ಯುವತಿಯರನ್ನು ಚುಡಾಯಿಸಿದ ಮೂವರು ಪುಂಡರಿಗೆ ಗ್ರಾಮಸ್ಥರಿಂದ ಗೂಸ

ಬೆಂಗಳೂರು: ಯುವತಿಯರನ್ನು ಚುಡಾಯಿಸುತ್ತಿದ್ದ ಮೂವರು ಯುವಕರನ್ನು ಹಿಡಿದ ಗ್ರಾಮಸ್ಥರು ಅವರನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ್ದಾರೆ.

ನೆಲಮಂಗಲದ ಗೆದ್ದಲಹಳ್ಳಿ ಬಳಿ ಘಟನೆ ನಡೆದಿದ್ದು, ಅರವಿಂದ, ಭರತ್, ಹರೀಶ ಥಳಿತಕ್ಕೊಳಗಾದ ಯುವಕರು. ಕಾಲೇಜು ಮುಗಿಸಿ ಬಸ್​ನಲ್ಲಿ ಮನೆಗೆ ತೆರಳುತ್ತಿದ್ದ ಇಬ್ಬರು ಯುವತಿಯರನ್ನ ಚುಡಾಯಿಸಿದ್ದ ಯುವಕರಿಗೆ ಬುದ್ಧಿ ಕಲಿಸಲು ಗ್ರಾಮಸ್ಥರು ಈ ಕೆಲಸ ಮಾಡಿದ್ದು, ನಂತರ ಅವರೇ ಪೊಲೀಸರಿಗೆ ಒಪ್ಪಿಸಿದ್ದಾರೆ.

ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)