ಮಕ್ಕಳಿಗೆ ಸಂಸ್ಕಾರ ನೀಡಿ ಆದರ್ಶರಾಗಿ ಬೆಳೆಸಿ-ರಾಷ್ಟ್ರಸಂತ ಚಿನ್ಮಯ ಸಾಗರ ಮಹಾರಾಜರು

ಕಾಗವಾಡ: ಶಿಕ್ಷಕರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುವದರ ಜತೆಗೆ ಉತ್ತಮ ಸಂಸ್ಕಾರ ನೀಡಿ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸುವಂತೆ ಶ್ರೀ 108 ರಾಷ್ಟ್ರಸಂತ ಚಿನ್ಮಯ ಸಾಗರ ಮಹಾರಾಜರು ಕರೆ ನೀಡಿದರು.

ಶೇಡಬಾಳ ಪಟ್ಟಣದ ಶಾಂತಿಸಾಗರ ಆಶ್ರಮದಲ್ಲಿ ಗುರುವಾರ ಜಿಪಂ ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಾಗವಾಡ, ಶಾಂತಿಸಾಗರ ಆಶ್ರಮ ಶೇಡಬಾಳ, ಆಚಾರ್ಯ ಚಿನ್ಮಯಸಾಗರ ಚಾರಿಟೆಬಲ್ ಟ್ರಸ್ಟ್ ಭಾಟಾಪಾರ ಇವರ ಆಶ್ರಯದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅಮೂಲ್ಯವಾಗಿದೆ. ಜನ್ಮ ನೀಡಿದ ತಂದೆ, ತಾಯಿ ಹಾಗೂ ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ ಎಂದರು.

ಕವಲಗುಡ್ಡ ಹಣಮಾಪುರದ ಸಿದ್ಧಾಶ್ರಮ ಸಿದ್ದಯೋಗಿ ಅಮರೇಶ್ವರ ಮಹಾರಾಜರು, ಕಾಗವಾಡ ಮಲ್ಲಿಕಾರ್ಜುನ ಆಶ್ರಮದ ಯತೀಶ್ವರಾನಂದ ಸ್ವಾಮೀಜಿ ಮಾತನಾಡಿದರು. ಹಾರೂಗೇರಿಯ ಬಿ.ಆರ್.ದರೂರ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ವಿ.ಎಸ್.ಮಾಳಿ ಉಪನ್ಯಾಸ ನೀಡಿದರು. ಗಣ್ಯರು ಡಾ.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ನಿವೃತ್ತ ಶಿಕ್ಷಕರ ಸನ್ಮಾನ, ಗುರುವಂದನೆ ಕಾರ್ಯಕ್ರಮ ಜರುಗಿತು. ಬಿಇಒ ಎ.ಎಸ್.ಜೋಡಗೇರಿ, ದೈಹಿಕ ಶಿಕ್ಷಣ ಪರೀವಿಕ್ಷಕ ಸಿ.ಎಂ.ಸಾಂಗಲಿ, ಕ್ಷೇತ್ರ ಸಮನ್ವಯಾಧಿಕಾರಿ ರವೀಂದ್ರ ಖಡಾಖಡಿ, ಶಿಕ್ಷಣ ಸಂಯೋಜನಾಧಿಕಾರಿ ಬಿ.ಎಸ್.ಪಾಟೀಲ, ಸಿ.ಎ.ಪರಸನ್ನವರ, ಎ.ಕೆ.ಕಾಂಬಳೆ, ಜಿ.ಎಂ.ಸಿಂಧೆ, ಜೆ.ಎಂ.ಸಡ್ಡಿ, ಎಲ್.ವೈ.ಚೌಗಲಾ, ಜಿ.ವೈ.ತಳವಾರ, ಸಿ.ಎಂ.ಸಂತೋಷ, ರಾಜು ನಾಂದ್ರೆ, ಸುಮಲತಾ ಮೋದಿ, ಸುಧಾಕರ ಭಗತ, ಶಶಿಕಾಂತ

ಶಿರಗಾಂವೆ, ನಿರ್ಮಲಕುಮಾರ ಜೈನ, ಆರ್.ಡಿ.ಸೋಲಂದಕರ, ಎ.ಡಿ.ಕಾಂಬಳೆ ಇತರರು ಇದ್ದರು.
ಶಾಂತಿ ಸಾಗರ ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿನಿಯವರು ಸ್ವಾಗತ ಗೀತೆ ಹಾಡಿದರು. ಬಿಇಒ ಎ.ಎಸ್.ಜೋಡಗೇರಿ ಸ್ವಾಗತಿಸಿದರು. ಸಿ.ಎಂ.ಸಾಂಗಲಿ ವಂದಿಸಿದರು. ಎಲ್.ಡಿ. ಬಬಲಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *