ಶುಚಿ-ರುಚಿ ಆಹಾರ ನೀಡಿ

1 ರೂ. ಖರ್ಚು ಮಾಡದೆ ನಿಮ್ಮ ಕೂದಲು ದಪ್ಪವಾಗಿ, ಸೊಂಪಾಗಿ ಬೆಳೆಯಲು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯೇ? Hair Tips
Hair Tips: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೂದಲು ಉದುರುವುದನ್ನು…
ಬೇಸಿಗೆಯಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ? ಈ ವಿಷಯ ನೆನಪಿರಲಿ… traveling at night
traveling at night : ರಾತ್ರಿಯಲ್ಲಿ ಹೆಚ್ಚಿನ ರಸ್ತೆಗಳು ಖಾಲಿಯಾಗಿರುತ್ತವೆ, ಸಂಚಾರ ಕಡಿಮೆ ಇರುತ್ತದೆ ಮತ್ತು ಪ್ರಯಾಣವನ್ನು…
ಮಾರ್ಚ್ 29ರಂದು ಷಷ್ಠ ಗ್ರಹ ಕೂಟ… ಅಪ್ಪಿತಪ್ಪಿಯೂ ಆ ದಿನ ಈ ತಪ್ಪುಗಳನ್ನು ಮಾಡಬೇಡಿ! Shasta Graha Koota
Shasta Graha Koota : ಮಾರ್ಚ್ 29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದೇ ದಿನ ಷಷ್ಠ ಗ್ರಹ…