ಬಿಹಾರ ವಿದ್ಯಾರ್ಥಿನಿಯರ ಮೇಲೆ ಹಲ್ಲೆ: 9 ಜನರ ಬಂಧನ

ಪಟನಾ: ಬಿಹಾರದ ವಸತಿ ಶಾಲೆಗೆ ನುಗ್ಗಿ 36 ಬಾಲಕಿಯರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಪಟ್ಟ 9 ಜನರನ್ನು ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಕಸ್ತೂರಬಾ ವಸತಿ ಶಾಲೆಗೆ ನುಗ್ಗಿದ ಹುಡುಗರು ಅಲ್ಲಿನ ಬಾಲಕಿಯರ ಜತೆ ಕೆಟ್ಟದಾಗಿ ವರ್ತಿಸಿದ್ದರು. ಅವರಿಂದ ತಪ್ಪಿಸಿಕೊಳ್ಳಲು ಬಾಲಕಿಯರು ಅವರಿಗೆ ಹೊಡೆದಿದ್ದರು. ಸಿಟ್ಟಾದ ಹುಡುಗರು ಪಾಲಕರ ಜತೆ ಬಂದು ಅಲ್ಲಿನ 36 ಬಾಲಕಿಯರ ಮೇಲೆ ಹಲ್ಲೆ ನಡೆಸಿದ್ದರು. ಘಟನೆಗೆ ಸಂಬಂಧಪಟ್ಟಂತೆ 9 ಜನರನ್ನು ಬಂಧಿಸಿದ್ದೇವೆ. ಅವರ ಮೆಟ್ರಿಕ್​ ಪ್ರಮಾಣ ಪತ್ರಗಳನ್ನು ಬೇರೆಯವರಿಂದ ಪಡೆದಿದ್ದೇವೆ. ಉಳಿದವರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಯಾರೇ ಮುಗ್ಧರು, ನಿರಪರಾಧಿಗಳನ್ನು ವಶಕ್ಕೆ ಪಡೆಯಲು ಇಷ್ಟವಿಲ್ಲ ಎಂದಿದ್ದಾರೆ.

ಹಲ್ಲೆ ನಡೆಸುವಲ್ಲಿ ಹುಡುಗರ ಪಾಲಕರು ಮುಖ್ಯ ಪಾತ್ರ ವಹಿಸಿದ್ದಾರೆ. ಬಾಲಕಿಯರು ಮೈದಾನದಲ್ಲಿ ಆಟವಾಡುತ್ತಿದ್ದಾಗ ಹೋಗಿ ಹೊಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ವಸತಿ ಶಾಲೆಯ 34 ವಿದ್ಯಾರ್ಥಿನಿಯರ ಮೇಲೆ ಸ್ಥಳೀಯರಿಂದ ಹಲ್ಲೆ: ಆಸ್ಪತ್ರೆಗೆ ದಾಖಲು