More

    ಸುಗಮ ಜೀವನಕ್ಕೆ ಗೀತೆ ಸಹಕಾರಿ

    ಹುಬ್ಬಳ್ಳಿ: ಭಗವದ್ಗೀತೆಯ ಪ್ರತಿ ಅಕ್ಷರವೂ ಅರ್ಥಪೂರ್ಣ ಮತ್ತು ಸುಗಮ ಜೀವನಕ್ಕೆ ಪ್ರಯೋಜನಕಾರಿ ಎಂದು ಉದ್ಯಮಿ ಉಷಾ ಹೆಗಡೆ ಅವರು ಅಭಿಪ್ರಾಯಪಟ್ಟರು.
    ಭಗವದ್ಗೀತಾ ಅಭಿಯಾನ ಸಮಿತಿ ಆಶ್ರಯದಲ್ಲಿ ಇಲ್ಲಿನ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಭಗವದ್ಗೀತೆ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ನಮ್ಮ ಜೀವನಕ್ಕೆ ಹೊಸ ಅಯಾಮ ನೀಡುವಲ್ಲಿ ಭಗವದ್ಗೀತೆ ಮಹತ್ವದ ಪಾತ್ರ ವಹಿಸುತ್ತದೆ. ಭಕ್ತಿ, ಜ್ಞಾನ, ಯೋಗ ಮತ್ತು ಕರ್ಮವನ್ನು ಅರ್ಜುನನಿಗೆ ಶ್ರೀಕೃಷ್ಣ ಹೇಳುವ ಮೂಲಕ ಸಮಗ್ರವಾಗಿ ಗೀತೆಯಲ್ಲಿ ವಿವರಿಸಿದ್ದಾನೆ. ಆದ್ದರಿಂದ ಇದು ಜ್ಞಾನ-ಭಕ್ತಿಯ ಗಣಿ ಎಂದರು.
    ಅಭಿಯಾನ ಸಮಿತಿಯ ಗೌರವಾಧ್ಯಕ್ಷ ಗೋವಿಂದ ಜೋಶಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಗವದ್ಗೀತೆ ಮನಸ್ಸನ್ನು ಶುದ್ಧಗೊಳಿಸುವ ಸಾಧನ. ನಮ್ಮ ಅನೇಕ ಸಮಸ್ಯೆಗಳಿಗೆ ಇಲ್ಲಿ ಉತ್ತರಗಳಿವೆ. ಎಲ್ಲರೂ ಭಗವದ್ಗೀತೆಯನ್ನು ಅಧ್ಯಯನ ಮಾಡಬೇಕು ಎಂದರು.
    ಅರವಿಂದ ಮುತ್ತಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಹವ್ಯಕ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುದರ್ಶನ ಜಿ.ಎಚ್. ಸ್ವಾಗತಿಸಿದರು. ವೀಣಾ ಹೆಗಡೆ ನೇತೃತ್ವದಲ್ಲಿ ಗೀತೆಯ ಹತ್ತನೆಯ ಅಧ್ಯಾಯದ ಪಾರಾಯಣ ನಡೆಯಿತು.
    ಸಮೀರ ಗುಮಾಸ್ತೆ, ನಾರಾಯಣ ದೀಕ್ಷಿತ, ಮನೋಹರ ಪರ್ವತಿ, ಗೋಪಾಲಕೃಷ್ಣ ಹೆಗಡೆ, ಟಿ.ಎಸ್. ಭಟ್, ನಿರ್ದೇಶಕ ಅರುಣಕುಮಾರ ಹಬ್ಬು, ಸಂಜೀವ ಜೋಶಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts