ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ

blank

ಮೂಡಿಗೆರೆ: ತಮ್ಮ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದರೆ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ಶೃಂಗೇರಿ ಆದಿಚುಂಚನಗಿರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಬಿಜಿಎಸ್ ವಿಎಸ್ ಶಿಕ್ಷಣ ಸಂಸ್ಥೆ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಇಂದು ಭವಿಷ್ಯ ಕೇಳುವವರು ಹೆಚ್ಚಾಗಿದ್ದಾರೆ. ಅಂತಹ ಭವಿಷ್ಯ ಕೇಳುವ ಅಗತ್ಯವಿಲ್ಲ. ಡಾ.ಬಾಲಗಂಗಾಧರನಾಥ ಸ್ವಾಮೀಜಿ ಯಾರಿಗೂ ಭವಿಷ್ಯ ನುಡಿದಿಲ್ಲ. ಬದಲಿಗೆ ಜಾತಿ, ಮತ, ಬಡವ, ಶ್ರೀಮಂತರೆಂಬ ಭಾವನೆ ಬಿಟ್ಟು ಸರ್ವ ಜನಾಂಗದ ಮಕ್ಕಳಿಗೆ ಶಿಕ್ಷಣ ನೀಡಿ ಉತ್ತಮ ಭವಿಷ್ಯ ರೂಪಿಸಿದ್ದಾರೆ ಎಂದು ಹೇಳಿದರು.
ಮಠದ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವರ ಭವಿಷ್ಯಕ್ಕೆ ಇದುವರೆಗೂ ಕೆಡುಕಾಗಿಲ್ಲ. ಮನುಷ್ಯ ಶರೀರದ ಪ್ರತಿಯೊಂದು ಅಂಗಗಳು ಕಣ್ಣಿಗೆ ಕಾಣುತ್ತದೆ ಹೊರತು ಮನಸ್ಸಿನ ಭಾವನೆ ಯಾರಿಗೂ ಕಾಣುವುದಿಲ್ಲ. ಪ್ರತಿಯೊಬ್ಬರೂ ನಿರ್ಮಲ ಮನಸ್ಸನ್ನು ಹೊಂದಿರಬೇಕು. ಮನಸ್ಸಿನಲ್ಲಿ ಚಿಂತನ-ಮಂಥನಗಳನ್ನು ಶೇಖಕರಿಸಿಡಲು ಉತ್ತಮ ಶಿಕ್ಷಣ ಪಡೆಯಬೇಕಾಗುತ್ತದೆ. ಹಾಗಾದರೆ ಮಾತ್ರ ವಿವೇಕವನ್ನು ಬೆಳೆಸಿಕೊಳ್ಳುವುದು ಸಾಧ್ಯವಿದೆ. ವಿವೇಕದಿಂದ ಮನಸ್ಸಿಗೆ ಸಂತೋಷ ಉಂಟಾಗುತ್ತದೆ. ಅವಿವೇಕತನದಿಂದ ನಿರಂತರವಾಗಿ ದುಃಖ ಅನುಭವಿಸಬೇಕಾಗುತ್ತದೆ. ಕೈ ಕಾಲು ಇಲ್ಲದವರೂ ಕೂಡ ಮೌಂಟ್‌ಎವರೆಸ್ಟ್ ಏರಿದ್ದಾರೆ. ಎಲ್ಲ ಅಂಗಗಳಿದ್ದರೂ ಕೂಡ ಭವಿಷ್ಯ ರೂಪಿಸಿಕೊಳ್ಳಲಾಗದವರು ಸಮಾಜಕ್ಕೆ ಕಂಟಕರಾಗುತ್ತಾರೆ ಎಂದರು.
ಮುಖಂಡರಾದ ಎನ್.ಎಲ್.ಸುಂದರೇಶ್ವರ್, ಕೆ.ವಿ.ವೆಂಕಟೇಶ್, ಡಾ.ಅನಂತ ಪದ್ಮನಾಭ, ಎಂ.ಎಲ್.ಪುಣ್ಯಮೂರ್ತಿ, ಎಚ್.ಜಿ.ಸುರೇಂದ್ರ, ಎಂ.ಪಿ.ಮನು, ಹಳೆಕೋಟೆ ರಮೇಶ್, ದುಗ್ಗಪ್ಪಗೌಡ, ಜಯಪಾಲ್, ದೇವದತ್, ಬಿಜಿಎಸ್ ವಿಎಸ್ ಕಾಲೇಜ್ ಪ್ರಾಚಾರ್ಯ ಎಂ.ಆರ್.ಸಂದ್ರೇಶ್, ಪ್ರಾಥಮಿಕ ಮತ್ತು ಪ್ರೌಢಶಾಲೆ ಪ್ರಾಚಾರ್ಯ ರಮೇಶ್ ಕುಮಾರ್, ಮಹದೇವ ಬಡಿಗೇರ್ ಇತರರಿದ್ದರು.

Share This Article

ನಿಮ್ಮ ಸ್ಮಾರ್ಟ್​ಫೋನ್​ ನಿಮ್ಮ ಫಿಟ್​ನೆಸ್​ ಕೋಚ್​… ಆಶ್ಚರ್ಯವಾಯಿತೇ? ಇಲ್ಲಿದೆ ಅಚ್ಚರಿ ಮಾಹಿತಿ… Smartphone

Smartphone : ಸ್ಮಾರ್ಟ್‌ಫೋನ್‌ಗಳ ಮೇಲಿನ ಅವಲಂಬನೆ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ಅಧ್ಯಯನದ ಪ್ರಕಾರ, 2040ರ…

ಈ ದಿನಾಂಕಗಳಂದು ಜನಿಸಿದವರು ತಮ್ಮ ಬುದ್ಧಿವಂತಿಕೆಯಿಂದಾಗಿ ರಾಯಲ್​ ಲೈಫ್​ ನಡೆಸುತ್ತಾರೆ! Numerology

Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವೂ…

ನೀವು ಬೆಳಿಗ್ಗೆ ತಿಂಡಿಯನ್ನು ತಡವಾಗಿ ತಿನ್ನುತ್ತೀರಾ? ಎಚ್ಚರ..ಈ ಕಾಯಿಲೆ ಬರೋದು ಪಕ್ಕಾ… breakfast

breakfast: ಬೆಳಗಿನ ಉಪಾಹಾರವು ದೇಹಕ್ಕೆ ಬಹಳ ಮುಖ್ಯ. ಯಾವುದೇ ಕಾರಣಕ್ಕೂ ಉಪಹಾರವನ್ನು ಬಿಡಬಾರದು. ತಡವಾಗಿ ತಿನ್ನುವುದು…